ಪುತ್ತೂರು: ಬೆಂಕಿ ಅವಘಡ ನಿಯಂತ್ರಣಕ್ಕೆ ಬುಲೆಟ್‌ ಮಾದರಿ ಬೈಕ್‌..!


Team Udayavani, Jun 7, 2017, 3:04 PM IST

0606kpk1.jpg

ಪುತ್ತೂರು: ಸಣ್ಣ-ಪುಟ್ಟ ಬೆಂಕಿ ಅವಘಡದ ವೇಳೆ ಕಾರ್ಯಾಚರಣೆಗೆ ಅನು ಕೂಲವಾಗುವ ನಿಟ್ಟಿನಲ್ಲಿ ಪುತ್ತೂರು ಅಗ್ನಿಶಾಮಕ ಠಾಣೆಗೆ ಮಿಸ್ಟ್‌ ತಂತ್ರಜ್ಞಾನದ ಬುಲೆಟ್‌ ಮಾದರಿಯ ಬೈಕ್‌ ಕಾಲಿಟ್ಟಿದೆ. ಈಗಾಗಲೇ ಎರಡು ಫೈರ್‌ ಟೆಂಡರ್‌ ಮತ್ತು 1 ರಿಸ್ಕೀ ಟೆಂಡರ್‌ ವಾಹನ ಇರುವ ಇಲ್ಲಿ ನಾಲ್ಕನೆಯ ವಾಹನವಾಗಿ ಬುಲೆಟ್‌ ಸೇರ್ಪಡೆಗೊಂಡಿದೆ.
ತುರ್ತು ಅಗ್ನಿಶಮನದ ಸಂದರ್ಭ, ಇಕ್ಕಟ್ಟಾದ ಸ್ಥಳದಲ್ಲಿ ಸಂಚಾರಕ್ಕೆ ಈ  ಬುಲೆಟ್‌ ಬೈಕ್‌ ಬಳಕೆಯಾಗಲಿದೆ. ಈಗಾಗಲೇ ಮಂಗ ಳೂರು ಸೇರಿದಂತೆ ನಗರ ಕೇಂದ್ರಗಳಲ್ಲಿ ಇದು ಬಳಕೆಯಲ್ಲಿದೆ. ಪುತ್ತೂರಿಗೆ ಕೆಲ ದಿನಗಳ ಹಿಂದಷ್ಟೇ ತರಲಾಗಿದ್ದು, ಸೇವೆಗೆ ಸಿದ್ಧವಾಗಿದೆ.

ಹೇಗಿದೆ ಬುಲೆಟ್‌
ರಾಯಲ್‌ ಎನ್‌ಫೀಲ್ಡ್‌ನ 350 ಸಿಸಿ ಸಾಮರ್ಥ್ಯದ ಬೈಕ್‌ ಅನ್ನು ಬೆಂಕಿ ನಂದಕ ಬುಲೆಟ್‌ ಆಗಿ ಪರಿವರ್ತಿಸಲಾಗಿದೆ. ಬೈಕ್‌ನ ಹಿಂಭಾಗದಲ್ಲಿ ಹತ್ತು ಲೀಟರ್‌ ಸಾಮರ್ಥ್ಯದ ಫೋಮ್‌(ದ್ರಾವಣ) ತುಂಬಿರುವ ಅಗ್ನಿಶಮನ ಉಪಕರಣಗಳನ್ನು ಅಳವಡಿಸಲಾಗಿದೆ. ಅದರ ಸುತ್ತ ಸಣ್ಣ ಗಾತ್ರದ 2.ಕೆ.ಜಿ ಸಾಮರ್ಥ್ಯದ ಏರ್‌ ಸಿಲಿಂಡರ್‌ ಇದೆ. ಪಕ್ಕದಲ್ಲಿರುವ ಹೈಡ್ರಾಲಿಕ್‌ ಉಪಕರಣ ಸಿಲಿಂಡರ್‌ ಒಳಗಿನ ದ್ರಾವಣವನ್ನು ಹೊರಕ್ಕೆ ಚಿಮ್ಮಿಸಲು ಸಹಾಯ ಮಾಡುತ್ತದೆ. ಜತೆಗೆ ಬೈಕ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸೈರನ್‌, ಧ್ವನಿವರ್ಧಕ, ಕೆಂಪು ದೀಪಗಳಿವೆ.

