ಸಮಸ್ಯೆಗಳನ್ನೇ ಮೆಟ್ಟಿಲಾಗಿಸಿಕೊಂಡರೆ ಗೆಲುವು ಬಹಳ ಹತ್ತಿರ


Team Udayavani, Oct 26, 2018, 10:08 AM IST

2000.jpg

ಜೀವನದಲ್ಲಿ ಸೋಲು- ಗೆಲುವು ಇದ್ದದ್ದೇ. ಗೆಲುವಿನ ಹಾದಿಯಲ್ಲಿ ಸೋಲಿನ ಸ್ವಾಗತ ಇದ್ದೇ ಇರುತ್ತದೆ. ಹಾಗಂತ ಅಷ್ಟಕ್ಕೆ ಕೊನೆ ಎಂದುಕೊಳ್ಳಬಾರದು, ಮುನ್ನಡೆಯಬೇಕು. ಸೋಲಿಗೆ ಕಾರಣಗಳನ್ನು ಪಟ್ಟಿ ಮಾಡಬೇಕು. ಮುಂದಿನ ಹೆಜ್ಜೆಯ ಸಂದರ್ಭ ಹಳೆಯ ತಪ್ಪು ಮರುಕಳಿಸದಂತೆ ನೋಡಿಕೊಂಡಾಗ ಯಶಸ್ಸು ನಮ್ಮದೇ. ದುಡುಕು,  ಜುಗುಪ್ಸೆ , ಅಸಹಾಯಕತೆ, ಕೋಪತಾಪ ಬಿಟ್ಟು  ತಾಳ್ಮೆಯಿಂದಿದ್ದರಷ್ಟೇ ಸಾಧ‌ಕರ  ಪಟ್ಟಿಯಲ್ಲಿ ಗುರುತಿಸಿಕೊಳ್ಳಲು  ಸಾಧ್ಯ ಎನ್ನುತ್ತಾರೆ ಲೇಖಕ,  ವಾಗ್ಮಿ  ರಾಬಿನ್‌ ಶರ್ಮಾ.

ಯುವಜನರನ್ನು ಕಾಡುವ ಪ್ರಶ್ನೆಯೆಂದರೆ ಸಾಧಿಸುವುದು ಹೇಗೆ? ಎಂಬುದು. ನಮ್ಮಲ್ಲಿ ಸಾಧನೆಯ ತುಡಿತ ಇದ್ದೇ ಇರುತ್ತದೆ. ಹಾಗೆಂದು ಪಡಬೇಕಾದ ಪರಿಶ್ರಮದ ಪ್ರಮಾಣ, ನಡೆಯಬೇಕಾದ ಹಾದಿ ಬಗ್ಗೆ ಸ್ಪಷ್ಟತೆ ಇರದು. ಅಂಕ ಕಡಿಮೆಯಾಯಿತು, ನನ್ನ ಮನೆಯಲ್ಲಿ ಕೇಳಿದ್ದನ್ನು ಕೊಡಿಸುವುದಿಲ್ಲ, ಅವರೆಲ್ಲಾ ಹಾಗಿ ದ್ದಾರೆ, ನಾನು ಮಾತ್ರ ಹೀಗೆ..ಇಂಥ ಕೆಲವು ನೇತ್ಯಾತ್ಮಕ ಅಂಶಗಳು ನಮ್ಮ ಸುತ್ತಲೂ ಗಿರಕಿ ಹೊಡೆ ಯು ತ್ತಲೇ ಇರುತ್ತವೆ. ಮನಸ್ಸು ಗೊಂದಲಕ್ಕೆ ಒಳ ಗಾಗುತ್ತದೆ. ಆದರೆ ಲಕ್ಷಾಂತರ ಮಂದಿ ಇವು ಗಳನ್ನೇ ಮೆಟ್ಟಿಲಾಗಿಸಿಕೊಂಡು ಏರಿ ಇಂದು ನೆಮ್ಮದಿ ಯಿಂದ ಬದುಕುತ್ತಿದ್ದಾರೆ. ಇದು ಅಕ್ಷರಶಃ ಸತ್ಯ.

ಜೀವನ ಎಂದರೇನು?
“ಇಂದು ಹುಟ್ಟಿ, ನಾಳೆ ಸತ್ತರೆ ಬದುಕಿಗೆ ಅರ್ಥ ಸಿಗದು. ಕಡಿಮೆ ಅವಧಿಯ ಈ ಜೀವನದಲ್ಲಿ ಏನಾದರೂ ಸಾಧನೆ ಮಾಡಿದಾಗ ಮಾತ್ರ ಸಾರ್ಥಕ್ಯ. ಸಾಧಕರ ಸಾಲಿನಲ್ಲಿ ಗುರುತಿಸಿಕೊಳ್ಳಬೇಕಾದರೆ ಹುಟ್ಟು ಮತ್ತು ಸಾವಿನ ಮಧ್ಯೆ ಸಾಧನೆಯ ಆ ಘಳಿಗೆಗೂ ಮೊದಲು ಕಾಡುವ ಆಲೋಚನೆಗಳು, ಸೋಲುಗಳನ್ನು ಸವಾಲಾಗಿ ಸ್ವೀಕರಿಸಬೇಕು’ ಎನ್ನುತ್ತಾರೆ ರಾಬಿನ್‌ ಶರ್ಮಾ.

