ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಪೂರ್ಣಕ್ಕೆ ಇನ್ನೂ ತಿಂಗಳು ಅವಶ್ಯ!
ಅಂತಿಮ ಗಡುವು ಬಂದರೂ ಗುರಿ ಮುಟ್ಟಲು ವಿಫಲ
Team Udayavani, Dec 30, 2019, 7:42 AM IST
ಮಹಾನಗರ: ಪಂಪ್‌ವೆಲ್ ಫ್ಲೈಓವರ್ ಕಾಮಗಾರಿಯನ್ನು ಡಿ. 31ಕ್ಕೆ ಪೂರ್ಣಗೊಳಿಸಿ, ಜ. 1ಕ್ಕೆ ಲೋಕಾರ್ಪಣೆ ಗೊಳಿಸಲಾಗುವುದು ಎಂಬ ಸಂಸದರ ಭರವಸೆಗೆ ಇನ್ನು ಒಂದು ಒಂದೇ ದಿನ ಬಾಕಿಯಿದ್ದು, ಸದ್ಯದ ಪ್ರಕಾರ ಕಾಮಗಾರಿ ವೇಗದಿಂದ ನಡೆಯುತ್ತಿದ್ದರೂ, ಪೂರ್ಣಗೊಳ್ಳಲು ಇನ್ನೂ ಒಂದೆರಡು ತಿಂಗಳ ಅವಶ್ಯವಿದೆ ಎಂದು ಹೇಳಲಾಗುತ್ತಿದೆ.
ಪಂಪ್‌ವೆಲ್ ಫ್ಲೈಒವರ್‌ನ ಕಾಮಗಾರಿ ನಡೆಸುತ್ತಿರುವ ಪ್ರದೇಶಕ್ಕೆ ರವಿವಾರ ಭೇಟಿ ನೀಡಿದ “ಸುದಿನ ತಂಡ’ ವಾಸ್ತವ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡಾಗ; “ಕಾಮಗಾರಿ ಪೂರ್ಣವಾಗಲು ಕನಿಷ್ಠ 3 ತಿಂಗಳು ಬೇಕಾಗಬಹುದು’ ಎಂದು ಕಾರ್ಮಿಕರು ಹೇಳುತ್ತಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ “ಮುಂದಿನ 20 ದಿನದೊಳಗೆ ಕಾಮಗಾರಿ ಪೂರ್ಣವಾಗಲಿದೆ’ ಎನ್ನುತ್ತಾರೆ. ಹೀಗಾಗಿ, ಜ. 1ಕ್ಕೆ ಉದ್ಘಾಟನೆ ಎಂಬ ಸಂಸದರ ಭರವಸೆ ಮಾತ್ರ ಮುಂದೂಡಿಕೆಯಾಗುವ ಎಲ್ಲ ಸಾಧ್ಯತೆಗಳಿವೆ.
ಕೆಲವು ಸಮಯದಿಂದ ಫ್ಲೈಓವರ್ ಕಾಮಗಾರಿ ವೇಗ ಪಡೆದಿದ್ದರೂ ಅಂತಿಮ ಹಂತದ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ. ಅದರಲ್ಲಿಯೂ ಕರ್ಣಾ ಟಕ ಬ್ಯಾಂಕ್ ಕೇಂದ್ರ ಕಚೇರಿ ಭಾಗದಿಂದ ಫ್ಲೈಓವರ್ ಗರ್ಡರ್ ಸಂಪರ್ಕ ಭಾಗದಲ್ಲಿನ ಕಾಮಗಾರಿ ಈಗಷ್ಟೇ ಆಗಬೇಕಾಗಿ ರುವುದರಿಂದ ಇನ್ನೂ ಕೆಲವು ದಿನಗಳ ಆವಶ್ಯಕತೆ ಇದೆ.
ಆಗಿದ್ದೇನು? ಆಗಬೇಕಾದದ್ದೇನು?
