ಪುತ್ತೂರು: ಕ್ಯಾಂಪ್ಕೋ ಚಾಕಲೇಟ್‌ ‘ಸೌಲಭ್ಯ ಸೌಧ’

Team Udayavani, Jan 19, 2018, 3:38 PM IST

19-Jan-17.jpg

ಮಂಗಳೂರು: ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್‌ ಕಾರ್ಖಾನೆ ಆವರಣದಲ್ಲಿ 13 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಎಮಿನಿಟಿ ಕಟ್ಟಡ (ಸೌಲಭ್ಯ ಸೌಧ) ಜ.21ರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಉದ್ಘಾಟಿಸುವರು. ಆಧುನಿಕ ತಂತ್ರಜ್ಞಾನ, ಹೊಸ ಅಂತಾರಾಷ್ಟ್ರೀಯ (ಐಎಸ್‌ಓ) ಮತ್ತು ದೇಶೀಯ ಆಹಾರ ಭದ್ರತೆ ಹಾಗೂ ಸುರಕ್ಷತಾ ಮಾನದಂಡ (ಎಫ್‌ಎಸ್‌ಎಸ್‌ಎಐ)ಗಳಿಗೆ ಅನುಸಾರವಾಗಿ ಚಾಕಲೇಟ್‌ ಫ್ಯಾಕ್ಟರಿಗೆ ಹೊಂದಿಕೊಂಡೇ ಅತ್ಯಾಧುನಿಕ ವ್ಯವಸ್ಥೆಗಳುಳ್ಳ ನಾಲ್ಕು ಅಂತಸ್ತಿನ ಸೌಲಭ್ಯ ಸೌಧ ನಿರ್ಮಾಣವಾಗಿದೆ.

 42 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದ್ದು ಪ್ರತಿ ಅಂತಸ್ತು 10,500 ಅಡಿಗಳ ಸ್ಥಳ ಹೊಂದಿದೆ. ತಳ ಅಂತಸ್ತಿನಲ್ಲಿ ವಾಹನ ನಿಲುಗಡೆಗೆ ಅವಕಾಶ, ನೆಲ ಅಂತಸ್ತಿನಲ್ಲಿ ಸುಸಜ್ಜಿತ ಹವಾನಿಯಂತ್ರಿತ ಆಡಳಿತಾತ್ಮಕ ಕಚೇರಿಗಳು, ಅಧ್ಯಕ್ಷರ ಮತ್ತು ವ್ಯವಸ್ಥಾಪಕ ನಿರ್ದೇಶಕರ ಕಚೇರಿ, ಪ್ರಥಮ ಅಂತಸ್ತಿನಲ್ಲಿ ಅತ್ಯಾಧುನಿಕ ಸುಸಜ್ಜಿತ ಪಾಕಶಾಲೆ, 50 ಆಸನಗಳಿರುವ ಹವಾನಿಯಂತ್ರಿತ ಮತ್ತು 150 ಆಸನಗಳಿರುವ ಕೈಗಾರಿಕಾ ಭೋಜನ ಮತ್ತು ಉಪಾಹಾರ ಮಂದಿರ, ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ 1050 ಲಾಕರ್‌ ವ್ಯವಸ್ಥೆ, ಸಂದರ್ಶಕರಿಗಾಗಿ 50 ಆಸನಗಳ ಹವಾನಿಯಂತ್ರಿತ ಥಿಯೇಟರ್‌ ಇದೆ. 

ಎರಡನೇ ಅಂತಸ್ತಿನಲ್ಲಿ ಪ್ಯಾಕಿಂಗ್‌ ಸೌಲಭ್ಯ, ಸಹ ಪ್ಯಾಕರ್‌ಗಳಿಗಾಗಿ ಕ್ಯಾಬಿನ್‌ ಕಲ್ಪಿಸಲಾಗಿದೆ. ಮೂರನೇ ಅಂತಸ್ತಿ ನಲ್ಲಿ ಹವಾನಿಯಂತ್ರಿತ ಬೋರ್ಡ್‌ ಮೀಟಿಂಗ್‌ ಹಾಲ್‌, ಅಂತಿಮ ಪ್ಯಾಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ನಾಲ್ಕನೇ ಅಂತಸ್ತಿನಲ್ಲಿ ಪ್ಯಾಕಿಂಗ್‌ ಪರಿಕರಗಳನ್ನು ಇಡಲು ಯೋಜಿಸಲಾಗಿದೆ. ಸೌಧದಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಲಾಗಿದೆ.

ಪೂರ್ಣ ಅಗ್ನಿ ನಿರೋಧಕ ವ್ಯವಸ್ಥೆಯನ್ನು ಹೊಂದಿದ್ದು, ಆಹಾರ ಭದ್ರತಾ ನಿಯಮಗಳ ಅನುಸಾರ ‘ಏರ್‌ ಶವರ್‌’ ವ್ಯವಸ್ಥೆ, ಆಹಾರ ಭದ್ರತೆಗೆ ಪೂರಕವಾದ ತರಬೇತಿ ಹಮ್ಮಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಡೀ ಸೌಧ ಆಹಾರ ಸುರಕ್ಷೆ ಮತ್ತು ಭದ್ರತೆಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡ ಪೂರೈಸಿದೆ.

ಕ್ಯಾಂಪ್ಕೋ ಚಾಕಲೇಟ್‌ ಈ ನೆಲದ ಸತ್ವ ಹೊಂದಿರುವ ಶುದ್ಧ ಸ್ವದೇಶೀ ಚಾಕಲೇಟ್‌. ಅಡಿಕೆ ಬೆಳೆಗಾರರು ಬೆಳೆದ ಕೊಕ್ಕೊ ಬೀಜಗಳು, ಕಬ್ಬು ಬೆಳೆಗಾರರು ಬೆಳೆದ ಕಬ್ಬಿನಿಂದ ತಯಾರಿಸಿದ ಸಕ್ಕರೆ, ಹೈನುಗಾರರು ಉತ್ಪಾದಿಸಿದ ಹಾಲಿನಿಂದ ಮಾಡಿದ ಹಾಲಿನಪುಡಿ ಗಳನ್ನು ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ರಸಸ್ವಾದಕ್ಕೆ ಒಪ್ಪುವಂತೆ ಮಿಶ್ರಮಾಡಿ ಬಹುರಾಷ್ಟ್ರೀಯ ಕಂಪೆನಿಯ ವರಿಗಿಂತ ಉತ್ತಮ ಗುಣಮಟ್ಟದ ಚಾಕಲೇಟ್‌ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ತಿಳಿಸಿದೆ.

ಟಾಪ್ ನ್ಯೂಸ್

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.