ನೂರಾರು ಮಂದಿ ನಿರ್ವಸತಿಗರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ!

Team Udayavani, Sep 3, 2021, 3:30 AM IST

ನೂರಾರು ಮಂದಿ ನಿರ್ವಸತಿಗರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ!

ತೆಂಕಮಿಜಾರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸುವುದು ಅಗತ್ಯ ಬೇಡಿಕೆ. ಕಚ್ಚಾರಸ್ತೆಗಳಿಗೆ ಡಾಮರು ಹಾಕುವುದು, ಸಮರ್ಪಕವಾಗಿ ನೀರು ಸರಬರಾಜು ಮಾಡುವುದು ಪ್ರಮುಖ ಆದ್ಯತೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲು ಉದಯವಾಣಿ ಸುದಿನ “ಒಂದು ಊರು-ಹಲವು ದೂರು’ ಅಭಿಯಾನದ ಚ ಪ್ರಯತ್ನಿಸಲಾಗಿದೆ.

ಮೂಡುಬಿದಿರೆ: ತೆಂಕ ಮಿಜಾರು ಗ್ರಾ.ಪಂ. ವ್ಯಾಪ್ತಿಗೆ ಬರುವ ತೆಂಕ ಮಿಜಾರು ಗ್ರಾಮದಲ್ಲಿ ನೂರಾರು ಮಂದಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ!

ಗ್ರಾಮದ ಕಂದಾಲಬೆಟ್ಟು ಪ್ರದೇಶದಲ್ಲಿ 3 ಎಕರೆ ಜಾಗ ರಾಜೀವ ಗಾಂಧಿ ವಸತಿ ಯೋಜನೆ (1993)ಯಡಿ, ಮಿಜಾರು ಅಣ್ಣಪ್ಪ ನಗರ ಪ್ರದೇಶದಲ್ಲಿ ಬಸವ ವಸತಿ ಯೋಜನೆಯಡಿ 4 ಎಕರೆ ಜಾಗದಲ್ಲಿ ಮತ್ತು ಕೊಪ್ಪದಕುಮೇರುನಲ್ಲಿ ಮನೆ ನಿವೇಶನ ನೀಡಲಾಗಿದೆ.  ಸದ್ಯ 200ಕ್ಕೂ ಅಧಿಕ ಮಂದಿ ನಿವೇಶನ ರಹಿತರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಿಗೆ ಸೂಕ್ತ ನಿವೇಶನ ಒದಗಿಸಬೇಕಾಗಿದೆ.

ಪಂ. ಕಟ್ಟಡ ವಿಸ್ತರಣೆಗೆ ಅಡ್ಡಿ ಆತಂಕ :

1981ರಲ್ಲಿ ತೆಂಕಮಿಜಾರು ಗ್ರಾ.ಪಂ. ಕಟ್ಟಡಕ್ಕಾಗಿ 0.28 ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು. ಇದರಲ್ಲಿ 1. ನಮೂದಿಸಿದ ಉದ್ದೇಶಕ್ಕೆ ಮಾತ್ರ ಜಮೀನು ಉಪಯೋಗಿಸಬೇಕು; 2. ಅಕ್ರಮ ಮಾಡಿದಲ್ಲಿ ಸರಕಾರ ವಶಪಡಿಸಿಕೊಳ್ಳುವುದು ಎಂಬಿತ್ಯಾದಿ ಷರತ್ತುಗಳನ್ನು ಉಲ್ಲೇಖೀಸಲಾಗಿತ್ತು. ಅದನ್ನೆಲ್ಲ ಉಲ್ಲಂಘಿಸಿ ಸುಮಾರು 0.15 ಎಕರೆ ಜಾಗವನ್ನು ಖಾಸಗಿಯವರಿಗೆ ನೀಡಿ, ಅಲ್ಲಿ ಕಟ್ಟಡಗಳೆದ್ದಿದ್ದು ಈಗ ವಶಪಡಿಸಿಕೊಳ್ಳಲು ಹೊರಟರೆ ಜಾಗದ ಪಹಣಿ ಪತ್ರದಲ್ಲಿ 1989ರಲ್ಲಿ ಆದ ದಾಖಲೆಯಂತೆ ಈ ಜಾಗ ಕಲ್ಲಮುಂಡ್ಕೂರು ಮಂಡಲ ಪಂಚಾಯತ್‌ ಎಂದಾಗಿಬಿಟ್ಟಿದೆ. ಅದನ್ನು ತೆಗೆಸಿ ಮತ್ತೆ ತೆಂಕಮಿಜಾರು ಗ್ರಾ.ಪಂ. ಎಂದು ಸರಿಪಡಿಸಲು ಸಮಸ್ಯೆಯಾಗಿರುವುದರಿಂದ ಅಕ್ರಮ ತೆರವು ಕಾರ್ಯಾಚರಣೆ, ಪಂಚಾಯತ್‌ ಕಟ್ಟಡ ವಿಸ್ತರಣೆಗೆ ತೊಡಕಾಗಿದೆ. ವಾಹನಗಳ ಪಾರ್ಕಿಂಗ್‌ಗೂ ಅಡ್ಡಿಯುಂಟಾಗಿದೆ.

