ಬೆತ್ತ ಸಹಿತ ಕಂಬಳಕ್ಕೆ ಪ್ರಯತ್ನ : ಡಿವಿಎಸ್
Team Udayavani, Dec 24, 2018, 11:52 AM IST
ಪುಂಜಾಲಕಟ್ಟೆ: ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಈ ಹಿಂದಿನ ಪದ್ಧತಿಯಂತೆ ಬೆತ್ತ ಹಿಡಿದು ಕಂಬಳ ನಡೆಸುವಂತಾಗಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಬಂಟ್ವಾಳ – ಬೆಳ್ತಂಗಡಿ ತಾ|ಗಳ ಗಡಿ ಭಾಗದಲ್ಲಿರುವ ಎಲಿಯನಡುಗೋಡು ಗ್ರಾಮದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ನಡೆದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದ ಸಮಾರೋಪದಲ್ಲಿ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಬಾರಾಡಿ ಕಂಬಳ ಸಮಿತಿ ಅಧ್ಯಕ್ಷ ಡಾ| ಜೀವಂದರ್ ಬಲ್ಲಾಳ್, ಜಿಲ್ಲಾ ಕಂಬಳ ಸಮಿತಿ ಗೌರವ ಸಲಹೆಗಾರ ಗುಣಪಾಲ ಕಡಂಬ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಅಡ್ವೆ ನಂದಿಕೂರು ಕಂಬಳ ಸಮಿತಿ ಅಧ್ಯಕ್ಷ ಕೊಳಚೂರು ಕುಂಡೊಟ್ಟು ಸುಕುಮಾರ ಶೆಟ್ಟಿ, ಬಾರಾಡಿ ಬೀಡು ಶ್ರೇಯಶ್ ಬಲ್ಲಾಳ್, ಜಪ್ಪು ಮನ್ಕು ತೋಟಗುತ್ತು ಸಾಚಿ ಅನಿಲ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಬಾರ್ಕೂರುಗುತ್ತು ಶಾಂತಾರಾಮ ಶೆಟ್ಟಿ ಮತ್ತು ಏತಮೊಗರುಗುತ್ತು ಜಯ ಶೆಟ್ಟಿ ಉಪಸ್ಥಿತರಿದ್ದರು.
ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಕಂಬಳ ಸಮಿತಿ ಅಧ್ಯಕ್ಷ ನೋಣಾಲ್‌ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ, ಪದಾಧಿಕಾರಿಗಳಾದ ಬಾಬು ರಾಜೇಂದ್ರ ಶೆಟ್ಟಿ ಅಜ್ಜಾಡಿ, ಎಚ್. ಹರೀಶ್ ಹಿಂಗಾಣಿ, ಸಂದೇಶ್ ಶೆಟ್ಟಿ ಪೊಡುಂಬ, ಪುಷ್ಪರಾಜ ಜೈನ್ ನಡ್ಯೋಡಿ, ಹರಿಪ್ರಸಾದ್ ಶೆಟ್ಟಿ ಕುರ್ಡಾಡಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಪ್ರವೀಣ್ ಶೆಟ್ಟಿ ಮಾವಿನಕಟ್ಟೆ, ಕಿರಣ್ ಕುಮಾರ್ ಮಂಜಿಲ, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಜನಾರ್ದನ ಬಂಗೇರ ತಿಮರಡ್ಡ, ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಎಚ್. ಹುಲಿಮೇರು, ಕೃಷ್ಣ ಶೆಟ್ಟಿ ಉಮನೊಟ್ಟು, ಉಮೇಶ್ ಶೆಟ್ಟಿ ಕೊನೆರೊಟ್ಟು, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ರಾಜೇಶ್ ಶೆಟ್ಟಿ ಸಿದ್ದಕಟ್ಟೆ, ಸಾಧು ಶೆಟ್ಟಿ ಕಲ್ಲಾಪು, ಜನಾರ್ದನ ನಾಯ್ಕ ಸಿದ್ದಕಟ್ಟೆ, ಎಚ್.ಎ. ರೆಹಮಾನ್ ಹೊಕ್ಕಾಡಿಗೋಳಿ, ರಮೇಶ್ ಪೂಜಾರಿ ಕುಂಜಾಡಿ, ಸುರೇಶ್ ಕೆ. ಶೆಟ್ಟಿ ಹಕ್ಕೇರಿ, ಸುಧೀರ್ ಶೆಟ್ಟಿ ಹೊಕ್ಕಾಡಿಗೋಳಿ, ರಾಜು ಗುಮ್ಮಣ್ಣ ಶೆಟ್ಟಿ ಹೊಕ್ಕಾಡಿಗೋಳಿ, ಸುಧಾಕರ ಚೌಟ ಬಾವ ಹೊಸಬೆಟ್ಟು, ಹರೀಶ್ ಶೆಟ್ಟಿ ಹೊಕ್ಕಾಡಿಗೋಳಿ, ಟಿ. ನರಸಿಂಹ ಪೈ ಮಾವಿನಕಟ್ಟೆ, ಆನಂದ ಶೆಟ್ಟಿ ಹಕ್ಕೇರಿ, ಸಂತೋಷ್ ಮಂಜಿಲ, ಸುರೇಶ್ ಎಂ. ಶೆಟ್ಟಿ ಹಕ್ಕೇರಿ, ರಾಧಕೃಷ್ಣ ಶೆಟ್ಟಿ ಉಗ್ರೋಡಿ, ರಘುರಾಮ್ ಶೆಟ್ಟಿ ದೇವಸ್ಯ, ಭುಜಂಗ ಶೆಟ್ಟಿ ಹೊಕ್ಕಾಡಿಗೋಳಿ, ನವೀನ್ ಕುಂಜಾಡಿ, ಲೋಕನಾಥ್ ಶೆಟ್ಟಿ ಪಮುಂಜ, ಗಿರೀಶ್ ಕರ್ಪ, ನವೀನ ಹೆಗ್ಡೆ ಮಂಚಕಲ್ಲು ಮತ್ತಿತರರಿದ್ದರು.
