ಹೆಸರಿಗಷ್ಟೇ ಎರೆಹುಳ ಗೊಬ್ಬರ ಘಟಕ

Team Udayavani, May 21, 2018, 10:50 AM IST

21-may-5.jpg

ಪುತ್ತೂರು: ಎರೆಹುಳು ಗೊಬ್ಬರ ತಯಾರಿಸುವ ಉದ್ದೇಶದಿಂದ ನೆಕ್ಕಿಲು ಎಂಬಲ್ಲಿ ನಗರಸಭೆ ಆಡಳಿತ ಆರಂಭಿಸಿದ ಘಟಕದಲ್ಲಿ ಗೊಬ್ಬರವನ್ನು ಉತ್ಪಾದನೆ ಮಾಡಲು ಇದುವರೆಗೆ ಸಾಧ್ಯವಾಗಿಲ್ಲ. ಕಾರಣ ಈ ಘಟಕದ ನಿರ್ಮಾಣವೇ ಅವೈಜ್ಞಾನಿಕ! ಎರೆಹುಳು ಗೊಬ್ಬರ ಘಟಕ ಆರಂಭದ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಖರ್ಚು ಮಾಡಿದ್ದು ಬಿಟ್ಟರೆ ಐದು ಪೈಸೆಯ ಪ್ರಯೋ ಜನವೂ ಆಗಿಲ್ಲ. ಮಹತ್ವಾಕಾಂಕ್ಷೆಯ ಎರೆ ಹುಳ ಘಟಕ ಈಗ ಯಾರಿಗೂ ಬೇಡವಾಗಿ ಅನಾಥವಾಗಿದೆ.

ಪುತ್ತೂರು ನಗರದಲ್ಲಿ ದಿನ ನಿತ್ಯ ಉತ್ಪತ್ತಿ ಯಾಗುವ ಸುಮಾರು 20 ಟನ್‌ ತ್ಯಾಜ್ಯವನ್ನು ವಿಲೇವಾರಿ ಮಾಡಲೆಂದೇ ನಗರದಿಂದ ಐದು ಕಿ.ಮೀ. ದೂರದ ಬನ್ನೂರಿನ ನೆಕ್ಕಿಲು ಎಂಬಲ್ಲಿ ಲ್ಯಾಂಡ್‌ ಫಿಲ್‌ ಸೈಟ್‌ ಇದೆ. ನಾಲ್ಕು ದಶಕಗಳ ಹಿಂದೆ ಕಸ, ತಾಜ್ಯ ಹಾಕಲು ಆರಂಭಿಸಿದ ಈ ಜಾಗ ಪುತ್ತೂರು ಪುರಸಭೆಯಾಗಿ, ನಗರಸಭೆಯಾಗಿ ಮೇಲ್ದರ್ಜೆಗೇರಿದ ಮೇಲೂ ತ್ಯಾಜ್ಯ ಸಂಗ್ರಹಾಗಾರವಾಗಿ ಉಳಿದುಕೊಂಡಿದೆ. ಲ್ಯಾಂಡ್‌ ಫಿಲ್‌ ಸೈಟ್‌ (ಭೂ ಭರ್ತಿ ಸ್ಥಳ) ಆಗಿ ಅಭಿವೃದ್ಧಿಯಾಗುವ ಬದಲು ಈ ಜಾಗ ಕೇವಲ ಡಂಪಿಂಗ್‌ ಯಾರ್ಡ್‌ ಆಗಿ ಪರಿವರ್ತನೆಗೊಂಡಿದೆ.

ಹುಳ ಉತ್ಪತ್ತಿಯಾಗುವುದೇ?
ತ್ಯಾಜ್ಯದಿಂದ ಎರೆಗೊಬ್ಬರ ತಯಾರಿಸಲು ಸುಸಜ್ಜಿತ ಘಟಕವನ್ನು 4 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಲಾಗಿದೆ. ಡಂಪಿಂಗ್‌ ಯಾರ್ಡ್‌ ಒಂದು ಮೂಲೆಯಲ್ಲಿ ಸುವ್ಯವಸ್ಥಿತ ಕಟ್ಟಡ ನಿರ್ಮಿಸಿ ಅದರೊಳಗೆ 13 ಗೊಬ್ಬರ ಟ್ಯಾಂಕ್‌ ನಿರ್ಮಿಸಲಾಗಿದೆ. ವಿಂಗಡಿತ ಕಸವನ್ನು ಇದರಲ್ಲಿ ಹಾಕಿ ಗೊಬ್ಬರ ಉತ್ಪಾದಿಸುವುದು ನಿಯಮ. ತ್ಯಾಜ್ಯವನ್ನು ಇದರಲ್ಲಿ ಸುರಿದು ಹದವಾಗಿ ಮಣ್ಣಿನ ಮಿಶ್ರಣ ಹಾಕಿದರೆ ಅದರಲ್ಲಿ ಎರೆಹುಳುಗಳು ಹುಟ್ಟಿಕೊಂಡು ಮಣ್ಣು ಮಿಶ್ರಿತ ತ್ಯಾಜ್ಯವನ್ನು ತಿನ್ನುತ್ತಾ ಸಂಪೂರ್ಣ ಗೊಬ್ಬರವಾಗಿ ಪರಿವರ್ತಿಸುತ್ತವೆ.

