ದರ್ಬೆಯಲ್ಲಿ ಮನರಂಜಿಸಿದ ‘ಪುತ್ತೂರ ಕಲೋತ್ಸವ -2018’
Team Udayavani, Apr 20, 2018, 2:36 PM IST
ದರ್ಬೆ: ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಸಹಜ್ ರೈ ಸಾರಥ್ಯದಲ್ಲಿ ಆ್ಯಕ್ಸನ್ ಫ್ರೆಂಡ್ಸ್ ಪುತ್ತೂರು ಅರ್ಪಿಸುವ ಮ್ಯೂಸಿಕಲ್ ನೈಟ್ ‘ಪುತ್ತೂರ ಕಲೋತ್ಸವ-2018’ ಕಾರ್ಯಕ್ರಮವು ದರ್ಬೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ| ಮೋಹನ ಆಳ್ವ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸುಂದರ ಮನಸ್ಸು ಕಟ್ಟಿ ಅದರಲ್ಲಿ ಉತ್ತಮ ಸಂದೇಶ ಸಾರಲಾಗುತ್ತದೆ. ಯಾವ ದೇಶದಲ್ಲೂ ಇಂತಹ ಶಾಸ್ತ್ರೀಯವಾದ ಕಲೆಗಳಿರಲು ಸಾಧ್ಯವಿಲ್ಲ ಎಂದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆಯ ಜೊತೆಗೆ ಸುಂದರ ಮನಸ್ಸು ಕಟ್ಟಿ ಧರ್ಮ ಜಾಗೃತಿ ಮಾಡುವ ವಿದ್ಯಾಭ್ಯಾಸ ನೀಡುವ ಬಹುದೊಡ್ಡ ಕಾರ್ಯ ನಡೆಸಲಾಗುತ್ತಿದೆ. ಧರ್ಮದ ಜೊತೆಗೆ ಸಾಂಸ್ಕೃತಿಕ ಬದುಕನ್ನು ಸೂರ್ಯಚಂದ್ರರಿರುವಷ್ಟು ಕಾಲ ನಡೆಸಿಕೊಂಡು ಹೋಗಬೇಕು. ಎಲ್ಲರಲ್ಲೂ ಸೌಂದರ್ಯ ಪ್ರಜ್ಞೆಯಿದ್ದು ದೇಶದ ಬಹುದೊಡ್ಡ ಸಂಪತ್ತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕರುಣಾಕರ ರೈ ಮಾತನಾಡಿ, ಉತ್ತಮ ಸಂಘಟನೆಯ ಮೂಲಕ ಸಹಜ್ ರೈ ಅವರು ನಡೆಸುತ್ತಿರುವ ಕಾರ್ಯಕ್ರಮಗಳು ಪ್ರತಿವರ್ಷ ನಡೆಯಲಿ ಎಂದು ಹಾರೈಸಿದರು.
ಡಾ| ಹರ್ಷಕುಮಾರ್ ರೈ ಮಾಡಾವು ಮಾತನಾಡಿ, ಇಂತಹ ಆಕರ್ಷಣೆಯ ಕಾರ್ಯ ಕ್ರಮಗಳು ಜಾತ್ರೆಯ ಸೌಂದರ್ಯವನ್ನು ಹೆಚ್ಚಿಸಿದೆ ಎಂದರು. ಪ್ರಮುಖರಾದ ದೀಪಕ್, ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟಕ ಸಹಜ್ ರೈ ಬಳೆಜ್ಜ ಸ್ವಾಗತಿಸಿ, ಸೌಜನ್ಯಾ ಹೆಗ್ಡೆ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ
Bellary; ಪ್ರಿಯಾಂಕ್ ಖರ್ಗೆ ರಾಜೀನಾಮೆ ಖಂಡಿಸಿ ಬಿಜೆಪಿ ಪ್ರತಿಭಟನೆ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.