ಇಂಡಿಯಾನ ಆಸ್ಪತ್ರೆಯ ಭಾಗದಿಂದ ಫ್ಲೈಓವರ್ ಗರ್ಡರ್ ಸಂಪರ್ಕದ ಭಾಗಕ್ಕೆ ಬಹುತೇಕ ಕಾಮಗಾರಿ ಮುಗಿದಿದೆ. ಆಸ್ಪತ್ರೆಯ ಎಡಭಾಗದಿಂದ ಉಜ್ಜೋಡಿ ಕಡೆಗೆ ಸಂಪರ್ಕ ರಸ್ತೆ ಕಾಮಗಾರಿ ಈಗಷ್ಟೇ ನಡೆಯುತ್ತಿದೆ. ಉಜೊjàಡಿಯಲ್ಲಿ ಅಂಡರ್‌ಪಾಸ್ ಕಾಮಗಾರಿ ಮುಗಿದಿದೆಯಾದರೂ ಅದರ ಮೇಲ್ಭಾಗದಲ್ಲಿ ರಸ್ತೆ ಕಾಮಗಾರಿ ಇನ್ನಷ್ಟೆ ಆಗಬೇಕಿದೆ. ಈ ಭಾಗದಲ್ಲಿ ಎರಡೂ ಬದಿಯಲ್ಲಿ ತಡೆಗೋಡೆ ಅಳವಡಿಕೆ ನಡೆಯಬೇಕಿದೆ. ಇನ್ನು, ಕರ್ಣಾಟಕ ಬ್ಯಾಂಕ್ ಕೇಂದ್ರ ಕಚೇರಿ ಮುಂಭಾಗದಲ್ಲಿ ಮಣ್ಣು ಹಾಕುವ ಕೆಲಸ ನಡೆಯುತ್ತಿದೆಯಾದರೂ ಇದು ರಾ.ಹೆ. ಸಂಪರ್ಕಿಸುವವರೆಗೆ ಆಗಬೇಕಾಗಿದೆ. ತಡೆಗೋಡೆ ಕಾಮಗಾರಿ ಇಲ್ಲಿಯೂ ಈಗಷ್ಟೇ ನಡೆಯುತ್ತಿದೆ. ಇನ್ನು, ಫ್ಲೈಓವರ್ ಪಕ್ಕದ ಬೃಹತ್ ಚರಂಡಿ ಕಾಮಗಾರಿಯು ಈಗ ಕೊನೆಯ ಹಂತದಲ್ಲಿ ನಡೆಯುತ್ತಿದೆ.
ಸಾರ್ವಜನಿಕರ ಟೀಕೆಯಿಂದಾಗಿ ಕಾಮಗಾರಿಗೆ ವೇಗ
ಪಂಪ್‌ವೆಲ್ ಫ್ಲೈಓವರ್ ತಡಗುತ್ತಿರುವುದರಿಂದಾಗಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಟೀಕೆಗಳು ವ್ಯಕ್ತವಾಗುತ್ತಿತ್ತು. ಅದರಲ್ಲಿಯೂ ಜ. 1ಕ್ಕೆ ಫ್ಲೈಓವರ್ ಉದ್ಘಾಟನೆ ಎಂಬ ಸಂಸದರ ಹೇಳಿಕೆ ವಿಧ ವಿಧಗಳಲ್ಲಿ ಟ್ರೋಲ್ ಆಗಿತ್ತು. ಸಾರ್ವಜನಿಕರ ಟೀಕೆ-ಆಕ್ಷೇಪಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಇದರ ಕಾಮಗಾರಿಯೂ ಕೂಡ ವೇಗ ಪಡೆದಿತ್ತು. ಜಿಲ್ಲಾ ಕಾಂಗ್ರೆಸ್‌ನಿಂದ ಸತ್ಯಶೋಧನ ಸಮಿತಿ ರಚಿಸಿದರಾದರೂ ಅದರ ವರದಿ ಮಾತ್ರ ಇನ್ನೂ ಸಿದ್ಧವಾಗಿಲ್ಲ.
ಗಡಿಬಿಡಿಯಿಂದ ಲೋಪಗಳಾಗದಿರಲಿ!
ಫ್ಲೈಓವರ್ ಕಾಮಗಾರಿಯನ್ನು ಇದೀಗ ಪ್ರತಿಷ್ಠೆಯಾಗಿ ಸ್ವೀಕರಿಸಿದ ಕಾರಣದಿಂದ ಕಾಮಗಾರಿ ಪೂರ್ಣಗೊಂಡರೆ ಸಾಕು ಎಂದು ರಾ.ಹೆ.ಪ್ರಾಧಿಕಾರದವರು ನಿರ್ಧರಿಸಿದಂತಿದೆ. ಇದಕ್ಕಾಗಿ ಗಡಿಬಿಡಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಮುಂದೆ ಸಮಸ್ಯೆ ಆಗಬಹುದು ಎಂಬ ಆಕ್ಷೇಪವೂ ಇದೀಗ ಕೇಳಿಬರುತ್ತಿದೆ. “ಈಗಾಗಲೇ ತೊಕ್ಕೊಟು ಫ್ಲೈಓವರ್ ಕಾಮಗಾರಿ ತರಾತುರಿಯಲ್ಲಿ ಮುಗಿಸಿದ ಬಳಿಕ ಇದೀಗ ಫ್ಲೈಓವರ್‌ನ ಒಂದು ಭಾಗದಲ್ಲಿ ಲೋಪಗಳಾದ ಕಾರಣದಿಂದ ಅಲ್ಲಿ ಭದ್ರತೆಯ ಕಾಮಗಾರಿ ಈಗ ನಡೆಸಲಾಗುತ್ತಿದೆ. ಇಂತಹ ಅಚಾತುರ್ಯ ಪಂಪ್‌ವೆಲ್‌ನಲ್ಲಿಯೂ ನಡೆಯಬಾರದು’ ಎಂದು ಪ್ರಯಾಣಿಕ ರಾಜೇಶ್ ಅವರು “ಸುದಿನ’ ಜತೆಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಫ್ಲೈಓವರ್ ಎತ್ತರ ಹೆಚ್ಚಳಕ್ಕೆ ರಸ್ತೆ ಅಗೆತ!
