‘ಶಾಂತಿಯುತ ಹೋರಾಟ ಅವಗಣಿಸಬೇಡಿ’
Team Udayavani, Oct 25, 2018, 12:09 PM IST
ಸುರತ್ಕಲ್ : ಸ್ಥಳೀಯರಿಗೆ ರಾಷ್ಟ್ರೀ ಯ ಹೆದ್ದಾರಿ ಒಂದೇ ಸಂಚಾರ ನಾಡಿ ಎಂಬಂತಾಗಿದ್ದು, ಸರ್ವಿಸ್ ರಸ್ತೆಯಿಂದ ಹಿಡಿದು ಯಾವುದೇ ಮೂಲಸೌಲಭ್ಯ ಮರೀಚಿಕೆಯಾಗಿದೆ. ಶಾಂತಿಯುತ ಹೋರಾಟವನ್ನು ಅವಗಣಿಸದಿರಿ ಎಂದು ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ ಹೇಳಿದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಒತ್ತಾಯಿಸಿ ನಡೆಯುತ್ತಿರುವ ಹಗಲು ರಾತ್ರಿಯ ಮೂರನೇ ದಿನದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ಹೊಂಡ ಗುಂಡಿಗಳಿರುವ ಇದಕ್ಕೂ ಟೋಲ್ ನಿಗದಿಪಡಿಸಿ ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಿರುವುದನ್ನು ತಡೆಯಲು ಸಂಸದರು ಯಾವುದೇ ಪ್ರಯತ್ನ ಮಾಡುತ್ತಿಲ್ಲ . ಪದೇ ಪದೇ ಟೋಲ್ ಗೇಟ್ ಮುಚ್ಚುತ್ತೇವೆ ಎಂದು ಹೇಳಿರುವುದೇ ಸಾಧನೆ. ಅ. 30ರ ಬಳಿಕ ಮುಚ್ಚದೇ ಹೋದಲ್ಲಿ ಸಂಸದರೂ ನಮ್ಮ ಜತೆ ಬರಲಿ ಹೇಗೆ ಮುಚ್ಚುವುದು ಎಂಬುದನ್ನು ನಾವು ತೋರಿಸುತ್ತೇವೆ ಎಂದರು. ಸ್ಥಳೀಯರ ಓಡಾಟಕ್ಕೆ ಪ್ರತ್ಯೇಕ ರಸ್ತೆಯಿಲ್ಲ, ಅಪಘಾತಗಳು ಹೆಚ್ಚುತ್ತಿವೆ. ಇದೀಗ ಅಲ್ಲಲ್ಲಿ ಟೋಲ್‌ಗೇಟ್ ನಿರ್ಮಿಸಿ ಸುಂಕ ವಸೂಲಿ ಮಾಡಲಾಗುತ್ತಿದೆ. ಯಾವುದೇ ಸೌಲಭ್ಯವಿಲ್ಲದ ಸುರತ್ಕಲ್ ಟೋಲ್‌ಗೇಟ್ ನವೀಕರಣ ಮಾಡದೆ ಮುಚ್ಚಬೇಕು ಎಂದು ಆಗ್ರಹಿಸಿದರು.
ಟೋಲ್‌ಗೇಟ್‌ನಿಂದ ಅನ್ಯಾಯ
ಮಾಜಿ ಶಾಸಕ ವಿಜಯ್‌ಕುಮಾರ್ ಶೆಟ್ಟಿ ಮಾತನಾಡಿ, ಕೇವಲ ಕೆಲವು ಮಂದಿಗೆ ಮಾತ್ರ ಟೋಲ್‌ಗೇಟ್ ಹೋರಾಟ ಅಲ್ಲ. ಟೋಲ್‌ಗೇಟ್‌ನಿಂದ ಸಾವಿರಾರು ಮಂದಿಗೆ ಅನ್ಯಾಯವಾಗುತ್ತಿದೆ. ಈ ಹೋರಾಟಕ್ಕೆ ಸರ್ವರೂ ಬೆಂಬಲ ನೀಡಿ ಸುರತ್ಕಲ್ ಟೋಲ್‌ಗೇಟ್ ಮುಚ್ಚಿಸಲು ಹಕ್ಕೊತ್ತಾಯ ಮಂಡಿಸಬೇಕು ಎಂದು ಅವರು ಹೇಳಿದರು. ಹೋರಾಟದಲ್ಲಿ ಜಯಕರ್ನಾಟಕ ಸುರತ್ಕಲ್ ಘಟಕದ ಅಧ್ಯಕ್ಷ ವೈ. ರಾಘವೇಂದ್ರ ರಾವ್ ನೇತೃತ್ವದಲ್ಲಿ ರಿಕ್ಷಾ ಚಾಲಕರು, ಮಹಿಳೆಯರು ಬೆಳಗ್ಗಿನಿಂದ ಸಂಜೆವರೆಗೆ ಹೋರಾಟದಲ್ಲಿ ಪಾಲ್ಗೊಂಡರು. ಕಾರ್ಪೊರೇಟರ್‌ಗಳಾದ ದಯಾನಂದ ಶೆಟ್ಟಿ, ರೇವತಿ ಪುತ್ರನ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಚರಣ್ ಶೆಟ್ಟಿ, ಮಾಧುರಿ ಬೋಳಾರ, ಡಿವೈಎಫ್‌ಐ ಮುಖಂಡರಾದ ಇಮ್ತಿಯಾಝ್, ನಿತಿನ್ ಕುತ್ತಾರ್, ಕಮಲಾಕ್ಷ ಬಜಾಲ್, ಶೇಖರ ಶೆಟ್ಟಿ ಮುಂಚೂರು, ಹೊಟೇಲ್ ಉದ್ಯಮಿ ಟಿ.ಎನ್. ರಮೇಶ್, ಹುಸೈನ್ ಕಾಟಿಪಳ್ಳ, ಭಾಸ್ಕರ ಶೆಟ್ಟಿಗಾರ್, ಫಿಲೋಮಿನಾ ಹೊಸಬೆಟ್ಟು, ಆಶಾ ಬೋಳೂರು, ದಯಾನಂದ ಶೆಟ್ಟಿ ಕಡಂ ಬೋಡಿ ಮೊದಲಾದವರು ಈ ಸಂದರ್ಭ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.