ಪುತ್ತೂರು: ಹೊಸ ವರ್ಷ ಆಚರಣೆ ನಿಷೇಧಕ್ಕೆ ಮನವಿ
Team Udayavani, Dec 15, 2017, 2:44 PM IST
ಪುತ್ತೂರು: ಡಿಸೆಂಬರ್ 31ರ ರಾತ್ರಿ ಹೊಸ ವರ್ಷದ ಪಾರ್ಟಿಗಳನ್ನು, ವರ್ಷಾಚರಣೆಯನ್ನು ನಿಷೇಧಿಸುವ ಕುರಿತು ರಾಜ್ಯಾದ್ಯಂತ ಜನಾಂದೋಲನ ನಡೆಸಲಾಗುತ್ತಿದ್ದು, ಆ ಪ್ರಯುಕ್ತ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಪತಹಶೀಲ್ದಾರ್ ಶ್ರೀಧರ ಕೆ., ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಡಿ. 31ರ ಮಧ್ಯರಾತ್ರಿ ಪಾರ್ಟಿ ಮಾಡುವ ಕೆಟ್ಟ ರೂಢಿ ಹೆಚ್ಚಾಗಿದೆ. ಹೊಸ ವರ್ಷವನ್ನು ಆಚರಿಸುವ ನೆಪದಲ್ಲಿ ