ಸಮಸ್ಯೆಗಳ ಸಂತೆಯಂತಿದೆ ತಾ| ಖಾಸಗಿ ಬಸ್ ನಿಲ್ದಾಣ!
Team Udayavani, Jun 22, 2018, 10:48 AM IST
ಸುಳ್ಯ: ಕಿರಿದಾದ ನಿಲ್ದಾಣ, ಹತ್ತು ಜನರನ್ನಷ್ಟೇ ಹಿಡಿದಿಟ್ಟುಕೊಳ್ಳುವ ತಂಗುದಾಣ, ನಿತ್ಯವೂ ತಪ್ಪದ ಕುಡುಕರ ಕಾಟ, ಪ್ರಯಾಣಿಕರಿಗೆ ಗೊಂದಲ. ಹೀಗೆ ಜನನಿಬಿಡ ಪ್ರದೇಶದ ತಾಲೂಕು ಖಾಸಗಿ ಬಸ್ ನಿಲ್ದಾಣ ಸಮಸ್ಯೆಗಳ ಒಡ್ಡೋಲಗವನ್ನೇ ಹೊತ್ತು ನಿಂತಿದೆ..!
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಇಲ್ಲದ ಕಾಲದಲ್ಲಿಯೇ ಗ್ರಾಮಾಂತರ ಪ್ರದೇಶಕ್ಕೆ ಸಂಪರ್ಕ ಒದಗಿಸುತಿದ್ದ ಈ ನಿಲ್ದಾಣಕ್ಕೆ 50 ವರ್ಷಕ್ಕಿಂತ ಅಧಿಕ ಇತಿಹಾಸವಿದೆ. ಇಲ್ಲಿ ಮೂಲ ಸೌಕರ್ಯದ ಕೊರತೆ ಮಿತಿ ಮೀರಿದೆ. ಮುಖ್ಯ ರಸ್ತೆ ಸನಿಹದಲ್ಲಿ ಪೂರಕ ವ್ಯವಸ್ಥೆಗಳು ಇಲ್ಲದೇ ಹೆಸರಿಗೆ ಮಾತ್ರ ಬಸ್ ನಿಲ್ದಾಣದಂತಿದೆ. ಎಲ್ಲ ವಾಹನಗಳು ಪ್ರವೇಶಿಸಿ ಗೊಂದಲದ ಗೂಡಾಗಿದೆ.
ಚಿತ್ರಣವೇ ಬದಲು
ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳು ಒಂದೆ ದಿಕ್ಕಿನಲ್ಲಿ ನಿಲ್ಲುತ್ತಿತ್ತು. ಆಗ ಉಳಿದ ವಾಹನಗಳು ಪ್ರವೇಶಿಸದೆ, ನಿಯಮ ಪಾಲನೆ ಆಗುತ್ತಿತ್ತು. ಕೆಎಸ್ಸಾರ್ಟಿಸಿ ಬಸ್ ಗಳು ಹೊಸ ನಿಲ್ದಾಣಕ್ಕೆ ಸ್ಥಳಾಂತರಗೊಂಡ ಅನಂತರ ಖಾಸಗಿ ಬಸ್ ನಿಲುಗಡೆಗೆ ಸೀಮಿತವಾಗಿದ್ದ ನಿಲ್ದಾಣದಲ್ಲಿ ಸ್ಟೇಜ್ ಕ್ಯಾರೇಜ್ ಜತೆಗೆ ಕಾಂಟ್ರಾಕ್ಟ್ ಕ್ಯಾರೇಜ್, ಟೂರಿಸ್ಟ್, ಖಾಸಗಿ ವಾಹನ ಪ್ರವೇಶಿಸಿತ್ತು. ವಾಣಿಜ್ಯ ಕಟ್ಟಡಗಳಿಗೆ ಬರುವ ಖಾಸಗಿ ವಾಹನಗಳು ಬಸ್ ನಿಲ್ದಾಣಕ್ಕೆ ಪ್ರವೇಶಿಸಿ, ಅಲ್ಲೇ ಪಾರ್ಕಿಂಗ್ ಮಾಡುತ್ತಿವೆ.
20 ರೂ. ಪಾವತಿ..!
ನಗರ ಪಂಚಾಯತ್ ಈ ಬಸ್ ನಿಲ್ದಾಣದ ಜವಾಬ್ದಾರಿ ಹೊಂದಿದೆ. ಇಲ್ಲಿನ ಮೂಲ ಸೌಕರ್ಯದ ಕಡೆಗೆ ಮುತುವರ್ಜಿ ವಹಿಸಬೇಕಿತ್ತು. ಏಕೆಂದರೆ ಖಾಸಗಿ ಬಸ್‌ವೊಂದರಿಂದ ನ.ಪಂ.ಗೆ ದಿನವೊಂದಕ್ಕೆ 20 ರೂ. ಪಾವತಿಯಾಗುತ್ತಿದೆ. ಸರಾಸರಿ 20ಕ್ಕೂ ಅಧಿಕ ವಾಹನಗಳು ಶುಲ್ಕ ನೀಡುತ್ತದೆ. ಅದಾಗ್ಯೂ ನ.ಪಂ. ಆಡಳಿತ ಇಲ್ಲಿನ ಅವ್ಯವಸ್ಥೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಗೊಂದಲ ಕಂಡು ಮೌನ ವಹಿಸಿದೆ.
