ಬಂದ್‌ಗೆ ಪುತ್ತೂರು ಜನತೆಯ ಸಂಪೂರ್ಣ ಸಾಥ್
Team Udayavani, Mar 30, 2020, 5:41 AM IST
ಪುತ್ತೂರು: ಸಂಪೂರ್ಣ ಬಂದ್ ಆಚರಣೆಯ ಎರಡನೇ ದಿನವಾದ ರವಿವಾರ ಜಿಲ್ಲಾಡಳಿತದ ಉದ್ದೇಶ ಮತ್ತು ಪೊಲೀಸರ ಸಕಾಲಿಕ ಕ್ರಮಗಳಿಗೆ ಪುತ್ತೂರಿನ ಜನತೆ ಸಾಥ್ ನೀಡಿ ಕೋವಿಡ್-19 ಹೆಮ್ಮಾರಿ ತಡೆಗೆ ಕೈಜೋಡಿಸಿದ್ದಾರೆ.
ಲಾಕ್‌ಡೌನ್ ಘೋಷಣೆಯಾದ ಆರಂಭಿಕ ದಿನಗಳಲ್ಲಿ ಬೆಳಗ್ಗೆ 12 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಈ ಹಂತದಲ್ಲಿ “ಅಗತ್ಯ-ಅನಗತ್ಯ’ ಕಾರಣಗಳಿಂದ ಜನತೆಯ ಓಡಾಟ ಇತ್ತು. ಇದನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದರು.
ಈಗ ಪುತ್ತೂರು ತಾಲೂಕಿನಾದ್ಯಂತ ಬಂದ್ ಯಶಸ್ವಿಯಾಗಿ ಜಾರಿಗೊಂಡಿದೆ. ಜನತೆ ಮನೆಯಿಂದ ಹೊರಬಾರದೆ ಬಂದ್ ಆಶಯಕ್ಕೆ ಪೂರ್ಣ ಬೆಂಬಲ ನೀಡಿದರು.
ಪುತ್ತೂರು ನಗರದಲ್ಲಿ ಬೆರಳೆಣಿಕೆಯ ಮೆಡಿಕಲ್‌ಗಳನ್ನು ಹೊರತುಪಡಿಸಿ ಎಲ್ಲ ತರಹದ ಅಂಗಡಿಗಳೂ ಬಾಗಿಲು ತೆರೆಯಲಿಲ್ಲ. ಉಪ್ಪಿನಂಗಡಿ ಪೇಟೆಯಲ್ಲಿ ಜನತೆಗೆ ಬೆಳಗಿನ 8 ಗಂಟೆಯ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಜನತೆಯ ಅನಗತ್ಯ ಓಡಾಟ ಯಾವುದೇ ಭಾಗದಲ್ಲೂ ಕಂಡುಬರಲಿಲ್ಲ.
ಪೆಟ್ರೋಲ್ ಪಂಪುಗಳೂ ಬಂದ್
ಜನತೆಯ ಓಡಾಟಕ್ಕೆ ಅತೀ ಅಗತ್ಯವಾಗಿರುವ ಪೆಟ್ರೋಲ್ ಪಂಪ್‌ಗ್ಳು ರವಿವಾರ ಸಂಪೂರ್ಣ ಬಂದ್ ಆಚರಣೆ ಮಾಡಿದವು.
ಸ್ವಲ್ಪ ಮಟ್ಟಿಗೆ ಸಮಸ್ಯೆ
ಇದರಿಂದ ವೈದ್ಯಕೀಯ ಆವಶ್ಯಕತೆ ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕಾದ ಅಧಿಕಾರಿ ವರ್ಗಕ್ಕೆ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಯಿತು.
ಉಚಿತ ಹಾಲು ಪೂರೈಕೆ
ರವಿವಾರ ಮತ್ತು ಸೋಮವಾರ ಹಾಲಿನ ಸೊಸೈಟಿಗಳಲ್ಲಿ ಹಾಲು ಸಂಗ್ರಹಿಸುವುದನ್ನು ಸ್ಥಗಿತ ಗೊಳಿಸಿದ ಕಾರಣ ರವಿವಾರ ತಾಲೂಕಿನಾದ್ಯಂತ ಲಕ್ಷಗಟ್ಟಲೆ ಲೀ. ಹಾಲು ವ್ಯರ್ಥವಾಯಿತು. ಹೈನು ಉದ್ಯಮ ನಡೆಸುತ್ತಿರುವ ಕೃಷಿಕರು ಅಕ್ಕಪಕ್ಕದ ಮನೆಗಳಿಗೆ ಉಚಿತವಾಗಿ ಹಾಲು ನೀಡಿದರು. ರೈತರ ಮನೆಯಲ್ಲಿ ತಲಾ 25ರಿಂದ 50 ಲೀ. ಹಾಲು ದೊರೆ ಯುತ್ತಿದ್ದು, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಿಗುವ ಹಾಲನ್ನು ಸೊಸೈಟಿಗೂ ನೀಡಲಾಗದೆ, ಜನತೆಗೂ ಹಂಚಲಾಗದೆ ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಯಿತು. ಪುತ್ತೂರು ತಾಲೂಕಿನ ಇರ್ದೆ ನಿವಾಸಿ ರಾಮಣ್ಣ ಪೂಜಾರಿ ತಮ್ಮಲ್ಲಿ ಕರೆದ 30 ಲೀ.ಹಾಲನ್ನು ಶಾಸಕರ “ವಾರ್‌ರೂಮ್’ಗೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.