ಮೂಲ್ಕಿ ನಗರ ಪಂಚಾಯತ್ ಎದುರು ಪ್ರತಿಭಟನೆ
Team Udayavani, Dec 22, 2017, 10:54 AM IST
ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ 8-9 ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದು, ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ನಗರ ಪಂಚಾಯತ್ ವಿಪಕ್ಷ ನಾಯಕಿ ವಿಮಲಾ ಪೂಜಾರಿ ಹೇಳಿದರು.
ಕಾರ್ನಾಡು ಸದಾಶಿವ ರಾವ್ ನಗರದ ನಿವಾಸಿಗಳಿಗೆ ಕೆಲವು ದಿನಗಳಿಂದ ವಾರಕ್ಕೊಮ್ಮೆ ಕೇವಲ 500 ಲೀಟರ್ ನೀರನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ, ಗುರುವಾರ ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು. ಸರಕಾರ ಕೋಟ್ಯಂತರ ರೂ. ಅನುದಾನವನ್ನು ನ.ಪಂ.ಗೆ ನೀಡುತ್ತಿದ್ದರೂ ನೀರಿನ ಬವಣೆಯನ್ನು ನೀಗಿಸುವಲ್ಲಿ ನಗರ ಪಂಚಾಯತ್ ವಿಫಲವಾಗಿದೆ ಎಂದು ಸದಸ್ಯ ಯೋಗೀಶ್ ಕೋಟ್ಯಾನ್ ಹೇಳಿದರು.
ನಿರ್ಲಕ್ಷ್ಯವೇ ಕಾರಣ
ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಬಿ.ಎಂ. ಆಸೀಫ್ ಮಾತನಾಡಿ, ನೀರಿನ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಮಾಸಿಕ ಸಭೆಯಲ್ಲಿ ನಾನು ಎಚ್ಚರಿಸಿದ್ದರೂ, ಆಡಳಿತದ ನಿರ್ಲಕ್ಷ್ಯ ದಿಂದ ಈಗಲೇ ಸದಾಶಿವ ರಾವ್ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಬೇಕಾದೀತು ಎಂದು ಎಚ್ಚರಿಸಿದರು.
ಪ್ರತಿ ತಿಂಗಳು ಬಿಲ್ ಕೊಡಿ
ಸ್ಥಳೀಯ ಮುಖಂಡ ಮಾಂತಯ್ಯ ಸ್ವಾಮಿ ಮಾತನಾಡಿ, ಪ್ರತಿದಿನವೂ ನೀರು ನೀಡಬೇಕು ಹಾಗೂ ಅದರ ಬಿಲ್ ಅನ್ನು ಪ್ರತಿ ತಿಂಗಳು ನೀಡಬೇಕು. ಈಗ ವರ್ಷಕ್ಕೊಮ್ಮೆ ನೀಡುತ್ತಿರುವುದರಿಂದ ಪಾವತಿಸುವುದು ಕಷ್ಟವಾಗುತ್ತಿದೆ ಎಂದರು. ನ.ಪಂ. ಸದಸ್ಯರಾದ ಕಲಾವತಿ ಯಾನೆ ಕಲ್ಲವ್ವ, ಅಶೋಕ್ ಪೂಜಾರ್, ಮಾಜಿ ಸದಸ್ಯ ಗೊಲ್ಲಾಲಪ್ಪ, ಭೀಮಾಶಂಕರ್, ಮಂಜುನಾಥ ಕಂಬಾರ, ಎ.ಎಚ್. ಶಮೀರ್, ಮುಸ್ತಫಾ, ವೀರಯ್ಯ ಹಿರೇಮಠ ಮತ್ತಿತರರಿದ್ದರು.
ಸಮಸ್ಯೆ ಪರಿಹಾರಕ್ಕೆ ಆದ್ಯತೆ
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಇಂದೂ ಎಂ., ನೀರಿನ ಸಮಸ್ಯೆ ಪರಿಹರಿಸಲು ಪ್ರಥಮ ಆದ್ಯತೆ ನೀಡಿ ಶ್ರಮಿಸಲಾಗುತ್ತಿದೆ. ಈಗಾಗಲೇ ಆರಂಭಿಸಿರುವ ಬೋರ್ ವೆಲ್ ಮತ್ತು ಹಳೆ ಬೋರ್‌ವೆಲ್ ದುರಸ್ತಿ ಕೆಲಸ ಎರಡು ದಿನಗಳೊಳಗೆ ಪೂರ್ಣಗೊಳ್ಳಲಿದ್ದು, ನೀರಿನ ಸಮಸ್ಯೆಗೆ ಪರಿಹಾರ ನಿರೀಕ್ಷಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.