ಸವಾಲು ಎದುರಿಸಿ
ಯಾವುದೇ ಕೆಲಸವಾಗಲಿ, ಅದರಲ್ಲಿ ದಶಕಗಳ ಅನುಭವವೇ ನಿಮಗಿರಲಿ; ಹೊಸತನ ಅನುಭವಿಸಿ. ಸದಾ ಅಪ್‌ಡೇಟ್‌ ಆಗಿದ್ದಾಗ ಮಾತ್ರ ವಿಭಿನ್ನ ಸಾಧ‌ನೆ ಮಾಡಬಹುದು. ಸೋಲು ಗೆಲುವಿನ ಲೆಕ್ಕಾಚಾರಕ್ಕಾಗಿ ನಿಮ್ಮ ಹತ್ತಿರ ಸದಾ ಒಂದು ಪುಟ್ಟ ಡೈರಿ ಇಟ್ಟುಕೊಂಡಿರಿ. ನಿಮ್ಮ ದಿನನಿತ್ಯದ ಕೆಲಸಗಳಲ್ಲಿ ಆಗಬಹುದಾದ ಬೆಳವಣಿಗೆಗಳನ್ನು ಬರೆದಿಟ್ಟುಕೊಳ್ಳಿ. ಮುಂದೊಂದು ದಿನ ಇವುಗಳ ಮೇಲೆ ಬೆಳಕು ಚೆಲ್ಲಿದಾಗ ನಿಮ್ಮ ಬೆಳವಣಿಗೆಯ ಬಗ್ಗೆ ಆತ್ಮ ವಿಮರ್ಶೆ ಸಾಧ್ಯ.

“ಐ ಕ್ಯಾನ್‌’, “ಐಕ್ಯೂ’ಗಿಂತ ಹಿರಿದು
ಗುಣಾತ್ಮಕ ಚಿಂತನೆಯೊಂದಿದ್ದರೆ ಎಂಥದೇ ಕಠಿನ ಸವಾಲನ್ನು ಕೂಡ ಸುಲಲಿತವಾಗಿ ಬಗೆಹರಿಸಬಹುದು. ನಾನು ಮಾಡಬಲ್ಲೆ ಎಂಬ ಒಂದು ಪುಟ್ಟ ಆತ್ಮ ವಿಶ್ವಾಸವೇ ನಿಮ್ಮನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎನ್ನುತ್ತಾರೆ ರಾಬಿನ್‌ ಶರ್ಮಾ.

ನಿಮ್ಮ ದಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆಯೇ?
ನೀವು ಸರಿಯಾದ ಮಾರ್ಗದಲ್ಲಿದ್ದರೆ ಅಳುಕೇತಕ್ಕೆ? ಜನ ನಿಮ್ಮತ್ತ ಕಲ್ಲು ತೂರಿದರೆ, ಅದನ್ನು ಹಿಂದಿರುಗಿ ಎಸೆಯಬೇಡಿ. ಬದಲಾಗಿ ಅವನ್ನೇ ಬಳಸಿ ಸ್ಮಾರಕ ನಿರ್ಮಿಸಿ. ಅದೇ ಎಲ್ಲದಕ್ಕೂ ಉತ್ತರ. “ದ ಬೆಸ್ಟ್‌ ಲೀಡರ್ì ಆರ್‌ ದ ಮೋಸ್ಟ್‌ ಎಜುಕೇಟೆಡ್‌ ಲರ್ನರ್’ ಎಂಬುದು ರಾಬಿನ್‌ ಶರ್ಮಾರ ಮಾತು.

ಮಕ್ಕಳು ಗೀಳಿನಿಂದ ಹೊರಬರಲು ಹೆತ್ತವರು ಹೇಗೆ ಸಹಕರಿಸಬೇಕು?

ಗೀಳಿಗೆ ತುತ್ತಾದ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು. ಅವರ ಆಸಕ್ತಿ, ಭಯ, ನಿರಾಶೆ, ಒತ್ತಡಗಳನ್ನು ತಿಳಿದುಕೊಳ್ಳಲು  ಸ್ನೇಹಿತರ ರೀತಿ ವರ್ತಿಸಬೇಕು. ಆಗ ಮಾತ್ರ ಅವರ ಸಮಸ್ಯೆ, ಮನಸ್ಸಿನೊಳಗಿನ ತುಮುಲವನ್ನು ತಿಳಿಯಲು ಸಾಧ್ಯ. 

