ಎಪಿಎಂಸಿ ಚುನಾವಣೆ: ಪುತ್ತೂರು ಶೇ. 43.96; ಸುಳ್ಯ ಶೇ. 50. 52 ಮತದಾನ
Team Udayavani, Apr 26, 2017, 5:58 PM IST
ಪುತ್ತೂರು: ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) 12 ಕ್ಷೇತ್ರಗಳಿಗೆ ಮಂಗಳವಾರ ನಡೆದ ಮತದಾನಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು ಮತದಾರರ ಪೈಕಿ ಅರ್ಧಕ್ಕಿಂತ ಅಧಿಕ ಮಂದಿ ಮತದಾನದಲ್ಲಿ ಪಾಲ್ಗೊಂಡಿಲ್ಲ. 12 ಕ್ಷೇತ್ರಗಳ 68 ಮತಗಟ್ಟೆಗಳಲ್ಲಿ ಒಟ್ಟು ಶೇ. 43.96 ಮತ ಚಲಾವಣೆಗೊಂಡಿದೆ. ಕೆಲವು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಧಿಯಿಂದ ಹೆಸರು ಬಿಟ್ಟು ಹೋಗಿ, ಮತದಾನಕ್ಕೆ ಅವಕಾಶ ವಂಚಿತರಾದ ಬಗ್ಗೆ ಆಕ್ರೋಶ ಕೇಳಿ ಬಂದಿತ್ತು. ಉಳಿದಂತೆ ಮತದಾನ ಶಾಂತಿಯುತವಾಗಿ ಸಾಗಿದೆ. ಎಲ್ಲ ಮತಧಿಗಟ್ಟೆಗಳಲ್ಲೂ ಮತದಾನ ಪ್ರಮಾಣ ತೀವ್ರ ಕುಸಿತ ಕಂಡಿದೆ.
ನೀರಸ ಪ್ರತಿಕ್ರಿಯೆ
ಇಪ್ಪತ್ತಾರು ಅಭ್ಯರ್ಥಿಗಳು ಕಣದಲ್ಲಿರುವ ತಾಲೂಕಿನ 12 ಕ್ಷೇತ್ರಗಳಲ್ಲಿ 68 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಬೆಳಗ್ಗಿಧಿನಿಂದಲೇ ನೀರಸವಾಗಿ ಸಾಗಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನ 12 ಗಂಟೆಗೆ ಶೇ. 26.4ರಷ್ಟು ಮತ ಚಲಾವಣೆಯಾಗಿತ್ತು. ಅನಂತರ 2 ಗಂಟೆಯ ಹೊತ್ತಿಗೆ ಶೇ. 35.4 ರಷ್ಟು ಮತ ಚಲಾವಣೆ ಆಗಿತ್ತು. ಮತದಾನ ಮುಕ್ತಾಯದ ಸಂದರ್ಭ ಶೇ. 43.96 ಮತ ದಾನ ದಾಖಲಾಗಿತ್ತು.
ಗರಿಷ್ಠ -ಕನಿಷ್ಠ ಮತದಾನ
ಆಲಂಕಾರು ಕ್ಷೇತ್ರದಲ್ಲಿ ಕೊಲ ಗ್ರಾಮ ಕ್ಕೊಳಪಟ್ಟ 31ನೇ ಮತಗಟ್ಟೆ ಕೊಲ ಹಿ.ಪ್ರಾ.ಶಾಲೆ (ಉತ್ತರ ಭಾಗ) ಮತದಾನ ಕೇಂದ್ರದಲ್ಲಿ ಶೇ. 15.67ರಷ್ಟು ಕನಿಷ್ಠ ಮತದಾನ ದಾಖ ಲಾಗಿದೆ. ಇಲ್ಲಿ 600 ಮತದಾರರ ಪೈಕಿ 70 ಪುರುಷ ಮತ್ತು 24 ಮಹಿಳೆಯರು ಸೇರಿ 94 ಮಂದಿ ಮತ ಚಲಾಯಿಸಿದ್ದಾರೆ. ಬಿಳಿನೆಲೆ ಗ್ರಾಮಕ್ಕೊಳಪಟ್ಟ 18ನೇ ಮತಗಟ್ಟೆ ಬಿಳಿನೆಲೆಬೈಲು ಹಿ.ಪ್ರಾ.ಶಾಲೆ ಮತದಾನ ಕೇಂದ್ರದಲ್ಲಿ ಗರಿಷ್ಠ ಮತದಾನವಾಗಿದೆ. ಇಲ್ಲಿ ಶೇ. 77.92 ಮತ ಚಲಾವಣೆಯಾಗಿದೆ. 557 ಮತದಾರರ ಪೈಕಿ 434 ಮತದಾರರು ಹಕ್ಕು ಚಲಾಯಿಸಿದ್ದಾರೆ. ಒಟ್ಟು 13 ಕ್ಷೇತ್ರಗಳ ಪೈಕಿ 53,739 ಮತದಾರರು ಹಕ್ಕು ಚಲಾವಣೆಗೆ ಅರ್ಹತೆ ಪಡೆದಿದ್ದರು. ಇಲ್ಲಿ 35,973 ಪುರುಷ ಮತದಾರರು, 17,766 ಮಹಿಳಾ ಮತದಾರ ರಿದ್ದರು. ಇದರಲ್ಲಿ 17,743 ಪುರುಷ ಮತ್ತು 5,879 ಮಹಿಳೆಯರು ಸೇರಿ ಒಟ್ಟು 23,622 ಮತದಾರರು ಮತ ಚಲಾಯಿಸಿದ್ದಾರೆ.