ಎರೆಗೊಬ್ಬರ ನಿರ್ಮಾಣವಾಗಬೇಕಾದರೆ ಟ್ಯಾಂಕ್‌ನ ತಳಭಾಗ ಮಣ್ಣಿನೊಂದಿಗೆ ಸಂಪರ್ಕಿಸಬೇಕು. ಆಗ ಮಾತ್ರ ಮಣ್ಣಿನಡಿ ಯಿಂದ ಎರೆಹುಳಗಳು ಬಂದು ತ್ಯಾಜ್ಯವನ್ನು ತಿಂದು ಸಂತಾನ ಸೃಷ್ಟಿ ಮಾಡುತ್ತವೆ. ದುರಂತವೆಂದರೆ ಇಲ್ಲಿನ ಎಲ್ಲ ಟ್ಯಾಂಕ್‌ ಗಳ ತಳಭಾಗದಲ್ಲಿ ಕಾಂಕ್ರೀಟ್‌ ಇದೆ. ಇಲ್ಲಿ ಎರೆಹುಳಗಳ ಸೃಷ್ಟಿಯೇ ಅಸಾಧ್ಯ.

ಭೂ ಭರ್ತಿ ಸ್ಥಳ
ಏಳು ಎಕ್ರೆ ವಿಸ್ತೀರ್ಣದಲ್ಲಿರುವ ಡಂಪಿಂಗ್‌ ಯಾರ್ಡ್‌ ಎಂದು ಗುರುತಿಸಿದರೂ ಇದು ಲ್ಯಾಂಡ್‌ ಫಿಲ್‌ ಸೈಟ್‌. ತಗ್ಗಾದ ಪ್ರದೇಶದಲ್ಲಿ ತ್ಯಾಜ್ಯವನ್ನು ಹಾಕಿ ಅದರ ಮೇಲೆ ಮಣ್ಣು ಹರಡಿ, ಅದು ಗೊಬ್ಬರವಾಗಿ ಪರಿವರ್ತನೆ ಆಗುತ್ತಲೇ ಅದನ್ನು ಅಲ್ಲಿಂದ ಗೊಬ್ಬರ ರೂಪದಲ್ಲಿ ಬಳಸುವುದು. ಇದಕ್ಕೆಂದೇ ಇಲ್ಲಿನ ಲ್ಯಾಂಡ್‌ ಫಿಲ್‌ ಸೈಟ್‌ನ ನೆಲದಲ್ಲಿ ವಿಶಾಲವಾಗಿ ಟಾರ್ಪಾಲ್‌ ಹರಡಿ ಅದರ ಮೇಲೆ ತ್ಯಾಜ್ಯ ಸುರಿಯುವ ವ್ಯವಸ್ಥೆ ಇದೆ. ಅಲ್ಲಿ ಇಂಗಿದ ನೀರು ಹರಿದು ಹೋಗಲು ವ್ಯವಸ್ಥೆಯನ್ನೂ ಮಾಡಲಾಗಿದೆ. ಸುತ್ತಲೂ ಕಾಂಪೌಂಡ್‌, ರಸ್ತೆ ಸಂಪರ್ಕ ಇತ್ಯಾದಿಯೂ ಇದೆ. ಎಲ್ಲವೂ ಇದ್ದರೂ ಎಲ್ಲಿ ತ್ಯಾಜ್ಯ ಸುರಿಯಬೇಕೋ ಅಲ್ಲಿ ಸುರಿಯದೇ ಬೇರೆಯೇ ಕಡೆ ಸುರಿಯಲಾಗುತ್ತಿದೆ. 

ತಾಜ್ಯ ವಿಂಗಡಣೆ ಇಲ್ಲ
ಎರೆಗೊಬ್ಬರ ಘಟಕ ಕೆಲಸ ಮಾಡದೇ ಇರಲು ಇನ್ನೊಂದು ಕಾರಣ ಇಲ್ಲಿ ಕಸ ಬೇರ್ಪಡುವಿಕೆ ಆಗದೇ ಇರುವುದು. ಹಸಿ ಕಸ ಹಾಗೂ ಒಣ ಕಸವನ್ನು ಆರಂಭದಲ್ಲೇ ಬೇರ್ಪಡಿಸಿ ತಂದರೆ ಈ ಸಮಸ್ಯೆ ಇರುವುದಿಲ್ಲ. ಹಸಿ ಕಸವನ್ನು ಮಾತ್ರ ಎರೆಹುಳ ಗೊಬ್ಬರಕ್ಕೆ ಬಳಸಬೇಕಾಗುತ್ತದೆ. ಡಂಪ್‌ ಮಾಡುವ ಸಂದರ್ಭಕಸ ಬೇರ್ಪಡಿಸುವಿಕೆ ಆಗದ ಕಾರಣ ಎರೆಹುಳ ಗೊಬ್ಬರ ತಯಾರಿಕಾ ಯೋಜನೆ ನೆನೆಗುದಿಗೆ ಬಿದ್ದಿದೆ.

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.