ಆಸ್ಪತ್ರೆ ಮೇಲ್ದರ್ಜೆಗೇರಲಿ; ಹುದ್ದೆಗಳೂ ಭರ್ತಿಯಾಗಲಿ
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಕೊರತೆ
Team Udayavani, Sep 30, 2019, 5:26 AM IST
ಪುತ್ತೂರು : ಜಿಲ್ಲಾ ಕೇಂದ್ರದ ಕನಸಿನಲ್ಲಿ ಬೆಳೆಯುತ್ತಿರುವ ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆ ಜಿಲ್ಲಾ ಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕು. ವೈದ್ಯಕೀಯ ಕಾಲೇಜು ಆಗಿ ಪರಿವರ್ತನೆಗೊಳ್ಳಬೇಕು ಎನ್ನುವ ಬೇಡಿಕೆ ಇದೆ. ಇದೇ ಹಾದಿಯಲ್ಲಿ ಸಾರ್ವಜನಿಕ ಸರಕಾರಿ ಆಸ್ಪತ್ರೆ ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದರೂ ವೈದ್ಯರು ಮತ್ತು ಸಿಬಂದಿ ಕೊರತೆ ಮಾತ್ರ ಸರಕಾರಿ ಆಸ್ಪತ್ರೆಯನ್ನು ಇನ್ನೂ ಕಾಡುತ್ತಲೇ ಇದೆ.
ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಒಟ್ಟು 112 ಮಂಜೂರಾತಿ ಹುದ್ದೆಗಳಿದ್ದರೂ 47 ಮಾತ್ರ ಭರ್ತಿಯಾಗಿವೆ. ಇನ್ನೂ 65 ಹುದ್ದೆಗಳು ಖಾಲಿಯಾಗಿವೆ. ಕೆಲವೊಂದು ಪ್ರಮುಖ ಹುದ್ದೆಗಳು ಸಹಿತ ಶೇ. 60ರಷ್ಟು ಹುದ್ದೆಗಳು ಸರಕಾರದ ಮಟ್ಟದಿಂದ ಭರ್ತಿಗೊಂಡಿಲ್ಲ.
ಸರಕಾರಿ ಆಸ್ಪತ್ರೆಯಲ್ಲಿ ಪ್ರಮುಖವಾಗಿ ಸರ್ಜನ್, ಮುಖ್ಯ ಆರೋಗ್ಯಾಧಿಕಾರಿ, ಫಿಸಿಷಿಯನ್ ತಲಾ ಒಂದು ಹುದ್ದೆ ಹಾಗೂ ಸಾಮಾನ್ಯ ಕರ್ತವ್ಯ ಅಧಿಕಾರಿ 2 ಹುದ್ದೆಗಳು ಖಾಲಿಯಾಗಿವೆ. ಪ್ರಸೂತಿ ಮತ್ತು ಹೆರಿಗೆ ತಜ್ಞರ ಹುದ್ದೆ ಖಾಲಿಯಾಗಿದ್ದು, ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಿಂದ ನಿಯೋಜನೆಗೊಂಡಿರುವ ಡಾ| ಸಂದೀಪ್ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶುಶ್ರೂಷಕ ಅಧೀಕ್ಷಕರ 3 ಹುದ್ದೆಗಳು, 1 ಹಿರಿಯ ಶುಶ್ರೂಷಕಿ, 1 ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, 2 ಹಿರಿಯ ಫಾರ್ಮಾಸಿಸ್ಟ್, 1 ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರು, 1 ಇಸಿಜಿ ಟೆಕೆ°àಷಿಯನ್, 2 ಕಚೇರಿ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರ 2 ಹುದ್ದೆಗಳು, 2 ದ್ವಿತೀಯ ದರ್ಜೆ ಸಹಾಯಕರು, 2 ಟೈಪಿಸ್ಟ್ ಮತ್ತು ಗುಮಾಸ್ತ, 1 ಚಾಲಕ ಹುದ್ದೆ, 1 ಎಕ್ಸ್‌ರೇ ಸಹಾಯಕ, 1 ಲ್ಯಾಬ್ ಸಹಾಯಕ, 2 ಅಡುಗೆ ಸಹಾಯಕರು ಹುದ್ದೆಗಳು ಇನ್ನೂ ಖಾಲಿ ತೋರಿಸುತ್ತಿವೆ.
ಡಿ ಗ್ರೂಪ್ 34ರಲ್ಲಿ 1 ಮಾತ್ರ!
