ಹಸುವಿನ ಸೆಗಣಿ ಬಳಸಿ ‘ಗೋ ರಂಗ್’ ತಯಾರಿ
Team Udayavani, Jan 20, 2019, 5:53 AM IST
ನಿಡ್ಪಳ್ಳಿ : ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಸಮೀಪದ ದೇವಕಾನ ನಿವಾಸಿ ಪಂಚಗವ್ಯ ಸಿದ್ದ ವೈದ್ಯ ಡಾ| ಶಶಿಶೇಖರ ಭಟ್ ಅವರು ನಾಟಿ ಹಸುವಿನ ಸೆಗಣಿ ಬಳಸಿ ಮನೆಯ ಗೋಡೆಗೆ ಬಳಿಯುವ ಬಣ್ಣ ತಯಾರಿಸಿ ಯಶಸ್ವಿಯಾಗಿದ್ದಾರೆ.
ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಪದಾರ್ಥಗಳಿಂದ ಮಾಡಿದ ಬಣ್ಣಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ಮನಗಂಡ ಅವರು ಈ ನೂತನ ಉತ್ಪನ್ನವನ್ನು ತಯಾರಿಸಲು ಮುಂದಾಗಿ ಯಶಸ್ವಿಯಾಗಿದ್ದಾರೆ.
ಪಾರಂಪರಿಕ ತಣ್ತೀದ ಆಧಾರ
ಗೋ ಸಾಕಾಣಿಕಾ ಕೇಂದ್ರಿತ ಜೀವನದಿಂದ ಪ್ರೇರಿತರಾಗಿರುವ ಅವರು ಗವ್ಯ ಉತ್ಪನ್ನಗಳ ಸಂಶೋಧಕರಾಗಿದ್ದು, ಔಷಧ ನೀಡಿ ಅನೇಕ ರೋಗಿಗಳ ರೋಗವನ್ನು ವಾಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸೆಗಣಿ ನೀರಿನಲ್ಲಿ ಸೂರ್ಯಗ್ರಹಣ ವೀಕ್ಷಿಸಿದರೆ ನಮಗೆ ಸಮಸ್ಯೆ ಇಲ್ಲ ಎನ್ನುವ ಪಾರಂಪರಿಕ ತಣ್ತೀದ ಆಧಾರದ ಮೇಲೆ ಈ ಸಂಶೋಧನೆಗೆ ತೊಡಗಿದ್ದಾರೆ.
ಅಡ್ಡ ಪರಿಣಾಮವಿಲ್ಲ
ನಾವು ವಾಸಿಸುವ ಜಾಗವನ್ನು ರಾಸಾಯನಿಕ ಬಣ್ಣಗಳಿಂದ ಮುಕ್ತಗೊಳಿಸಿ ವಿಕಿರಣ ರಹಿತ ಮಾಡುವ ನಿಟ್ಟಿನಲ್ಲಿ ಗೋ ರಂಗ್ (ಬಣ್ಣ) ತಯಾರಿಸಿ ಮೊದಲು ತಮ್ಮದೇ ಮನೆಯ ಗೋಡೆಗೆ ಬಣ್ಣ ಬಳಿದಿದ್ದಾರೆ. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ, ಆಯುಷ್ಯ ಹಾಗೂ ಆರೋಗ್ಯವೂ ವೃದ್ಧಿಸುತ್ತದೆ ಎಂದು ಡಾ| ಶಶಿಶೇಖರ ಭಟ್ ಹೇಳುತ್ತಾರೆ.
