ಪುತ್ತೂರು2 ಪ್ರಕರಣ ಪತ್ತೆ:ಜಾಗ್ರತೆ ವಹಿಸಲು ಪಿಡಿಒಗಳಿಗೆ ತಾ.ಪಂ.ಸೂಚನೆ


Team Udayavani, Aug 3, 2017, 6:25 AM IST

zzzx.jpg

ಯಂತ್ರ ಬಳಸಿ ಉದ್ಯೋಗ ಖಾತ್ರಿ ಯೋಜನೆ ದುರುಪಯೋಗ
ಪುತ್ತೂರು: ಉದ್ಯೋಗ ಖಾತ್ರಿ ಯೋಜನೆ ಯಡಿ ಜೇಸಿಬಿ ಮೂಲಕ ಕೆಲಸ ಮಾಡಿಸಿದ ಪ್ರಕರಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಅಡಿಕೆ ಮರಗಳನ್ನು ನಡೆಲು ಗುಂಡಿ ತೋಡುವುದಕ್ಕೂ ಯಂತ್ರಗಳನ್ನು ಬಳಸಿದ ಪ್ರಸಂಗಗಳು ನಡೆದಿವೆ. ಈ ಸಂಬಂಧ ಎರಡು ದೂರುಗಳು ತಾಲೂಕು ಪಂಚಾಯತ್‌ಗೆ ಬಂದಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ.ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಸಣ್ಣ-ಪುಟ್ಟ ಅವಕಾಶ ಸಿಕ್ಕರೂ. ಯಂತ್ರಗಳನ್ನು ಬಳ ಸಲಾಗುತ್ತದೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬಂದಿತ್ತು. ರಾಜ್ಯದ ಕೆಲವೆಡೆ ಹಲವು ಪ್ರಕರಣ ಗಳೂ ನಡೆದಿದ್ದವು. ಈಗ ಅಂಥ ಪ್ರಕರಣಗಳು ಪುತ್ತೂರು ತಾಲೂಕಿನಲ್ಲೂ ನಡೆದಿವೆ.

ದೂರುಗಳ ಹಿನ್ನೆಲೆಯಲ್ಲಿ ತಾಲೂಕು ಪಂಚಾ ಯಿತ್‌ ಎಲ್ಲ ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ ಕರೆದು ಕಟ್ಟು ನಿಟ್ಟಿನ ಸೂಚನೆ ನೀಡಿದೆ. ನರೇಗಾ ಯೋಜನೆಯಡಿ ಜಾಬ್‌ ಕಾರ್ಡ್‌ ಪಡೆದವರ ಹೆಸ ರನ್ನು ದಾಖಲಿಸಿ, ಜೇಸಿಬಿ, ಹಿಟಾಚಿ ಯಂತ್ರದಲ್ಲಿ ಕೆಲಸ ಮಾಡಿಸುವಂತಿಲ್ಲ. 

ಇಲ್ಲಿ ಮಾನವ ಶ್ರಮವೇ ಮುಖ್ಯ. ನಿಯಮ ಉಲ್ಲಂಘನೆ ಆಗದಂತೆ ಪಿಡಿಒ ಗಳು ಗಮನ ಹರಿಸಬೇಕು. ಈಗಾಗಲೇ ದೂರು ಬಂದಿದ್ದು, ಪುನರಾವರ್ತನೆಯಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. 

ಎಲ್ಲರಿಗೂ ಕನಿಷ್ಠ ಉದ್ಯೋಗದ ಖಾತ್ರಿ ಸಿಗಬೇಕೆಂಬ ಉದ್ದೇಶದಿಂದಲೇ ಈ ಯೋಜನೆಯನ್ನು 2005ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿತು. 2006ರಿಂದ ಅನುಷ್ಠಾನಕ್ಕೆ ಬಂದಿತ್ತು. 