 ಮಕ್ಕಳ ಎಲ್ಲ ಆಗು-ಹೋಗುಗಳ ಕುರಿತು ಹೆತ್ತವರು ತಿಳಿದುಕೊಳ್ಳಬೇಕು. ದಿನದಲ್ಲಿ ಒಂದು ಬಾರಿಯಾದರೂ ಅವರಿಗೆ ಸಮಯವನ್ನು ಮೀಸಲಿಟ್ಟು, ಮುಕ್ತವಾಗಿ ಮಾತನಾಡಲು ಹೆತ್ತವರು ಪ್ರಯತ್ನಿಸಬೇಕು. 

ಗೀಳು ಸಂತ್ರಸ್ತರಾದ ಮಕ್ಕಳ ಹೆತ್ತವರಿಗೆ ಶಾಲಾ- ಕಾಲೇಜುಗಳಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. 

 ಆದಷ್ಟು ಮೊಬೈಲ್‌, ವೀಡಿಯೋ ಗೇಮ್‌, ಟಿವಿಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಅವರ ಆಸಕ್ತಿಯನ್ನು ಕ್ರೀಡೆ, ನೃತ್ಯ, ಹಾಡು, ಪುಸ್ತಕ ಓದುವಿಕೆ ಕಡೆಗೆ ತಿರುಗಿಸಬೇಕು. ಅದಕ್ಕೆ ಸೂಕ್ತ ವಾತಾವರಣ ನಿರ್ಮಿಸಿ ಪ್ರೇರೇಪಿಸಬೇಕು.

ಮಕ್ಕಳು ಹೆತ್ತವರನ್ನೇ ನೋಡಿ ಬೆಳೆಯುವುದರಿಂದ ಅವರೆದುರು ಮನೆಯ ಸಮಸ್ಯೆಗಳನ್ನೆಲ್ಲ ತೋರ್ಪಡಿಸಬಾರದು. 

 ಆ ಗೀಳಿಗೆ ಕಾರಣವೇನೆಂದು ಮೊದಲು ಪತ್ತೆ ಹಚ್ಚಿದರೆ ಅರ್ಧ ಸಮಸ್ಯೆಗೆ ಪರಿಹಾರ ಸಿಕ್ಕಂತೆ. 

ಸ್ಫೂರ್ತಿಗಾಗಿ ಈ ವೀಡಿಯೋ ನೋಡಿ

ರಾಬಿನ್‌ ಶರ್ಮಾ ಅವರು  ಜೀವನ ಹಾಗೂ ಸವಾಲುಗಳ ಕುರಿತಾಗಿ ಸಾಕಷ್ಟು ಪುಸ್ತಕ ಬರೆದಿದ್ದಾರೆ. ಉಪನ್ಯಾಸ 
ನೀಡಿದ್ದಾರೆ.  ಅವರ ಮಾತುಗಳಲ್ಲಿನ ಜೀವನೋತ್ಸಾಹ ತುಂಬುವಂಥ ಒಂದಷ್ಟು ಅಂಶಗಳು ನಮ್ಮ ಬದುಕಿಗೂ ಹೊಸ ಚೈತನ್ಯ, ಸ್ಫೂರ್ತಿ ತುಂಬಬಲ್ಲವು.ಸಾಧನೆಗೆ ಪೂರಕವಾಗಬಲ್ಲ ಐದು ಕಾರ್ಯಗಳನ್ನು ಬಹಳ ಚೆನ್ನಾಗಿ ವೀಡಿಯೋ ಒಂದರಲ್ಲಿ ವಿವರಿಸಿದ್ದಾರೆ. ಅದನ್ನು ನೋಡಲು ಈ ಲಿಂಕ್‌ ಕ್ಲಿಕ್ಕಿಸಿ.  

ನಿಮ್ಮ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಖನ್ನತೆ, ಆತಂಕ, ಉದ್ವಿಗ್ನತೆಯ ಲಕ್ಷಣ  ಕಂಡುಬಂದರೆ ಈ ನಂಬರ್‌ಗೆ ವಾಟ್ಸ್‌ ಆ್ಯಪ್‌ ಮಾಡಿ ಸಮಸ್ಯೆ ಹೇಳಿಕೊಳ್ಳಿ. ಪರಿಣತರೊಂದಿಗೆ ಚರ್ಚಿಸಿ ಪರಿಹಾರಕ್ಕೆ  ಪ್ರಯತ್ನಿಸುತ್ತೇವೆ.
9964169554

 *ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.