ಯೋಗ್ಯ ಆಯ್ಕೆಗಳೊಂದಿಗೆ ಮುನ್ನಡೆಯಿರಿ: ಗೊಸಾವಿ
Team Udayavani, Mar 1, 2019, 1:00 AM IST
ಮಂಗಳೂರು: ಲಭ್ಯ ಅವಕಾಶಗಳನ್ನು ಸದುಪ ಯೋಗಪಡಿಸಿಕೊಂಡು ಯೋಗ್ಯ ಆಯ್ಕೆಗಳೊಂದಿಗೆ ಮುನ್ನಡೆ ಯುವ ಮನೋಭಾವ ವಿದ್ಯಾರ್ಥಿಗಳಲ್ಲಿರ ಬೇಕು. ಆತ್ಮವಿಶ್ವಾಸದಿಂದ ಸಾಧನೆ ಸಾಧ್ಯ ಎಂದು ಇನ್ಫೋಸಿಸ್ ಫಿನಾಕಲ್‌ನ ಗ್ಲೋಬಲ್ ಸೇಲ್ಸ್ ಹೆಡ್ ಹಾಗೂ ಹಿರಿಯ ಉಪಾಧ್ಯಕ್ಷ ವೆಂಕಟರಮಣ ಗೊಸಾವಿ ಅಭಿಪ್ರಾಯಪಟ್ಟರು.
ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸ ವದ ಅಂಗವಾಗಿ “ಆಕೃತಿ 2019′ ರಾಜ್ಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವವನ್ನು ಅವರು ಗುರುವಾರ ಉದ್ಘಾಟಿಸಿದರು.
ಪ್ರಸ್ತುತ ಜಗತ್ತು ಭಾರತದತ್ತ ನೋಡುವ ಸಮಯ ಬಂದಿದೆ. ಈಗಿನ ಸನ್ನಿವೇಶ ಗಮನಿಸಿದರೆ ಕೆಲವೇ ದಶಕಗಳಲ್ಲಿ ಭಾರತ ಜಗತ್ತಿನ ಆರ್ಥಿಕ ಶ್ರೇಷ್ಠತೆಯ ರಾಷ್ಟ್ರಗಳ ಸಾಲಿನಲ್ಲಿ ಮೂರನೇ ಸ್ಥಾನಕ್ಕೇರುವ ಎಲ್ಲ ಸಾಧ್ಯತೆ ಬಲವಾಗಿವೆ. ಇಂತಹ ಸಂದರ್ಭದಲ್ಲಿ ಯುವ ವಿದ್ಯಾರ್ಥಿಗಳಿಗೂ ಅವಕಾಶ ದಟ್ಟವಾಗಿದ್ದು, ಸದ್ವಿನಿಯೋಗದತ್ತ ಗಮನ ಹರಿಸಬೇಕು ಎಂದವರು ಹೇಳಿದರು.
ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಞಾನದ ಜತೆಗೆ ಬುದ್ಧಿಮತ್ತೆಯೂ ಮುಖ್ಯ. ಪರಿಪೂರ್ಣತೆಗೆ ಆದ್ಯತೆ ನೀಡಿ ಯಶಸ್ಸಿಗೆ ಶ್ರಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ನೂತನ ಅಂತ ರ್ಜಾಲ ತಾಣವನ್ನು ಈ ವೇಳೆ ಲೋಕಾರ್ಪಣೆಗೊಳಿಸಲಾಯಿತು. ಶೈಕ್ಷಣಿಕ, ಕ್ರೀಡಾರಂಗದ ಪ್ರತಿಭಾನ್ವಿತ ರನ್ನು, ಸಾಧಕ ಹಳೆ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಿಚ್‌ಡಿ ಪದವಿ ಪಡೆದ ಡಾ| ರವೀಂದ್ರ ಮಲ್ಯ, ಡಾ| ಸುರೇಶ್ ಡಿ. ಅವರನ್ನು ಸಮ್ಮಾನಿಸ ಲಾಯಿತು.
ವಿದ್ಯಾರ್ಥಿಗಳಾದ ಸಿಂಧೂ ಭಟ್, ನೈಝಿಲ್ ಸ್ಕಾಟ್ ಅನಿಸಿಕೆ ಹಂಚಿಕೊಂಡರು. ಉದ್ಯಮಿ ಅಜಿತ್ ಕಾಮತ್, ಆಡಳಿತ ಮಂಡಳಿ ಖಜಾಂಚಿ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ, ಎಂ. ಗಣೇಶ್ ಕಾಮತ್, ಎಂ. ಸುರೇಶ್ ಕಾಮತ್, ವಿದ್ಯಾರ್ಥಿ ಸಂಯೋಜಕ ಪವನ್ ವಿ. ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ಸ್ವಾಗತಿಸಿದರು. ಪ್ರಾಂಶುಪಾಲ ಡಾ| ಗಣೇಶ್ ವಿ. ಭಟ್ ವರದಿ ವಾಚಿಸಿದರು. ಆಕೃತಿ ಮುಖ್ಯ ಸಂಯೋಜಕ ಡಾ| ಎನ್. ಸತೀಶ್ ಕುಮಾರ್ ವಂದಿಸಿದರು. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥೆ ಡಾ| ರಾಜಲಕ್ಷಿ¾à ಸಾಮಗ ಅತಿಥಿ ಪರಿಚಯ ಮಾಡಿದರು. ಉಪನ್ಯಾಸಕಿ ಆಶಿತಾ ಕೆ. ಬಹುಮಾನಿತರ ವಿವರ ನೀಡಿದರು. ಸಹ ಪ್ರಾಧ್ಯಾಪಕಿ ಮೇಧಾ ಸಾಧಕ ಹಳೆ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಸಹ ಪ್ರಾಧ್ಯಾಪಕಿ ಅಕ್ಷತಾ ಭಟ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.