ಪುತ್ತೂರು: ಪಾರ್ಸೆಲ್ ಕದ್ದ ಆರೋಪಿ ಸೆರೆ
Team Udayavani, Aug 14, 2018, 11:56 AM IST
ಪುತ್ತೂರು: ಪಾರ್ಸೆಲ್‌ನಲ್ಲಿದ್ದ ಮೊಬೈಲ್‌ಗಳನ್ನು ಕದ್ದ ಪ್ರಕರಣದ ಆರೋಪಿ ರವಿಯನ್ನು ನಗರ ಪೊಲೀಸರು ಹಾವೇರಿಯಲ್ಲಿ ಆ. 12ರಂದು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಠಾಣಾ ವ್ಯಾಪ್ತಿಯ ಅಡವಿ ಸೋಮಾಪುರ ಗ್ರಾಮದ ರವಿ, ಸುಮಾರು 2,66,155.37 ರೂ. ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದ. ಎಸ್‌ಐ ಅಜಯ್ ಕುಮಾರ್ ನೇತೃತ್ವದಲ್ಲಿ ಎಎಸ್‌ಐ ಶ್ರೀಧರ ಮಣಿಯಾಣಿ, ಎಚ್‌ಸಿಗಳಾದ ಜಗದೀಶ್, ಹಿತೇಶ್, ಪಿಸಿಗಳಾದ ಚೋಳಪ್ಪ, ಕಿರಣ್ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಬಳಿಯಿಂದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬೆಂಗಳೂರಿನ ಜಯದೀಪ ಎಂಟರ್‌ಪ್ರçಸಸ್‌ನಿಂದ ಜೂನ್ 29ರಂದು 4 ಪಾರ್ಸೆಲ್‌ಗಳನ್ನು ಪುತ್ತೂರಿಗೆ ಕಳುಹಿಸಿಕೊಡಲಾಗಿತ್ತು. ಲಾರಿಯಲ್ಲಿ ಬಂದಿದ್ದ ಈ ಪಾರ್ಸೆಲನ್ನು ಸಂಸ್ಥೆಯ ಪುತ್ತೂರು ಪ್ರತಿನಿಧಿ ಜಗದೀಶ್ ಪಡೆದುಕೊಂಡು, ವಿತರಣೆ ಮಾಡಬೇಕಿತ್ತು. ಇದರಲ್ಲಿ 16 ಮೊಬೈಲ್‌ಗಳಿದ್ದವು. ಜೂನ್ 30ರಂದು ಪುತ್ತೂರಿಗೆ ತಲುಪಬೇಕಾಗಿದ್ದ ಪಾರ್ಸೆಲ್, ಪುತೂರಿಗೆ ತಲುಪಲಿಲ್ಲ. ಬಳಿಕ ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.