ಸರಕಾರಿ ಆಸ್ಪತ್ರೆಯಲ್ಲಿ ಸ್ವತ್ಛತೆಯ ವ್ಯವಸ್ಥೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯವಾಗಿರುವ ಗ್ರೂಪ್ ಡಿ ಸಿಬಂದಿ 34 ಹುದ್ದೆಗಳು ಮಂಜೂರಾತಿಯಲ್ಲಿದ್ದರೂ, ಒಂದು ಹುದ್ದೆ ಮಾತ್ರ ಭರ್ತಿಯಾಗಿದೆ. ಮಂಜೂರುಗೊಂಡ 33 ಹುದ್ದೆಗಳು ಖಾಲಿಯಾಗಿವೆ. ಹಾಲಿ ಆಸ್ಪತ್ರೆಯ ಸ್ವತ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರೂಪ್ “ಡಿ’ಗೆ 18 ಮಂದಿ ಮತ್ತು 12 ಆರೋಗೆÂàತರ ಸಿಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.
ಪ್ರಕ್ರಿಯೆ ನಡೆಯುತ್ತಿದೆ
ಸಾರ್ವಜನಿಕ ಬೇಡಿಕೆಗೆ ಪೂರಕವಾಗಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಹಾಗೂ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯೂ ಒಂದೆಡೆ ನಡೆಯುತ್ತಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಪ್ರಸ್ತುತ ಹಿರಿಯ ಆರೋಗ್ಯ ವೈದ್ಯಾಧಿಕಾರಿ, ಮೂಳೆ ಮತ್ತು ಕೀಲು ತಜ್ಞರು, ನೇತ್ರ ತಜ್ಞರು, ಅರಿವಳಿಕೆ ತಜ್ಞರು, ಜನರಲ್ ಸರ್ಜನ್, ಕಿವಿ ಮೂಗು ಗಂಟಲು ತಜ್ಞರು, ದಂತ ಆರೋಗ್ಯಾಧಿಕಾರಿಗಳು ಸಮರ್ಪಕವಾದ ಸೇವೆ ನೀಡುತ್ತಿದ್ದಾರೆ. ಮಂಜೂರಾಗಿರುವ 25 ಶುಶ್ರೂಷಕಿಯರ ಹುದ್ದೆಗಳು ಭರ್ತಿಗೊಂಡಿವೆ.
ಕೊರತೆಯಾದ ಮಕ್ಕಳ ತಜ್ಞರು
ಪುತ್ತೂರು ಸರಕಾರಿ ಆಸ್ಪತ್ರೆಗೆ ಅಗತ್ಯವಾಗಿ ಮತ್ತು ಪ್ರಮುಖವಾಗಿ ಕೊರತೆಯಾಗಿರುವುದು ಮಕ್ಕಳ ತಜ್ಞರು. ಗರ್ಭಿಣಿಯಾಗಿದ್ದು, ಒತ್ತಡದ ಮಧ್ಯೆಯೂ ಜನಸ್ನೇಹೀ ಮಕ್ಕಳ ತಜ್ಞರಾಗಿ ಕೆಲಸ ಮಾಡುತ್ತಿದ್ದ ವೈದ್ಯೆಯೊಬ್ಬರು ಜನಪ್ರತಿನಿಧಿಯೊಬ್ಬರು ತೋರಿದ ವರ್ತನೆಗೆ ಬೇಸತ್ತು ದೀರ್ಘ ಕಾಲದ ರಜೆ ಹಾಕಿದ್ದಾರೆ. ವೈದ್ಯರ ರಜೆಯ ಕಾರಣ ಇದೀಗ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಕೊರತೆ ವಿಪರೀತವಾಗಿ ಕಾಡುತ್ತಿದೆ.
ಗಮನಕ್ಕೆ ತಂದಿದ್ದೇವೆ
ಆಸ್ಪತ್ರೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳು ಜೋಡಣೆಗೊಳ್ಳುತ್ತಿವೆ. ಕೆಲವೊಂದು ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಪಟ್ಟಂತೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ರಕ್ಷಾ ಸಮಿತಿಯ ಅಧ್ಯಕ್ಷ ರಾದ ಶಾಸಕರಿಗೂ ವಿನಂತಿ ಮಾಡಿದ್ದು, ಈ ನಿಟ್ಟಿನಲ್ಲಿ ಅವರು ಪ್ರಯತ್ನ ನಡೆಸುತ್ತಿದ್ದಾರೆ.
– ಡಾ| ಆಶಾ ಜ್ಯೋತಿ ಕೆ.,
ಆಡಳಿತ ವೈದ್ಯಾಧಿಕಾರಿ, ಸರಕಾರಿ ಆಸ್ಪತ್ರೆ, ಪುತ್ತೂರು
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.