ದ.ಕ.: ಜು. 1ರಿಂದ ಸೀಮಿತ ಖಾಸಗಿ, ಸಿಟಿ ಬಸ್ ಸಂಚಾರ
Team Udayavani, Jun 25, 2021, 7:00 AM IST
ಮೂಡುಬಿದಿರೆ / ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮತ್ತು ಸಿಟಿ ಬಸ್ ಸಂಚಾರ ಜುಲೈ 1ರಿಂದ ಸೀಮಿತ ಸಂಖ್ಯೆಯಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ. ಗುರುವಾರ ಮೂಡುಬಿದಿರೆಯಲ್ಲಿ ನಡೆದ ಬಸ್ ಮಾಲಕರ ಸಂಘದ ಸಭೆಯಲ್ಲಿ ಇದಕ್ಕೆ ಬಹುತೇಕ ಮಾಲಕರು ಒಪ್ಪಿಗೆ ಸೂಚಿಸಿದ್ದಾರೆ.
ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, “ಜು. 1ರಿಂದ ಖಾಸಗಿ ಬಸ್‌ಗಳು ಸೇರಿದಂತೆ ಮಂಗಳೂರು ನಗರದಲ್ಲಿ ಸಿಟಿ ಬಸ್‌ಗಳು ಸೀಮಿತ ಸಂಖ್ಯೆಯಲ್ಲಿ ಕಾರ್ಯಾಚರಣೆ ಆರಂಭವಾಗುತ್ತದೆ. ತೆರಿಗೆ ವಿನಾಯಿತಿ ಸಹಿತ ಕೆಲವೊಂದು ಬೇಡಿಕೆಗಳನ್ನು ಈಗಾಗಲೇ ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಕೆಗೆ ಮತ್ತೂಮ್ಮೆ ಮನವಿ ಮಾಡುತ್ತೇವೆ ಎಂದಿದ್ದಾರೆ.
200ಕ್ಕೂ ಹೆಚ್ಚು ಕೆಎಸ್ಸಾರ್ಟಿಸಿ ಬಸ್ ಸಂಚಾರ:
ಗುರುವಾರ ದ.ಕ. ಜಿಲ್ಲೆಯಿಂದ ವಿವಿಧ ಭಾಗಗಳಿಗೆ 200ಕ್ಕೂ ಹೆಚ್ಚು ಬಸ್‌ಗಳು ಮಂಗಳೂರು, ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಉಡುಪಿ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಿಗೆ ಸಂಚರಿಸಿವೆ. ಜಿಲ್ಲಾ ವ್ಯಾಪ್ತಿಯೊಳಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಬಸ್ ಕಾರ್ಯಾಚರಣೆ ನಡೆಸಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮಂಗಳೂರು ನಗರದಲ್ಲಿ ನರ್ಮ್ ಬಸ್ ಕಾರ್ಯಾಚರಣೆ ನಡೆಸಿತು.
ಉಡುಪಿ: ಹೆಚ್ಚು ಬಸ್‌ಗಳ ಸಂಚಾರ:
ಉಡುಪಿಯಿಂದ ಗುರುವಾರ ಇನ್ನಷ್ಟು ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಆರಂಭವಾಗಿದೆ. ಬೆಂಗಳೂರಿಗೆ 20, ಕಾರ್ಕಳಕ್ಕೆ 8, ಕುಂದಾಪುರಕ್ಕೆ 9, ಮಂಗಳೂರಿಗೆ 6, ಶಿವಮೊಗ್ಗಕ್ಕೆ 4, ಶೀರೂರು-ಆಗುಂಬೆ, ಶೃಂಗೇರಿ ಬಾಳೆಹೊನ್ನೂರು, ಚಿಕ್ಕಮಗಳೂರಿಗೆ ಸಂಚರಿಸುತ್ತಿವೆ. ಹೆಬ್ರಿ ಭಾಗಕ್ಕೆ ನರ್ಮ್ ಬಸ್‌ಗಳು ಸಂಚರಿಸುತ್ತಿದ್ದು, ಸೋಮವಾರದಿಂದ ನಗರದೊಳಗೂ ಹೆಚ್ಚಿನ ಸಂಖ್ಯೆಯಲ್ಲಿ ನರ್ಮ್ ಬಸ್‌ಗಳನ್ನು ಓಡಿಸಲು ಕೆಎಸ್ಸಾರ್ಟಿಸಿ ಚಿಂತನೆ ನಡೆದಿದೆ.
ಹೈದರಾಬಾದ್, ಮಂತ್ರಾಲಯಕ್ಕೆ ಬಸ್ ಆರಂಭ :
ಉಡುಪಿ: ಕರ್ನಾಟಕ ರಾಜ್ಯ ಸಾರಿಗೆ ನಿಗಮವು ಮಂಗಳೂರು- ಹೈದರಾಬಾದ್, ಮಂಗಳೂರು- ಮಂತ್ರಾಲಯ ಮಾರ್ಗದಲ್ಲಿ ಜೂ. 25ರಿಂದ ಬಸ್ ಸಂಚಾರ ಪ್ರಾರಂಭಿಸಿದೆ.
ಅಂಬಾರಿ ಡ್ರೀಮ್ ಕ್ಲಾಸ್ ವೋಲ್ವೋ ಎಸಿ ಸ್ಲಿàಪರ್ ಮಧ್ಯಾಹ್ನ 3ಕ್ಕೆ ಮಂಗಳೂರಿನಿಂದ ಹೊರಟು ಉಡುಪಿ, ಮಣಿಪಾಲ, ಕುಂದಾ ಪುರ, ಕುಮಟಾ, ಹುಬ್ಬಳ್ಳಿ, ರಾಯಚೂರು, ಮೆಹಬೂಬನಗರ ಮಾರ್ಗವಾಗಿ ಬೆಳಗ್ಗೆ 9ಕ್ಕೆ ಹೈದರಾಬಾದ್ ತಲುಪಲಿದೆ. ಮರು ಪ್ರಯಾಣದಲ್ಲಿ ಸಂಜೆ 5ಕ್ಕೆ ಹೈದರಾಬಾದ್‌ನಿಂದ ಹೊರಟು ಅದೇ ಮಾರ್ಗವಾಗಿ ಬೆಳಗ್ಗೆ 10ಕ್ಕೆ ಮಂಗಳೂರು ತಲುಪಲಿದೆ.
ನಾನ್ ಎಸಿ ಸ್ಲೀಪರ್ ಬಸ್ ಮಧ್ಯಾಹ್ನ 3.30ಕ್ಕೆ ಮಂಗಳೂರಿನಿಂದ ಹೊರಟು ಉಡುಪಿ, ಕುಂದಾಪುರ, ಸಿದ್ದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಮಾರ್ಗವಾಗಿ ಬೆಳಗ್ಗೆ 6.30ಕ್ಕೆ ಮಂತ್ರಾಲಯ ತಲುಪಲಿದ್ದು, ಮರು ಪ್ರಯಾಣದಲ್ಲಿ ಸಂಜೆ 5ಕ್ಕೆ ಮಂತ್ರಾಲಯದಿಂದ ಹೊರಟು ಅದೇ ಮಾರ್ಗವಾಗಿ ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪಲಿದೆ.
ಆನ್‌ಲೈನ್ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯಕ್ಕೆ www.ksrtc.in ಅಥವಾ ಹತ್ತಿರದ ರಿಸರ್ವೇಶನ್ ಕೌಂಟರನ್ನು ಸಂಪರ್ಕಿಸುವಂತೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿ ಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.