ಸ್ವಚ್ಛ ಗ್ರಾಮ ಯೋಜನೆಗೆ ತೊಡಕು: ರಸ್ತೆಯುದ್ದಕ್ಕೂ ತ್ಯಾಜ್ಯ ರಾಶಿ
Team Udayavani, Jun 16, 2019, 5:06 AM IST
ಕಿನ್ನಿಗೋಳಿ: ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿಯ ಬಟ್ಟಕೋಡಿ ಜಂಕ್ಷನ್‌ನ ಅನತಿ ದೂರದಲ್ಲಿ ರಸ್ತೆಯದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯ,ಪೊಟ್ಟಣಗಳ ರಾಶಿಯೇ ಕಂಡು ಬರುತ್ತಿದೆ.
ಇಲ್ಲಿನ ಒಂದು ಪ್ರದೇಶ ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತಿದೆ.ಆದರೆ ಈ ಪ್ರದೇಶದಲ್ಲಿ ತ್ಯಾಜ್ಯ ರಾಶಿ ಬಿದ್ದಿದ್ದು,ಪಂಚಾಯತ್‌ಗೆ ಸಮಸ್ಯೆಯಾಗಿದೆ. ಅನತಿ ದೂರದಲ್ಲಿ ಬಹು ಮಹಡಿಯ ಕಟ್ಟಡಗಳು ಹಾಗೂ ಕಿನ್ನಿಗೋಳಿ ಪೇಟೆಯ ಅಂಗಡಿ ಮುಂಗಟ್ಟುಗಳ ಕಸವನ್ನು ಇಲ್ಲಿ ತಂದು ಬಿಸಾಡಲಾಗುತ್ತಿದೆ ಎನ್ನಲಾಗುತ್ತಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಇದೇ ಸಮಸ್ಯೆಗೆ ಗ್ರಾಮ ಪಂಚಾಯತ್ ತ್ಯಾಜ್ಯ ಬಿಸಾಡಬಾರದು ಎಂಬ ನಾಮ ಫಲಕ ಅಳವಡಿಸಲಾಗಿತ್ತು. ಕೆಲವು ಸಮಯ ಇಂತಹ ಸಮಸ್ಯೆ ಇರಲಿಲ್ಲ. ಆದರೆ ಈಗ ಮತ್ತೆ ತ್ಯಾಜ್ಯ ಬಿಸಾಡುವ ಸಮಸ್ಯೆ ಉಂಟಾಗಿದೆ.
ಎಸ್‌ಕೋಡಿ ವಾಸುದೇವ ಅಗ್ರಹಾರದ ಬಳಿಯೂ ಕಸದ ರಾಶಿ ಬಿದ್ದಿದ್ದು, ಇಲ್ಲಿ ಕೂಡ ಇದೇ ಸಮಸ್ಯೆ ಯಾಗಿದೆ ಎನ್ನುತ್ತಾರೆ ಸ್ಥಳೀಯರು. ಕಿನ್ನಿಗೋಳಿ ಪೇಟೆಯಲ್ಲಿನ ಅಂಗಡಿ, ಹೊಟೇಲ್‌ಗಳ ಕಸವನ್ನು ನಿತ್ಯವೂ ಪಂ. ವಾಹನದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಆದರೆ ಇಲ್ಲಿ ಕಸ ಹಾಕುವುದು ಸಮಸ್ಯೆಯಾಗಿದೆ.
ಸಾಂಕ್ರಾಮಿಕ ರೋಗ ಭೀತಿ
ಎಸ್‌ಕೋಡಿಯಲ್ಲಿ ವಾಸುದೇವ ಅಗ್ರಹಾರದಲ್ಲಿ 100 ಮನೆಗಳಿದ್ದು, ಗ್ರಾಮ ಪಂಚಾಯತ್‌ಗೆ ವರ್ಷಕ್ಕೆ ಕಸದ ವೀಲೆವಾರಿಗೆ 365 ರೂ. ಕಟ್ಟುತಿದ್ದಾರೆ. ಆದರೂ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರ ಆಗಿಲ್ಲ. ಅದಲ್ಲದೆ ಇಲ್ಲಿಗೆ ಪಂಚಾಯತ್ ವಾಹನವಾಗಲಿ ಬರುತ್ತಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಪ್ಲಾಸ್ಟಿಕ್‌ನೊ ಳಗೆ ಇದ್ದ ಕೆಲವು ತ್ಯಾಜ್ಯಗಳು ಕೊಳೆತು ದುರ್ನಾತ ಆರಂಭವಾಗಿದ್ದು, ಸೊಳ್ಳೆ ಉಪಟಳ ಪ್ರಾರಂಭವಾಗಿದೆ. ಇದು ಸಾಂಕ್ರಾಮಿಕ ರೋಗಕ್ಕೂ ಕಾರಣ ಆಗಬಹುದು ಎಂಬುದು ಸ್ಥಳೀಯರ ಭೀತಿಯಾಗಿದೆ.
ಸೂಕ್ತ ಕ್ರಮ
ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಮ್ರಾಲ್ ಪಂಚಾಯತ್ ಪರಿಸರ ಗಡಿಭಾಗವಿದ್ದು, ತ್ಯಾಜ್ಯ ತಂದು ಸುರಿಯವ ಪರಿಪಾಠ ಕೆಲವು ಸಮಯದಿಂದ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಅರುಣ್ ಪ್ರದೀಪ್ ಡಿ’ಸೋಜಾ, ಪಿಡಿಒ,ಕಿನ್ನಿಗೋಳಿ ಗ್ರಾಮ ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.