ಫೇಸ್ಬುಕ್ ನಲ್ಲಿ ಅಪಪ್ರಚಾರ: ಪ್ರಕರಣ ದಾಖಲು
Team Udayavani, Jul 22, 2017, 6:05 AM IST
ಮಂಗಳೂರು: ಬಿಜೆಪಿ ಮುಖಂಡ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರ ವಿರುದ್ಧ ಫೇಸ್ಬುಕ್ ಖಾತೆದಾರನೋರ್ವ ತಪ್ಪು ಮಾಹಿತಿ ಪೋಸ್ಟ್ ಮಾಡುವ ಮೂಲಕ ಅಪಪ್ರಚಾರ ಮಾಡಿರುವ ಘಟನೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಲಿಯಂ ಪಿಂಟೋ ಅವರ ಹೆಸರಿನಲ್ಲಿರುವ ಈ ಖಾತೆಯಲ್ಲಿ ,ಅಪಪ್ರಚಾರ ಮಾಡಲಾಗಿದೆ. ಈ ಪೋಸ್ಟ್ ವಿರುದ್ಧ ಅಸಮಾ ಧಾನಗೊಂಡಿರುವ ರಹೀಂ ಉಚ್ಚಿಲ ಅವರು, ಸಾಮಾಜಿಕ ಜಾಲತಾಣ ದಲ್ಲಿ ತಪ್ಪು ಮಾಹಿತಿ ಹಾಕುವ ಮೂಲಕ ದುರ್ಬಳೆ ಮಾಡುತ್ತಿರುವ ಫೇಸ್ಬುಕ್ ಖಾತೆದಾರನ ವಿರುದ್ಧ ಹುಬ್ಬಳ್ಳಿಯ ಸಬರ್ಬಂದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.
14ದಿನಗಳ ಕಾಲ ಬಿಜೆಪಿ ಪಕ್ಷದ ವಿಸ್ತಾರಕನ ಜವಾಬ್ದಾರಿ ಮೇಲೆ ಹುಬ್ಬಳ್ಳಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಿದ್ಧಾರೂಢ ಮಠ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದೇನೆ. ಅರ್ಚಕರು ಶಾಲು ಹೊದಿಸಿ ಅಭಿನಂದಿಸಿದ್ದಾರೆ. ಇದು ನನಗೆ ಖುಷಿ ನೀಡಿದೆ. ಹುಬ್ಬಳ್ಳಿಯಲ್ಲಿ ಹಿಂದೂ ಮುಸ್ಲಿಂಮರು ಐಕ್ಯತೆಯಿಂದಿದ್ದಾರೆ. ನನಗೆ ಸಮಸ್ಯೆಯಾಗಿರುವುದನ್ನು ಕಂಡು ಎಲ್ಲರೂ ಸ್ಪಂದನೆ ನೀಡಿದ್ದಾರೆ. ನನ್ನ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿರುವ ಫೋಟೋವನ್ನು ಕೆಲವು ಮತೀಯವಾದಿಗಳು ಇದನ್ನೇ ತಿರುಚಿ ತಮ್ಮ ಫೇಸ್ಬುಕ್ನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ, ಇದರ ವಿರುದ್ಧ ಕೆಟ್ಟ ಕಮೆಂಟ್ಗಳನ್ನು ಹಾಕಿ, ಮೊಬೈಲ್ ಮೂಲಕ ಹರಿದಾಡಿಸುತ್ತಿರುವವರ ವಿರುದ್ಧ ಶನಿವಾರ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಲಿದ್ದೇನೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.