ಪಂಪ್‌ವೆಲ್ ಫ್ಲೈಓವರ್ ನಿರ್ಮಾಣ ನಿಧಾನವಾಗುತ್ತಿದೆ ಎಂಬ ಸಾರ್ವತ್ರಿಕ ಟೀಕೆಯ ಮಧ್ಯೆಯೇ ಇದೀಗ ಫ್ಲೈಓವರ್‌ನ ಕೆಳಭಾಗದ ಎತ್ತರ ಕಡಿಮೆಯಾದ ಕಾರಣ ಈಗ ತಳಭಾಗದ ರಸ್ತೆಯನ್ನೇ ಅಗೆದು ತಗ್ಗಿಸಲಾಗುತ್ತಿದೆ. ಇಂಡಿಯನ್ ರೋಡ್ಸ್ ಕಾಂಗ್ರೆಸ್ (ಐಆರ್‌ಸಿ) ನಿಯಮದಂತೆ ಫ್ಲೆ$çಓವರ್‌ನ ಕೆಳಭಾಗದ ಎತ್ತರ 5.50 ಮೀ. ಎತ್ತರವಿರಬೇಕು. ಆದರೆ, ಪಂಪ್‌ವೆಲ್ ಫ್ಲೈಓವರ್ ಅನ್ನು ಕೇವಲ 4.5 ಮೀ. ಎತ್ತರದಲ್ಲಿ ನಿರ್ಮಿಸಲಾಗಿದೆ. ಈ ಬಗ್ಗೆ ಆರಂಭದಲ್ಲಿಯೇ ಸಾಕಷ್ಟು ಆಕ್ಷೇಪ, ಕೆಲವು ಬೃಹತ್ ಗಾತ್ರದ ವಾಹನ ಫ್ಲೈಓವರ್ ಕೆಳಗೆ ಸಿಲುಕಿ ಸಮಸ್ಯೆ ಆಗಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನವಾಗಿದ್ದರು. ಆದರೆ ಈಗ ಎಚ್ಚೆತ್ತುಕೊಂಡ ಅಧಿಕಾರಿಗಳು ಫ್ಲೈಓವರ್ ತಳಭಾಗದ ರಸ್ತೆಯನ್ನೇ ಅಗೆದು ತಗ್ಗಿಸುವುವ ಕಾಮಗಾರಿ ಆರಂಭಿಸಿದ್ದಾರೆ. ಹಾಲಿ ರಸ್ತೆಯನ್ನು 1 ಮೀ. ನಷ್ಟು ತಗ್ಗಿಸಲಾಗುತ್ತಿದ್ದು, ಇದು ಮಳೆಗಾಲಕ್ಕೆ ಇನ್ನೊಂದು ಸಮಸ್ಯೆ ಸೃಷ್ಟಿಸುವ ಎಲ್ಲ ಸಾಧ್ಯತೆಗಳೂ ಇವೆ.
20 ದಿನಗಳೊಳಗೆ ಪೂರ್ಣ
ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ವೇಗದಿಂದ ನಡೆಯುತ್ತಿದ್ದು, ಇದೀಗ ಕೊನೆಯ ಹಂತದಲ್ಲಿದೆ. ಮಳೆಯ ಸಮಸ್ಯೆ, ಕಪ್ಯೂ ಹಿನ್ನೆಲೆಯಲ್ಲಿ ಕೊಂಚ ದಿನ ಕಾಮಗಾರಿ ತಡವಾಗಿತ್ತು. ಮುಂದಿನ 20 ದಿನದೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ. ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಕಾಮಗಾರಿ ನಡೆಸುತ್ತಿರುವುದರಿಂದ ಕೊಂಚ ದಿನ ತಡವಾದರೂ, ಸಾರ್ವಜನಿಕರು ನಮಗೆ ಸಹಕಾರ ನೀಡಬೇಕಿದೆ.
- ಶಿಶುಮೋಹನ್, ಯೋಜನ ನಿರ್ದೇಶಕರು, ರಾ.ಹೆದ್ದಾರಿ ಪ್ರಾಧಿಕಾರ, ಮಂಗಳೂರು
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.