ಬಳಕೆ ಹೀಗೆ
ಈ ಬೈಕ್‌ನಲ್ಲಿ ಚಾಲಕ, ಹಿಂಬದ ಸವಾರ ಕುಳಿತುಕೊಳ್ಳಬಹುದು. ಕಾರ್ಯಾಚರಣೆ ಸಂದರ್ಭ ಬೈಕ್‌ನ ಹಿಂಭಾಗದಲ್ಲಿರುವ ಎರಡು ಸಿಲಿಂಡರ್‌ ತೆಗೆದು ಬೆನ್ನಿಗೆ ನೇತು ಹಾಕಲು ಸಾಧ್ಯವಿದೆ. ಸಿಲಿಂಡರ್‌ ಜತೆಗಿನ ಗನ್‌ ಟ್ರಗರ್‌ ಅದುಮಿದರೆ, 25 ರಿಂದ 35 ಅಡಿಯಷ್ಟು ದೂರ ಅಗ್ನಿ ನಿಯಂತ್ರಣ ದ್ರಾವಣ ಹೊರಕ್ಕೆ ಚಿಮ್ಮಿ, ಬೆಂಕಿ ನಂದಿಸಲು ಸಾಧ್ಯವಾಗುತ್ತದೆ.

ಬಳಕೆ ಎಲ್ಲೆಲ್ಲಿ
ಸಣ್ಣ ಪ್ರಮಾಣದ ಗ್ಯಾಸ್‌ ಸೋರಿಕೆ, ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌, ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹಾಗೂ ಇತರೆ ಬೆಂಕಿ ಅವಘಡ ಸಂಭವಿಸಿದಾಗ ಇದನ್ನು ಬಳಸಲಾಗುತ್ತದೆ. ಅಗ್ನಿಶಾಮಕ ದಳದ ದೊಡ್ಡ ಗಾತ್ರದ ವಾಹನಗಳು ಇಕ್ಕಟ್ಟಾದ ಸ್ಥಳದಲ್ಲಿ ಸಂಚರಿಸುವುದು ತ್ರಾಸದಾಯಕವಾಗಿರುವ ಕಾರಣ, ಈ ಬುಲೆಟ್‌ ವಾಹನ ಶೀಘ್ರ ಸ್ಪಂದನೆಗೆ ಅನುಕೂಲ ಎಂಬ ಕಾರಣ ಹೊಂದಲಾಗಿದೆ.

ಬಳಕೆ ಕಷ್ಟ..!
ಬುಲೆಟ್‌ ಪ್ರಯೋಜನ ಅಂದರೂ, ಅದರ ಬಳಕೆ ಸುಲಭ ಅಲ್ಲ. 350 ಸಿಸಿ ಬೈಕ್‌ನಲ್ಲಿ ಸವಾರ ಸೇರಿ ಇಬ್ಬರು ಕುಳಿತುಕೊಳ್ಳಲು ಸ್ಥಳ ಇದ್ದರೂ, ಅಗ್ನಿ ನಿಯಂತ್ರಣ ಸಾಧನ ಸೇರಿದರೆ ಒಟ್ಟು ತೂಕ 500 ಕೆ.ಜಿ ದಾಟುತ್ತದೆ. ಹಾಗಾಗಿ ಎಕ್ಸ್‌ ಪರ್ಟ್‌ಗಳೇ ಬೈಕ್‌ ಚಲಾಯಿಸಬೇಕಷ್ಟೆ. ಏರು ಮಾರ್ಗದಲ್ಲಿ ಬೈಕ್‌ ನಿಲ್ಲಿಸಿದರೆ, ಸವಾರನಿಗೆ ಭಾರ ತಡೆದುಕೊಳ್ಳುವ ಶಕ್ತಿ ಬೇಕು. ಇಲ್ಲದಿದ್ದರೆ ಪಲ್ಟಿ. ಆಕಸ್ಮಿಕವಾಗಿ ಬಿದ್ದರೆ, ಹಿಂಬದಿ ಸವಾರನಿಗೆ ಗಾಯ ಉಂಟಾಗುವುದು ಖಂಡಿತ. ಅಪಾಯದ ಸಂದರ್ಭ ಹಿಂಬದಿ ಸವಾರ ಪಾರಾಗಲು ಬೇಕಾದ ವ್ಯವಸ್ಥೆ ಇಲ್ಲದಿರುವುದು ಅಪಾಯಕ್ಕೆ ಮುಖ್ಯ ಕಾರಣ.!
 

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.