ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ: ಸಿದ್ಧತಾ ಕ್ರಮಗಳ ಸಭೆ

Team Udayavani, Mar 22, 2018, 4:29 PM IST

22-March-17.jpg

ನಗರ : ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಹಿನ್ನೆಲೆಯಲ್ಲಿ ನಗರಸಭೆಯಿಂದ ಕೈಗೊಳ್ಳಬಹುದಾದ ಪೂರ್ವ ಸಿದ್ಧತೆಯ ಕುರಿತು ಬುಧವಾರ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ನಗರಸಭಾ ಸದಸ್ಯ ಎಚ್‌. ಮಹಮ್ಮದ್‌ ಆಲಿ ಮಾತನಾಡಿ, ಪುತ್ತೂರು ಜಾತ್ರೆ ಎಂಬುದು ಪುತ್ತೂರಿಗೆ ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಗರ ಸಭೆಗೂ ಜವಾಬ್ದಾರಿ ಇದೆ. ಸ್ವಚ್ಛತೆಯ ಕುರಿತಂತೆ ಎರಡು ವರ್ಷಗಳಿಂದ ವಿಶೇಷ ಜವಾಬ್ದಾರಿ ತೆಗೆದುಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದೇವೆ. ಇದು ನಗರಸಭೆಗೆ ಹಾಗೂ ನಗರವಾಸಿಗಳಿಗೆ ಹೆಮ್ಮೆಯ ವಿಚಾರ ಎಂದರು.

ದೇವರ ಸವಾರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಸ್ವಚ್ಛತೆ, ರಸ್ತೆ ಸರಿಪಡಿಸುವ, ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಶೀಘ್ರ ನಡೆಸಲಾಗುವುದು. ಪೇಟೆ ಸವಾರಿ ಸಂದರ್ಭ ರಸ್ತೆಗೆ ನೀರು ಹಾಕುವ, ರಸ್ತೆ ಬದಿಯ ಸ್ಲ್ಯಾಬ್‌ಗಳನ್ನು ಸರಿಪಡಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ. ರಥಬೀದಿಗೆ ಜಾತ್ರೆ ಆರಂಭಕ್ಕೆ ಮೊದಲೇ ಹೈಮಾಸ್ಟ್‌ ವಿದ್ಯುತ್‌ ದೀಪ ಅಳವಡಿಸುವ ಕೆಲಸ ಮಾಡಲಾಗುವುದು ಎಂದರು.

ದೇವಾಲಯದಿಂದ ಸಹಕಾರ
ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಎನ್‌.ಕೆ. ಜಗನ್ನಿವಾಸ್‌ ರಾವ್‌ ಮಾತನಾಡಿ, ಜಾತ್ರೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ನಗರಸಭೆಯಿಂದ ಕೈಗೊಳ್ಳಲಾದ ವ್ಯವಸ್ಥೆಗಳ ಕುರಿತಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

ಹಿರಿಯರಾದ ಕಿಟ್ಟಣ್ಣ ಗೌಡ ಮಾತನಾಡಿ, ಬಲ್ನಾ ಡಿನಿಂದ ದೇವರ ಭಂಡಾರ ಬಂದು ಬಪ್ಪಳಿಗೆಯಲ್ಲಿ ಇಳಿಯುವಲ್ಲಿ ರಸ್ತೆಯಲ್ಲಿ ಹೊಂಡಗಳಿವೆ. ಬೀದಿ ದೀಪಗಳನ್ನೂ ಅಳವಡಿಸಬೇಕು. ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.

ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್‌. ದಾಸಪ್ಪ ರೈ ಮಾತನಾಡಿ, ದೇವರು ಪೇಟೆ ಸವಾರಿ ಹೋಗುವಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಮುಖ್ಯ ರಸ್ತೆಯಿಂದ ಬಲ್ನಾ ಡಿಗೆ ಹೋಗುವಲ್ಲಿ ಇರುವ ದೊಡ್ಡ ಗಾತ್ರದ ಹೊಂಡವನ್ನು ಮುಚ್ಚಿಸಬೇಕು ಎಂದರು. ವಿದ್ಯುತ್‌ ವ್ಯವಸ್ಥೆಯ ಕುರಿತು ಮೆಸ್ಕಾಂ ಅಧಿಕಾರಿಗಳಲ್ಲಿ ಮಾತುಕತೆ ನಡೆಸಲಾಗುವುದು. ಜನ ಸೇರುವ ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಕರಪತ್ರದ ಮೂಲಕ ಸ್ವತ್ಛತೆಯ ಜಾಗೃತಿ ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ಮುಖೇಶ್‌ ಕೆಮ್ಮಿಂಜೆ, ಜಯಲಕ್ಷ್ಮೀ ಸುರೇಶ್‌, ಹರೀಶ್‌ ನಾೖಕ್‌, ನಗರಸಭಾ ವ್ಯವಸ್ಥಾಪಕ ಚಂದ್ರಕುಮಾರ್‌, ಶ್ವೇತಾ ಕಿರಣ್‌, ರಾಮಚಂದ್ರ, ನಗರಸಭಾ ಅಧಿಕಾರಿ ಪುರಂದರ ರೈ, ವ್ಯವಸ್ಥಾಪನ ಸಮಿತಿ ಸದಸ್ಯ ಜಾನು ನಾಯ್ಕ, ಕೊರಗಪ್ಪ ಗೌಡ, ಯು.ಕೆ. ನಾೖಕ್‌, ನಾಗೇಶ್‌ ಭಾಗವಹಿಸಿ ಸಲಹೆ -ಸೂಚನೆಗಳನ್ನು ನೀಡಿದರು.

ತಾತ್ಕಾಲಿಕ ಶೌಚಾಲಯ
ಸ್ವಚ್ಛತೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು, ರಥಬೀದಿ, ಜಾತ್ರಾ ಗದ್ದೆಯಲ್ಲಿ ಧೂಳು ಹೆಚ್ಚಾಗದಂತೆ ಸಾಯಂಕಾಲದ ಸಮಯದಲ್ಲಿ ನೀರು ಸಿಂಪಡಿಸುವ ವ್ಯವಸ್ಥೆ ಆಗಬೇಕು. ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು. ಅಲ್ಲಲ್ಲಿ ಡಸ್ಟ್‌ ಬಿನ್‌ ಅಳವಡಿಸುವಂತೆ, ತಾತ್ಕಾಲಿಕ ಶೌಚಾಲಯವನ್ನು ನಿರ್ಮಿಸುವಂತೆ ವಿನಂತಿಸಿದರು. ನಗರಸಭೆಗೆ ದೇವಾಲಯದ ಕಡೆಯಿಂದ ಎಲ್ಲರ ಸಹಕಾರ ನೀಡುವುದಾಗಿ ಎನ್‌.ಕೆ. ಜಗನ್ನಿವಾಸ್‌ ರಾವ್‌ ತಿಳಿಸಿದರು.

ಟಾಪ್ ನ್ಯೂಸ್

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Theft Case: ಕುಕ್ಕೆ; ದೇವಸ್ಥಾನದಿಂದ ಕಳವು; ಆರೋಪಿ ಸೆರೆ

Theft Case: ಕುಕ್ಕೆ; ದೇವಸ್ಥಾನದಿಂದ ಕಳವು; ಆರೋಪಿ ಸೆರೆ

Bantwala: ತಲೆಮರೆಸಿಕೊಂಡಿದ್ದ ಕಳವು ಆರೋಪಿ ಬಂಧನ

Bantwala: ತಲೆಮರೆಸಿಕೊಂಡಿದ್ದ ಕಳವು ಆರೋಪಿ ಬಂಧನ

Bantwal: ಟೆಂಪೋ ಹಿಂದಕ್ಕೆ ಸರಿದು ಮೂರರ ಹರೆಯದ ಮಗು ಸಾವು

Bantwal: ಟೆಂಪೋ ಹಿಂದಕ್ಕೆ ಸರಿದು ಮೂರರ ಹರೆಯದ ಮಗು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Aranthodu ಸಂಪಾಜೆ: ಮರ ಬಿದ್ದು ಮನೆಗೆ ಹಾನಿ

Aranthodu ಸಂಪಾಜೆ: ಮರ ಬಿದ್ದು ಮನೆಗೆ ಹಾನಿ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.