ಗಂಟೆಗೊಮ್ಮೆ ಬಸ್
ಬೇರೆ ಬೇರೆ ಪ್ರದೇಶಗಳಿಗೆ ತೆರಳುವ ಸಿಟಿ, ನಗರ, ಮಡಿಕೇರಿ, ಕಾಸರಗೋಡು ಸಂಪರ್ಕಿಸುವ ಬಸ್‌ಗಳು ಗಂಟೆಗೊಮ್ಮೆ ನಿಲ್ದಾಣ ಪ್ರವೇಶಿಸುತ್ತವೆ. ಆಗ ಉಳಿದ ವಾಹನಗಳು ಪ್ರವೇಶಿಸುವುದರಿಂದ ಪ್ರಯಾಣಿ ಕರಿಗೆ ಗೊಂದಲ ಉಂಟಾಗುತ್ತದೆ. ಕಿರಿದಾದ ಸ್ಥಳದಲ್ಲಿ ಬಸ್ ತಿರುಗಾಡುವುದೇ ದೊಡ್ಡ ಸವಾಲೆನಿಸಿದೆ.
ಇತರೆ ವಾಹನಗಳು ನಿಲ್ದಾಣ ಪ್ರವೇಶಿಸುವ ಬಗ್ಗೆ ಹೈಕೋರ್ಟ್ ತನಕ ದೂರು ಸಲ್ಲಿಕೆ ಆಗಿದೆ. 500 ಮೀಟರ್ ವ್ಯಾಪ್ತಿಯೊಳಗೆ ಖಾಸಗಿ ಬಸ್ ಹೊರತು ಪಡಿಸಿ, ಉಳಿದ ಯಾವುದೇ ವಾಹನಗಳು ಪ್ರವೇಶಿಸಲು ಅವಕಾಶ ಇಲ್ಲ ಎಂಬ ನಿಯಮ ಇದ್ದರೂ, ಅದನ್ನು ಇಲ್ಲಿ ಪೂರ್ಣವಾಗಿ ಗಾಳಿಗೆ ತೂರಲಾಗಿದೆ
ನ.ಪಂ. ಹೊಣೆಗಾರಿಕೆ
ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಕಾನೂನು ಹೋರಾಟ ನಡೆಸಿದ್ದೇನೆ. ನ್ಯಾಯಾಲಯವು ನ.ಪಂ, ಆರ್ ಟಿಓ, ಪೊಲೀಸ್ ಇಲಾಖೆಗೆ ಸಮಸ್ಯೆ ಸರಿಪಡಿಸುವಂತೆ ನೋಟಿಸ್ ನೀಡಿದ್ದರೂ, ಸ್ಪಂದನೆ ಸಿಕ್ಕಿಲ್ಲ. ಮೂಲ ಸೌರ್ಕಯಗಳ ಕೊರತೆಯು ಇಲ್ಲಿದೆ.
- ನಾರಾಯಣ ರೈ
ಅಧ್ಯಕ್ಷರು, ಕಾಂಟ್ರಾಕ್ಟ್ ಕ್ಯಾರೇಜ್
ಬಸ್ ಮಾಲಕರ ಸಂಘ
ಕುಡುಕರ ಕಾಟ
ಕಿರಿದಾದ ಪ್ರಯಾಣಿಕರ ತಂಗುದಾಣ ದಲ್ಲಿ ಕುಡುಕರ ಕಾಟ ತಪ್ಪಿಲ್ಲ. ಹಾಗಾಗಿ ಕೆಲವೊಮ್ಮೆ ಪ್ರಯಾಣಿಕರು ಅದರೊಳಗೆ ಪ್ರವೇಶಿಸುವಂತಿಲ್ಲ. ಹೊರಗಡೆ ಬಸ್‌ಗೆ ಕಾಯಬೇಕಿದೆ. ನಿರ್ವಾಹಕರಿಗೆ, ಚಾಲಕರಿಗೆ ಬೇಕಾದ ಸೌಲಭ್ಯಗಳು ಇಲ್ಲಿಲ್ಲ. ಹಳೆ ಬಸ್ ಕೆಡಹಿ ಕೆಲ ವರ್ಷಗಳ ಹಿಂದೆಯಷ್ಟೇ ನಿರ್ಮಿಸಿದ ನಿಲ್ದಾಣ ದೂರದೃಷ್ಟಿತ್ವದ ಕೊರತೆಯಿಂದ ಹತ್ತೆ ವರ್ಷದಲ್ಲಿ ಪ್ರಯೋಜನಕ್ಕೆ ಬಾರದಂತಿದೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.