ಪುತ್ತೂರು ದೇಗುಲದ ಗದ್ದೆಯಲ್ಲಿ ಜನಸಂದಣಿ

Team Udayavani, Apr 21, 2018, 9:05 AM IST

Jaathre-20-4.jpg

ನಗರ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಸಮಾಪನಗೊಂಡಿದೆ. ಆದರೆ ದೇವರಮಾರು ಗದ್ದೆಯಲ್ಲಿ ಸಂತೆ ವ್ಯಾಪಾರದ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ. ಶುಕ್ರವಾರ ಸಂಜೆ ದೇಗುಲದ ಗದ್ದೆಯಲ್ಲಿ ಜನಸಂದಣಿ ಕಂಡುಬಂತು. ಜಾತ್ರೆಯ ಸಂದರ್ಭ ದೊಡ್ಡ ಪ್ರಮಾಣದಲ್ಲಿ ಜನರು ಆಗಮಿಸುತ್ತಾರೆ. ಆಗ ಸಂತೆಯಿಂದ ಖರೀದಿ ಮಾಡುವುದು ಕಷ್ಟವೇ. ಹೀಗೆ ಹಿಂದೆ ಹೋದವರು, ಇದೀಗ ಸಂತೆಗೆ ಆಗಮಿಸುತ್ತಿದ್ದಾರೆ. ಸರಾಗವಾಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಗುರುವಾರ ರಾತ್ರಿ ಪುತ್ತೂರು ಪೇಟೆಯಲ್ಲಿ ಉತ್ತಮ ಮಳೆಯಾಗಿತ್ತು. ಕೆಲ ಗಂಟೆಗಳ ಕಾಲ ವಿದ್ಯುತ್‌ ಸ್ಥಗಿತಗೊಂಡಿತ್ತು. ಆದರೆ ಮಳೆ ಸಂತೆ ವ್ಯಾಪಾರಕ್ಕೆ ಅಡ್ಡಿ ಮಾಡಿಲ್ಲ. ಮಳೆಯನ್ನು ಎದುರಿಸಿ ನಿಂತ ಸಂತೆ ವ್ಯಾಪಾರ, ಶುಕ್ರವಾರ ಬೆಳಿಗ್ಗೆ ಮತ್ತೆ ಚಿಗಿತುಕೊಂಡಿವೆ. ಮಧ್ಯಾಹ್ನದ ಬಳಿಕ ಇನ್ನಷ್ಟು ಆಸಕ್ತರನ್ನು ಕೈಬೀಸಿ ಕರೆಯತೊಡಗಿತು. ಜಾತ್ರೆಯ ಬಳಿಕ ಒಂದಷ್ಟು ಸಮಯ ಸಂತೆ ಇರುವುದು ಸಾಮಾನ್ಯ. ಆರಾಮವಾಗಿ ಖರೀದಿ ಮಾಡಬಹುದು. ಇದರ ಜತೆಗೆ ಚೌಕಾಸಿ ನಡೆಸಲು ಅವಕಾಶ ಇದೆ. ಜಾತ್ರೆಯ ಸಂದರ್ಭದಲ್ಲಾದರೆ ವ್ಯಾಪಾರಿಗಳು ಹೇಳಿದ ದರ. ಆದರೆ ಈಗ ಗ್ರಾಹಕರು ಪಟ್ಟು ಹಿಡಿದ ದರ. ಬೇಕಾದಂತೆ ಚೌಕಾಸಿ ಮಾಡಿ, ವಸ್ತುಗಳ ಖರೀದಿ ಮಾಡುವವರಿದ್ದಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆ ಸುಮಾರು 8 ಎಕರೆ ಜಾಗದಲ್ಲಿ ಹರಡಿಕೊಂಡಿದೆ. ಇದು ವ್ಯಾಪಾರಿಗಳಿಗೂ ಅನುಕೂಲವಾಗಿದೆ. ಮಾತ್ರವಲ್ಲ ಗ್ರಾಹಕರು ತಮ್ಮ ವಾಹನಗಳನ್ನು ಬೇಕಾದಂತೆ ಪಾರ್ಕ್‌ ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ ಒಂದು ವಾರ ಹೆಚ್ಚು ನಿಂತರೂ ಯಾವುದೇ ತೊಂದರೆ ಎದುರಾಗದು. ವ್ಯಾಪಾರಿಗಳು ಎಷ್ಟು ಲಾಭ ಬರುತ್ತದೋ ಅಷ್ಟನ್ನು ಬಾಚಿಕೊಳ್ಳುವ ಉತ್ಸಾಹದಲ್ಲಿರುತ್ತಾರೆ. ಗ್ರಾಹಕರು ತಮಗೆ ಎಷ್ಟು ಕಡಿಮೆಗೆ ಉತ್ಕೃಷ್ಟ ವಸ್ತು ಸಿಗುತ್ತದೋ ಎಂಬ ತವಕದಲ್ಲಿರುತ್ತಾರೆ. ಪುತ್ತೂರು ಜಾತ್ರೆಯ ಗದ್ದೆಯಲ್ಲಿ ಎಲ್ಲ ರೀತಿಯ ಕ್ರಾಫ್ಟ್‌, ಬಟ್ಟೆ- ಬರೆ, ಪಾದರಕ್ಷೆ, ಫ್ಯಾನ್ಸಿ ಸಾಮಾಗ್ರಿ, ತಿನಿಸು, ಮನರಂಜನೆ ವಸ್ತುಗಳಿವೆ. ಆದ್ದರಿಂದ ಈ ದಿನಗಳಲ್ಲಿ ಹೆಚ್ಚಾಗಿ ಮಹಿಳೆಯರೇ ಇಲ್ಲಿ ಆಗಮಿಸಿ, ಖರೀದಿಯಲ್ಲಿ ಭಾಗಿಯಾಗುತ್ತಾರೆ. ಸಾಧಾರಣೆ ಸಂಜೆ ಆಗುತ್ತಲೇ ಶುರುವಾಗುವ ವ್ಯಾಪಾರ, ಸರಿರಾತ್ರಿ ವರೆಗೂ ಮುಂದುವರಿದೇ ಇರುತ್ತದೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-bantwala-1

Bantwala: ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಪತ್ನಿ ಮೃತ್ಯು, ಪತಿ ಗಂಭೀರ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Untitled-1

Uppinangady ವಿವಾಹಿತೆ ನಾಪತ್ತೆ: ದೂರು ದಾಖಲು

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Suresh ಬಲ್ನಾಡು ಅವರಿಗೆ ಸಾಂಬಾರ ಕೃಷಿಕ ಪ್ರಶಸ್ತಿ ಪ್ರದಾನ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

Engineer Bantwal ಜಯಂತ್‌ ಬಾಳಿಗ ಅವರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಿಜಿ ಪ್ರಶಸ್ತಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.