ಇನ್ನೂ ಪ್ರಕಟವಾಗದ ನರೇಗಾ ಒಂಬುಡ್ಸ್‌ಮನ್‌ ವರದಿ :

ಉದ್ಯೋಗ ಖಾತರಿ ಯೋಜನೆಯಡಿ ತೆಂಕಮಿಜಾರು ಗ್ರಾಮದಲ್ಲಿ ಸುಮಾರು ಕೋಟಿ ರೂ. ಮೊತ್ತದಷ್ಟು ವಿನಿಯೋಜನೆಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ, ಕಳಪೆ ಕಾಮಗಾರಿಗಳ ಕುರಿತಾದ ದೂರುಗಳನ್ನು ಪರಿಶೀಲಿಸಲು ನಾಲ್ಕು ತಿಂಗಳ ಹಿಂದೆ ಗ್ರಾಮಕ್ಕೆ ಭೇಟಿನೀಡಿದ್ದ ನರೇಗಾ ಒಂಬುಡ್ಸ್‌ ಮನ್‌ ಅವರ ವರದಿ ಇನ್ನೂ ಪ್ರಕಟವಾಗಿಲ್ಲ!

ಇತರ ಸಮಸ್ಯೆಗಳೇನು? :

  • ಜ ತೆಂಕಮಿಜಾರು ಗ್ರಾಮದವರು ಈಗ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಬರಬೇಕಾದರೆ 10 ಕಿ.ಮೀ. ದೂರದ ಕಲ್ಲಮುಂಡೂರಿಗೆ ಹೋಗಬೇಕು. ಇದರ ಬದಲು ಇಲ್ಲೇ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕಾಗಿದೆ.
  • ಮಂಜನಬೈಲು ಪಿದಮಲೆ ಪ್ರದೇಶದವರು ಪಂಚಾಯತ್‌ಗೆ ಬರಬೇಕಾದರೆ ಹತ್ತು ಕಿ.ಮೀ. ಸುತ್ತು ಬಳಸಿ ಬರಬೇಕು. 1983ರಲ್ಲಿ ಮಣ್ಣಿನ ನೇರ ರಸ್ತೆ ನಿರ್ಮಾಣವಾದರೂ ಸಂಪೂರ್ಣ ಡಾಮರು ಬಿದ್ದಿಲ್ಲ.
  • ನೀರ್ಕೆರೆ ಸರಕಾರಿ ಶಾಲೆಯನ್ನು ಪಬ್ಲಿಕ್‌ ಶಾಲೆಯನ್ನಾಗಿ ಮಾರ್ಪಡಿಸಿ ಪದವಿ ಪೂರ್ವ ಶಿಕ್ಷಣದವರೆಗೆ ಇಲ್ಲಿಯೇ ಅವಕಾಶ ಕಲ್ಪಿಸಬೇಕು.
  • ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ್ದ ಕಿಂಡಿ ಅಣೆಕಟ್ಟುಗಳು ದುರ್ಬಲ, ಶಿಥಿಲವಾಗಿದ್ದು ಹೊಸದಾಗಿ ನಿರ್ಮಿಸುವ ಅಗತ್ಯವಿದೆ.
  • 94ಸಿ ಯಲ್ಲಿ ಅರ್ಜಿ ಸಲ್ಲಿಸಿದ ಅನೇಕರಿಗೆ ಡೀಮ್ಡ್ ಫಾರೆಸ್ಟ್‌ ಗುಮ್ಮ ಕಾಡುತ್ತಿದೆ.
  • ಜಲಜೀವನ ಮಿಷನ್‌ ಯೋಜನೆಯ ಈಗಿರುವ ನಕ್ಷೆಯನ್ನು ಬದಲಿಸಿ, ಜನವಸತಿ ಇರುವ ಪ್ರದೇಶಕ್ಕೆ ನೀರು ಲಭ್ಯವಾಗುವಂತೆ ಮಾಡಬೇಕಾಗಿದೆ.

ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವುMangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

Mangaluru: ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾವು

Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ

Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

ಜ. 11,12: ಮಂಗಳೂರಿನಲ್ಲಿ ಬೀಚ್‌ ಉತ್ಸವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.