ಉಷ್ಣಾಂಶ ತಡೆಯುವ ಶಕ್ತಿ
ಗವ್ಯ ಔಷಧ ಹಲವು ಮಾರಕ ಕಾಯಿಲೆಗಳನ್ನು ವಾಸಿ ಮಾಡುವಲ್ಲಿ ಪರಿಣಾಮಕಾರಿ ಎನ್ನುವ ಸಂಗತಿ ಈ ವಿನೂತನ ಆವಿಷ್ಕಾರಕ್ಕೆ ಪ್ರೇರಣೆಯಾಯಿತು. ಸೆಗಣಿ ಕಪ್ಪಾದರೂ ಇತರ ಕಪ್ಪು ವಸ್ತುಗಳಿಗೆ ಹೋಲಿಸಿದರೆ ಉಷ್ಣಾಂಶ ತಡೆಯುವ ಶಕ್ತಿ ಪಡೆದಿದೆ. ಜಾಗತಿಕ ತಾಪಮಾನ ಏರಿಕೆಗೆ ಆರ್‌ಸಿಸಿ ಮನೆಗಳು ಕಾರಣವಾಗಿದ್ದು, ಮೇಲ್ಛಾವಣಿಗೆ ಸೆಗಣಿ ಜತೆ ಸುಣ್ಣ ಹಾಗೂ ಬೆಲ್ಲ ಸೇರಿಸಿ ಲೇಪನ ಮಾಡುವುದರಿಂದ ಕಟ್ಟಡದ ಒಳಗೆ ಬಿಸಿ ತಗ್ಗಿಸಲು ಸಾಧ್ಯವಿದೆಯೇ ಎಂದು ಪ್ರಯೋಗ ಮಾಡಲು ತೊಡಗಿದ್ದೇನೆ ಎಂದು ಭಟ್ ಹೇಳಿದ್ದಾರೆ.
ವಿವಿಧ ಬಣ್ಣಗಳ ತಯಾರಿ
ಸದ್ಯ ಸೆಗಣಿಯಿಂದ ದ್ರವರೂಪದ ಕಡು ಹಸಿರು ಮತ್ತು ಹಸಿರು ಮಿಶ್ರಿತ ಹಳದಿ ಬಣ್ಣ ತಯಾರಿಸಲಾಗಿದೆ. ದ್ರವರೂಪದಲ್ಲಿ ವಿವಿಧ ಬಣ್ಣಗಳ ತಯಾರಿ ಕಷ್ಟವಾದುದ ರಿಂದ ಮುಂದೆ ಪುಡಿ ರೂಪದಲ್ಲಿ ವಿವಿಧ ಬಣ್ಣಗಳ ತಯಾರಿಸಲು ಯೋಜನೆ ಇದ್ದು, ಅಗತ್ಯವಾದ ಬಣ್ಣಗಳನ್ನು ಮಾಡಿಕೊಳ್ಳಬಹುದಾಗಿದೆ.
ವಿಷಮುಕ್ತ ಪರಿಸರ
ಸೆಗಣಿಯಲ್ಲಿ ಪೇಪರ್, ರಟ್ಟು ಮೊದಲಾದ ವಸ್ತುಗಳನ್ನು ತಯಾರಿಸುವುದನ್ನು ಗಮನಿಸಿ ‘ಗೋ ರಂಗ್’ ಸಿದ್ಧಪಡಿಸಲು ಮುಂದಾಗಿದೆ. ಇದನ್ನು ಬಳಿಯುವವರಿಗೂ ಅಡ್ಡ ಪರಿಣಾಮವಿಲ್ಲ. ವಿಷಮುಕ್ತ ಪರಿಸರ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಈ ರೀತಿ ಸಗಣಿಯ ಉಪಯೋಗದಿಂದ ಗೋ ರಕ್ಷಣೆಯೂಆದೀತು ಎನ್ನುವ ವಿಶ್ವಾಸ ಇದೆ.
ಡಾ| ಶಶಿಶೇಖರ, ಇರ್ದೆ,
ಗವ್ಯ ಸಿದ್ದ ವೈದ್ಯರು
ಆರೋಗ್ಯ ಸಮಸ್ಯೆ ಬರೋದಿಲ್ಲ
ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಬಣ್ಣ ಬಳಿಯುವಾಗ ಕಣ್ಣು ಉರಿ ಮತ್ತು ಕೆಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಗೋ ರಂಗ್ ಬಳಿಯುವಾಗ ಕಣ್ಣುರಿ ಬರುವುದಿಲ್ಲ. ಖುಷಿ ಎನಿಸುತ್ತದೆ.
ಬಣ್ಣ ಬಳಿಯುವ ಕಾರ್ಮಿಕರು
•ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.