ಮತದಾನ ಪ್ರಕ್ರಿಯೆ
ಎ. 25ರಂದು ಬೆಳಗ್ಗೆ 8ರಿಂದ 4ರ ತನಕ ಮತದಾನ ನಡೆದಿದೆ. ಮತದಾರರು ಮತ ಪತ್ರದಲ್ಲಿ (ಮ್ಯಾನುವೆಲ್ ಸಿಸ್ಟಮ್) ಮತ ಚಲಾಯಿಸಿದ್ದಾರೆ. 68 ಮತಗಟ್ಟೆಗಳಲ್ಲಿ ಅಧ್ಯಕ್ಷ ಅಧಿಕಾರಿ-68, ಒಂದನೇ ಮತಗಟ್ಟೆ ಅಧಿಕಾರಿ-68, ಎರಡು ಮತ್ತು ಮೂರನೇ ಮತಗಟ್ಟೆ ಅಧಿಕಾರಿ-136, ಡಿ ಗ್ರೂಪ್‌ಸಿಬಂದಿ-68, ಆಯಾ ಮತಗಟ್ಟೆಗಳಲ್ಲಿ ಪೊಲೀಸ್, ಇತರೆ ರಕ್ಷಣಾ ಸಿಬಂದಿ ಸೇರಿ ಒಟ್ಟು 408 ಮಂದಿ ಕರ್ತವ್ಯ ನಿರ್ವಹಿಸಿದ್ದಾರೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಅನಂತರ ಮತಪೆಟ್ಟಿಗೆಯನ್ನು ತೆಂಕಿಲ ವಿವೇಕಾನಂದ ಆಂ.ಮಾ.ಶಾಲಾ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು, ಅಲ್ಲಿ ಎ. 27ರಂದು ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ.
ಸುಳ್ಯ: ಇಲ್ಲಿಯ ಕೃಷಿ ಉತ್ಪನ್ನ ಸಮಿತಿ (ಎಪಿಎಂಸಿ)ಯ 11 ಕ್ಷೇತ್ರಗಳಿಗೆ ಮಂಗಳವಾರ ಅತ್ಯಂತ ಶಾಂತಿಯುತ ಮತದಾನ ಜರಗಿದ್ದು, ಒಟ್ಟು ಶೇಕಡಾ 50.52 ಹಕ್ಕು ಚಲಾವಣೆ ನಡೆದಿದೆ.
ಅತೀ ಕಡಿಮೆ ಮತದಾನ
ಒಟ್ಟು 11,607 ಪುರುಷರು, 3940 ಮಹಿಳೆಯರ ಸಹಿತ ಒಟ್ಟು 15,557 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹಿರಿಯ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸುತ್ತಿದ್ದುದು ಕಂಡು ಬಂದಿತು. ಕಳೆದ ಬಾರಿ ಶೇ.60 ಮತದಾನವಾಗಿದ್ದು ಈ ಬಾರಿ ಅತೀ ಕಡಿಮೆ ಮತದಾನವಾಗಿದೆ.
ಗರಿಷ್ಠ -ಕನಿಷ್ಠ ಮತದಾನ
ಸಹಕಾರ ಕ್ಷೇತ್ರದಲ್ಲಿ ಶೇ. 90.34 ಗರಿಷ್ಠ ಮತದಾನವಾಗಿದ್ದರೆ, ಕೃಷಿಕರ ಕ್ಷೇತ್ರ ಪೈಕಿ ಐವರ್ನಾಡು ಗರಿಷ್ಠ ಶೇ. 72.76 ಹಾಗೂ ಮಂಡೆಕೋಲು ಕ್ಷೇತ್ರದಲ್ಲಿ ಕನಿಷ್ಠ ಶೇ. 32.75 ಮತ ದಾನವಾಗಿದೆ.
ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸಹಿತ ಒಟ್ಟು 5 ಮಂದಿ ಸಿಬಂದಿ ಹಾಗೂ ಭದ್ರತೆಗಾಗಿ ತಲಾ 2 ಮಂದಿ
ಪೊಲೀಸರು ಕಾರ್ಯ
ನಿರ್ವಹಿಸಿದ್ದರು. ಸುಳ್ಯ ಪೊಲೀಸ್ ವೃತ್ತನಿರೀಕ್ಷಕರ ನೇತೃತ್ವ ದಲ್ಲಿ ನಾಲ್ವರು ಎಸ್‌ಐ, 10 ಮಂದಿ ಎಎಸ್‌ಐ, 60 ಕಾನ್‌ಸ್ಟೆಬಲ್‌ಗಳು, 40 ಮಂದಿ ಗೃಹರಕ್ಷಕ ಸಿಬಂದಿ ಹಾಗೂ 12 ಪೊಲೀಸ್ ವಾಹನಗಳ ಗಸ್ತಿನೊಂದಿಗೆ ಮತದಾನ ಪ್ರಕ್ರಿಯೆಗೆ ಭದ್ರತೆ ನೀಡಲಾಯಿತು.
ಮತದಾರರು ಬ್ಯಾಲೆಟ್ ಪೇಪರ್‌ನಲ್ಲಿನ ಅಭ್ಯರ್ಥಿಗಳ ಗುರುತಿನ ಎದುರು ಗುರುತು ಮಾಡುವ ಮೂಲಕ ಹಕ್ಕು ಚಲಾಯಿಸಿದರೆ, ಮತಗಟ್ಟೆ ಸಿಬಂದಿ ಮತದಾರರ ಎಡಗೈ ಬೆರಳಿಗೆ ಶಾಯಿ ಗುರುತು ಹಚ್ಚಿ ಮತದಾನ ವನ್ನು ಖಚಿತಪಡಿಸುತ್ತಿದ್ದರು.
ಗಣ್ಯರಿಂದ ಹಕ್ಕು ಚಲಾವಣೆ
ಸುಳ್ಯ ತಾಲೂಕು ಶಾಸಕ ಎಸ್. ಅಂಗಾರ ಅವರು ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ ಅವರು ಅಜ್ಜಾವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸುಳ್ಯ ಕ್ಷೇತ್ರ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಅವರು ಗುತ್ತಿಗಾರು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಅವರು ಸುಳ್ಯ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಈ ಪೈಕಿ ಈಗಾಗಲೇ ವರ್ತಕರ ಮತ್ತು ಅಮರಪಟ್ನೂರು ಕ್ಷೇತ್ರಗಳಲ್ಲಿ ಬಿಜೆಪಿ ಕಾಂಗ್ರೆಸ್ ತಲಾ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆ ಯಾಗಿದ್ದಾರೆ.
ನಾಳೆ ಮತ ಎಣಿಕೆ
ಮತಪೆಟ್ಟಿಗೆಗಳನ್ನು ಎಪಿಎಂಸಿ ಯಾರ್ಡ್‌ನಲ್ಲಿ ಇರಿಸಿದ್ದು, ಎ. 27 ರಂದು ಬೆಳಗ್ಗೆ ಮತ ಎಣಿಕೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೆಲುವಿನ ಲೆಕ್ಕಾಚಾರ
ಮತದಾನ ನಡೆಯುತ್ತಿದ್ದಂತೆ ಎರಡು ಪಕ್ಷಗಳ ಪ್ರಮುಖರು ತಮ್ಮ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದ ಬಗ್ಗೆ ಆಂತರಿಕ ಸಮೀಕ್ಷೆಯನ್ನು ಕಂಡುಕೊಂಡಿದ್ದಾರೆ. ಮತದಾನ ನಡೆದ ಒಟ್ಟು 11 ಕ್ಷೇತ್ರಗಳ ಪೈಕಿ ಬಿಜೆಪಿ 9-10 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿರಿಸಿಕೊಂಡಿದ್ದರೆ, ಕಾಂಗ್ರೆಸ್ 2ರಿಂದ ಗರಿಷ್ಠ 3 ಸ್ಥಾನಗಳನ್ನು ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.