ಕಾವೂರಿನಲ್ಲಿ ಸಾರ್ವಜನಿಕ ರುದ್ರಭೂಮಿ ಉದ್ಘಾಟನೆ
Team Udayavani, Dec 14, 2017, 12:04 PM IST
ಮಹಾನಗರ: ಕಾವೂರು ಮುಲ್ಲಕಾಡಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣಾ ಸಮಿತಿ ವತಿಯಿಂದ ಸರಕಾರದ ಅನುದಾನದಿಂದ ಸುಸಜ್ಜಿತಗೊಂಡ ರುದ್ರಭೂಮಿಯನ್ನು ಮೇಯರ್ ಕವಿತಾ ಸನಿಲ್ ಉದ್ಘಾಟಿಸಿದರು.
ಸ್ಥಳೀಯ ಮನಪಾ ಸದಸ್ಯ ದೀಪಕ್ ಕೆ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರುದ್ರಭೂಮಿಗೆ ಮಹಾನಗರ ಪಾಲಿಕೆಯಿಂದ 60 ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆಯಿಂದ 5 ಲ.ರೂ. ಮತ್ತು ಶಾಸಕ ಮೊದಿನ್ ಬಾವಾರಿಂದ 8 ಲಕ್ಷ ರೂ. ಮಂಜೂರಾಗಿದ್ದು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹಾಗೂ ಆಸರೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ| ಆಶಾ ಜ್ಯೋತಿ ರೈ ಅವರು ಈಶ್ವರ ಮೂರ್ತಿಯನ್ನು ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲು, ಬೊಕ್ಕಪಟ್ಣ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಡಾ|ವಾಸುದೇವ ಬೆಳ್ಳೆ, ಎ.ಜೆ.ಶೆಟ್ಟಿ ಆಸ್ಪತ್ರೆ ಪ್ರಾಂಶುಪಾಲ ಡಾ| ವೈ. ಭರತ್ ಶೆಟ್ಟಿ, ಪರಿಸರ ಪ್ರೇಮಿ ಮಾಧವ ಉಳ್ಳಾಲ್ , ಮಾಜಿ ಮಹಾನಗರ ಪಾಲಿಕೆ ಸದಸ್ಯ ಸುಚೇತನ್ ಪೂಜಾರಿ, ಆನಂದ ಪಾಂಗಾಳ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.