ಹದಿನೆಂಟು ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಯೋಜನೆಯಡಿ ಜಾಬ್‌ ಕಾರ್ಡ್‌ ಮಾಡಿಸಿಕೊಳ್ಳಬಹುದು. ಸಾರ್ವಜನಿಕ ಕೆಲಸ ಮಾತ್ರವಲ್ಲದೆ ತನ್ನ ಜಮೀನಿನಲ್ಲಿ ಮಾಡುವ ಕೆಲಸಗಳನ್ನೂ ಇಲ್ಲಿ ಮಾಡಿಸಿ ಕೊಳ್ಳಬಹುದು. ಕೆಲಸ ಮಾಡಿದ ದಾಖಲೆಯನ್ನು ನೀಡಿದ ಬಳಿಕ ಅದನ್ನು ಗ್ರಾಮ ಪಂಚಾಯತ್‌ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಇದಕ್ಕೆ ಸಲ್ಲುವ ಮೊತ್ತ ಕಾರ್ಡ್‌ ದಾರರ ಖಾತೆಗೆ ಜಮೆಯಾಗುತ್ತದೆ.

ಉಲ್ಲಂಘನೆ ಹೇಗೆ?
ಓರ್ವ ವ್ಯಕ್ತಿಯ ಹೆಸರಿನಲ್ಲಿ 20 ಸಾವಿರ ರೂ.ಗಳ ಕೆಲಸ ಮಾಡಿದ್ದರೆ, ಆ ಹಣ ನೇರವಾಗಿ ಆತನ ಖಾತೆಗೆ ಜಮೆ ಆಗುತ್ತದೆ. ಆದರೆ, ಜಾಬ್‌ ಕಾರ್ಡ್‌ ಹೊಂದಿರುವ ಖಾತಾದಾರನ ಒಪ್ಪಿಗೆ ಇಲ್ಲದೇ, ಯಂತ್ರದ ಮೂಲಕ ಮಾಡಿಸಿದ ಕೆಲಸದ ಹಣ ವನ್ನು ಖಾತೆಗೆ ಸ್ವೀಕರಿಸಲ ಸಾಧ್ಯವಿಲ್ಲ. 

ಕಾರಣ ಕೆಲಸ ಮಾಡಿದ ದಿನದ ಹಾಜರಾತಿಯನ್ನು ಆಯಾ ವ್ಯಕ್ತಿಯೇ ದಾಖಲಿಸಬೇಕು. ಆದ್ದರಿಂದ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಬಳಸಿ, ಅವರ ಹಾಜರಾತಿ ತೋರಿಸಿ ಯಂತ್ರದಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎನ್ನಲಾಗಿದೆ.

ಕಾಮಗಾರಿ ನಡೆಯುತ್ತಿರುವ ವೇಳೆ ಆಯಾ ಗ್ರಾ.ಪಂ. ಕಾರ್ಯದರ್ಶಿ ಅಥವಾ ಪಿಡಿಒ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ಕಾಮಗಾರಿಯ ಫೋಟೋ ದಾಖಲೆ, ಜಿಪಿಎಸ್‌ ದಾಖಲೆ ನೀಡಲೇಬೇಕು. ಹೀಗಿದ್ದರೂ. ಉಲ್ಲಂಘನೆ ಆಗಿದೆ. ಗ್ರಾ.ಪಂ. ಸಿಬಂದಿ ಜತೆ ಹೊಂದಾಣಿಕೆ ಮಾಡಿಕೊಂಡು, ಇಂತಹ ಕಾರ್ಯಕ್ಕೆ ಕೈ ಹಾಕಲಾಗಿದೆ ಎಂಬುದು ಆರೋಪ.

ಕೆಲವೆಡೆ ಜೇಸಿಬಿ ಬಳಸಲಾಗಿದೆ
ಅಡಕೆ ಗಿಡಗಳಿಗೆ ಗುಂಡಿ ತೋಡಲೂ ಮಾನವ ಶ್ರಮವನ್ನೇ ಬಳಸಿಕೊಳ್ಳಬೇಕು. ಆದರೆ ಕೆಲವು ಕಡೆ ಜೆಸಿಬಿ ಬಳಸಿದ ಉದಾಹರಣೆ ಇದೆ. ಇಂತಹ ಪ್ರಕರಣಗಳು ಪುತ್ತೂರು ತಾಲೂಕಿನಲ್ಲಿ ಪತ್ತೆ ಹಚ್ಚಿದ್ದು, ಅವುಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಒಟ್ಟಿನಲ್ಲಿ ಇದು ನಿರುದ್ಯೋಗಿಗಳಿಗೆ ಕೆಲಸ ನೀಡಬೇಕೆಂಬ ಆಶಯದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ.
– ಜಗದೀಶ್‌ ಎಸ್‌. ಇಒ, 
ಪುತ್ತೂರು ತಾ.ಪಂ.

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

2

Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.