![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 25, 2019, 5:06 AM IST
ಕಿನ್ನಿಗೋಳಿ: ಜ್ಞಾನ ಸೃಷ್ಟಿ ವಿತರಣೆ ಆಗುವುದು ವಿಶ್ವವಿದ್ಯಾನಿಲಯಗಳಲ್ಲಿ ಎಂಬುದು ಭ್ರಮೆ, ಕಿನ್ನಿಗೋಳಿ ಯುಗಪುರುಷದಂತಹ ಕೇಂದ್ರಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ಜ್ಞಾನ ಸೃಷ್ಟಿ ವಿತರಣೆ ಆಗುತ್ತಿದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಭಾರ ಕುಲಸಚಿವರಾಗಿದ್ದ ಪ್ರೊ| ಎ.ವಿ. ನಾವಡ ಅವರು ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬುಧವಾರ ನಡೆದ ಸಮಾ ರಂಭದಲ್ಲಿ ಅವರು ಯುಗಪುರುಷ ಸಂಸ್ಥಾಪಕ ದಿ| ಕೊ.ಅ. ಉಡುಪ ಪ್ರಶಸ್ತಿ,10 ಸಾವಿರ ರೂ. ನಗದು, ಗೌರವ ಫಲಕ, ಪ್ರಶಸ್ತಿ ಪತ್ರ ಸ್ವೀಕರಿಸಿ ಮಾತ ನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಸಾಹಿತ್ಯ ಪ್ರೋತ್ಸಾಹಿಸಲು ಯುಗ ಪುರುಷದಂತಹ ಪತ್ರಿಕೆಗಳು ವೇದಿಕೆ ಒದಗಿಸಿದ್ದರಿಂದ ಸಾಹಿತಿಗಳು ಬೆಳಕಿಗೆ ಬಂದಿದ್ದಾರೆ ಎಂದರು.
ಸುರತ್ಕಲ್‌ನ ದಿ ಒರಿಯೆಂಟಲ್ ಇನ್ಶೂರೆನ್ಸ್ ಕಂಪೆನಿಯ ಹಿರಿಯ ಶಾಖಾ ಪ್ರಬಂಧಕ ಯಾದವ ದೇವಾಡಿಗ ಅವರು ದಿ| ಕೊ.ಅ. ಉಡುಪರ ಸಂಸ್ಮರಣೆ ಮಾಡಿದರು.
ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಪಡುಬಿದ್ರಿ ಶ್ರೀ ಖಡೆYàಶ್ವರೀ ದೇವಳದ ಒಂದನೇ ಪಾತ್ರಿ ಪಿ.ಜಿ. ನಾರಾಯಣ ರಾವ್ ಅವರನ್ನು ಕಟೀಲು ದೇವಳದ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಸಮ್ಮಾನಿಸಿದರು.
ಬೆಂಗಳೂರು ಎಂ.ವಿ. ಭಟ್ (ಶ್ರೀ ಮಿತ್ತೂರು)ರವರ “ದುಡಿಮೆಯೇ ದೇವರು’ ಹಾಗೂ ದೇವೇಂದ್ರ ಅಮೀನ್‌ರವರ “ಮಾಯದ ಮಾಣಿಕ್ಯ’ ಕೃತಿಯನ್ನು ಈ ಸಂದರ್ಭ ಹಿರಿಯ ಸಾಹಿತಿ ಕೆ.ಜಿ. ಮಲ್ಯ ಅವರು ಅನಾವರಣಗೊಳಿಸಿದರು.ಜೋತಿಷಿ ರಂಗ ಐತಾಳ್, ಸಂತೋಷ್‌ಕುಮಾರ್ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ, ಜಗದೀಶ್ಚಂದ್ರ ಅಂಚನ್, ಡಾ| ನಯನಾಭಿರಾಮ ಉಡುಪ, ಪದ್ಮನಾಭ ಉಡುಪ ಉಪಸ್ಥಿತರಿದ್ದರು.
ಯುಗಪುರುಷದ ಪ್ರಧಾನ ಸಂಪಾ ದಕ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ಅನುಷಾಕೊಡೆತ್ತೂರು ಹಾಗೂ ಗುರುಪ್ರಸಾದ್ ಭಟ್ ಸಮ್ಮಾನ ಪತ್ರ ವಾಚಿಸಿದರು. ಶರತ್ ಕಾರ್ಯಕ್ರಮ ನಿರೂಪಿಸಿದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.