ಸೀ ವೀಡ್ ಕೃಷಿ ಯೋಜನೆಗೆ ಉತ್ತೇಜನ
ಕೇಂದ್ರ ಮೀನುಗಾರಿಕೆ ಸಹಾಯಕ ಸಚಿವ ಮುರುಗನ್ ಅವರಿಂದ ಬಂದರಿಗೆ ಭೇಟಿ, ಮೀನು ಕೃಷಿ ಘಟಕಗಳ ಪರಿಶೀಲನೆ
Team Udayavani, Oct 18, 2021, 5:00 AM IST
ಮಂಗಳೂರು: ದೇಶದಲ್ಲೇ ಮೊದಲೇ ಬಾರಿಗೆ ಸೀ ವೀಡ್ (ಸಮುದ್ರ ಕಳೆ) ಕೃಷಿ ಯೋಜನೆ ಜಾರಿಗೆ ತರಲಾಗಿದ್ದು, ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಸೀ ವೀಡ್ ಆರ್ಥಿಕ ಪಾರ್ಕ್ ಅನ್ನು ತಮಿಳುನಾಡಿನಲ್ಲಿ ಸ್ಥಾಪಿಸಲಾಗುವುದು.
ಕರ್ನಾಟಕದಲ್ಲೂ ಸೀ ವೀಡ್ ಕೃಷಿಗೆ ಉತ್ತೇಜನ ನೀಡಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ವಾರ್ತಾ ಮತ್ತು ಪ್ರಸಾರ ಇಲಾಖೆ ರಾಜ್ಯ ಸಚಿವ ಡಾ|ಎಲ್ ಮುರುಗನ್ ಹೇಳಿದರು.
ಬೈಕಂಪಾಡಿಯಲ್ಲಿರುವ ಐಸ್ ಪ್ಲ್ರಾಂಟ್, ಕುಳಾಯಿಯ ಮಾಸ್ಟರ್ ಕೋಲ್ಡ್ ಸ್ಟೋರೇಜ್, ಬಂಗ್ರ ಕೂಳೂರಿ ನಲ್ಲಿ ಪಂಜರ ಮೀನು ಕೃಷಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಸೀ ವೀಡ್ ಎಕನಾಮಿಕ್ ಪಾರ್ಕ್
ಕಡಲ ಪಾಚಿಯನ್ನು (ಸೀ ವೀಡ್) ಔಷಧ, ಪೌಷ್ಟಿಕ ಆಹಾರ, ಗೊಬ್ಬರವಾಗಿ ಬಳಕೆ ಮಾಡಲಾಗುತ್ತಿದ್ದು, ದೇಶ ವಿದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಈ ಕೃಷಿ ಮುಖ್ಯವಾಗಿ ಮೀನುಗಾರ ಮಹಿಳೆಯರಿಗೆ ಉದ್ಯೋಗ ನೀಡುವುದಲ್ಲದೆ, ಆರ್ಥಿಕ ಸಶಕ್ತೀಕರಣಕ್ಕೂ ಕಾರಣ ವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರವು ಸೀ ವೀಡ್ ಎಕನಾಮಿಕ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದೆ ಎಂದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನು ಹಾಗೂ ಮೀನಿನ ಉತ್ಪನ್ನಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ದೇಶದಲ್ಲಿ ಹೊಸದಾಗಿ ಐದು ಅತ್ಯಾಧುನಿಕ ಮೀನುಗಾರಿಕಾ ಬಂದರು ನಿರ್ಮಾಣವನ್ನೂ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದು, ಶೀಘ್ರವೇ ಈ ಕೆಲಸ ಆರಂಭವಾಗಲಿದೆ. ಕೋವಿಡ್ ಅವಧಿಯಲ್ಲಿ ಪ್ರಧಾನಿ ಮೋದಿ ಅವರು 20 ಸಾವಿರ ಕೋ.ರೂ.ಗಳನ್ನು ಮೀನುಗಾರಿಕಾ ಕ್ಷೇತ್ರಕ್ಕೆ ಮೀಸಲಿರಿಸಿದ್ದಾರೆ. ಇದರಿಂದಾಗಿ ಮೀನುಕಾರಿಕಾ ಕ್ಷೇತ್ರದಲ್ಲಿ ಆಶಾಭಾವ ಮೂಡಿದೆ ಎಂದರು.
ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ
ಕೋವಿಡ್ ಇದ್ದರೂ ಮೀನು ಹಾಗೂ ಅದರ ಉತ್ಪನ್ನಗಳ ರಫ್ತು ಪ್ರಮಾಣ ಏರಿಕೆಯಾಗಿದೆ. ಒಳನಾಡು ಮೀನುಗಾರಿಕೆಯಲ್ಲೂ ಸಾಕಷ್ಟು ಅಭಿವೃದ್ಧಿಯಾಗಿದೆ. ಮೀನು ಕೃಷಿಯಿಂದ ತೊಡಗಿ ರಫ್ತು ಮಾಡುವವರೆಗೂ ವಿವಿಧ ರೀತಿಯ ಘಟಕಗಳ ಸ್ಥಾಪನೆಗೆ ಶೇ.40ರಿಂದ 60ರ ವರೆಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದರು.
ಸಚಿವ ಎಸ್.ಅಂಗಾರ, ಶಾಸಕ ಡಾ| ವೈ.ಭರತ್ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ದ.ಕ.-ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಾಚಾರ್ಯ, ಜಿಲ್ಲಾ ಉಪನಿರ್ದೇಶಕ (ಪ್ರಭಾರ) ಹರೀಶ್ ಕುಮಾರ್, ಕಾರ್ಪೋರೇಟರ್ ಕಿರಣ್ ಕುಮಾರ್, ಸುಮಿತ್ರಾ ಕರಿಯಾ ಉಪಸ್ಥಿತರಿದ್ದರು.
ಮೀನು ರಫ್ತಿಗೆ ಆದ್ಯತೆ: ಸಚಿವ ಅಂಗಾರ
ಸಚಿವ ಎಸ್. ಅಂಗಾರ ಮಾತನಾಡಿ, ರಾಜ್ಯದಲ್ಲಿ ಸೀ ವೀಡ್ ಕೃಷಿಗೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಸ್ಥಳಗಳನ್ನು ಗುರುತಿಸಲಾಗಿದೆ. ಕರಾವಳಿಯಲ್ಲಿ ಸಿಗುವ ಮಡೆಂಜಿ, ಮುಗುಡು ಮೀನನ್ನು ರಫ್ತು ಮಾಡುವ ಚಿಂತನೆ ನಡೆಸಲಾಗಿದ್ದು, ಇದರಿಂದ ಬೇಡಿಕೆ ಜತೆಗೆ ಮೀನುಗಾರರಿಗೆ ಉತ್ತಮ ಬೆಲೆಯೂ ಸಿಗುವ ಸಾಧ್ಯತೆಯಿದೆ. ಮೂಡು ಬಿದಿರೆಯ ನಿಡ್ಡೋಡಿಯಲ್ಲಿ ಸೀ ಫುಡ್‌ಪಾರ್ಕ್ ಕುರಿತಂತೆ ಸಾರ್ವಜನಿಕರಲ್ಲಿ ಇರುವ ಗೊಂದಲ ಪರಿಹರಿಸಿ ಯೋಜನೆ ಮುಂದುವರಿಸಲು ಉದ್ದೇಶಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.