ಸಮ್ಮಾನ
ಈ ಸಂದರ್ಭ ಕಂಬಳ ಸಂಘಟಕ, ಪ್ರಧಾನ ತೀರ್ಪುಗಾರ ಬೆಳ್ಳಿಪ್ಪಾಡಿ ಮಂಜಯ್ಯ ರೈ ಅವರನ್ನು ಸಮ್ಮಾನಿಸಲಾಯಿತು. ಸಮಿತಿ ಗೌರವ ಸಲಹೆಗಾರ ಸುರೇಶ್ ಶೆಟ್ಟಿ ಸಿದ್ದಕಟ್ಟೆ ಸ್ವಾಗತಿಸಿ, ಜಿಲ್ಲಾ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ ನಿರೂಪಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ. ರಮಾನಾಥ ರೈ, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಜಿ.ಪಂ. ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಬಿ. ಪದ್ಮಶೇಖರ ಜೈನ್, ಎಪಿಎಂಸಿ ಸದಸ್ಯ ಎಂ. ಪದ್ಮರಾಜ ಬಲ್ಲಾಳ್, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಹುಲಿಮೇರು ಜಿ.ಪಂ. ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಬಿ. ಪದ್ಮಶೇಖರ ಜೈನ್, ಎಪಿಎಂಸಿ ಸದಸ್ಯ ಎಂ. ಪದ್ಮರಾಜ ಬಲ್ಲಾಳ್ ಮಾವಂತೂರು, ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಅಧ್ಯಕ್ಷ ಎಂ. ದುರ್ಗಾದಾಸ್ ಶೆಟ್ಟಿ ಮಾವಂತೂರು, ತಾ.ಪಂ. ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಚೆನ್ನೈತ್ತೋಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಪಂಜಿಕಲ್ಲು ಗ್ರಾ.ಪಂ. ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.
ವಿಜೃಂಭಿಸಲಿ
ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿ, ಕಂಬಳ ಕ್ರೀಡೆ ನಮ್ಮ ಮಣ್ಣಿನ ಸಂಸ್ಕೃತಿಯಾಗಿದ್ದು, ಕೃಷಿಕರ ಜೀವನದ ಭಾಗವಾಗಿದೆ. ತುಳುನಾಡಿನಲ್ಲಿ ಗ್ರಾಮೀಣ ಜನತೆಯ ಕೃಷಿ ಚಟುವಟಿಕೆಯ ಭಾಗವಾಗಿರುವ ಕಂಬಳದಿಂದ ಜನರು ಸಂತಸ ಪಡೆಯುತ್ತಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕಂಬಳವು ವಿಜೃಂಭಿಸಲಿ ಎಂದು ತಿಳಿಸಿದರು.
ಅಟಾರ್ನಿ ಜನರಲ್ ಜತೆ ಮಾತುಕತೆ
ಕಂಬಳದ ಕುರಿತು ಪ್ರಕರಣ ಉಚ್ಚ ನ್ಯಾಯಾಲಯದಲ್ಲಿರುವ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್ ಜತೆ ಮಾತುಕತೆ ನಡೆಸಲಾಗುವುದು. ಕಂಬಳದಲ್ಲಿ ಹಿಂದಿನಿಂದಲೂ ಬೆತ್ತ ಹಿಡಿಯುವ ಸಂಪ್ರದಾಯವಿದ್ದು, ಅದು ಕಂಬಳದ ಪದ್ಧತಿಯಾಗಿದೆ. ಈ ಹಿಂದಿನ ಸಂಪ್ರದಾಯದಂತೆ ಬೆತ್ತ ಹಿಡಿದು ಕಂಬಳ ನಡೆಸುವಂತಾಗಬೇಕು. ಕಂಬಳ ತುಳುನಾಡಿನ ಜನರ ಭಾವನಾತ್ಮಕ ಕ್ರೀಡೆಯಾಗಿದೆ. ಅಹಿಂಸಾತ್ಮಕವಾಗಿ ಕಂಬಳ ನಡೆಯಬೇಕು. ಲಕ್ಷಾಂತರ ಜನರ ಪ್ರೀತಿ, ವಿಶ್ವಾಸದ ಕಂಬಳ ಉಳಿಸುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸುವೆ.
- ಡಿ.ವಿ. ಸದಾನಂದ ಗೌಡ ಕೇಂದ್ರ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.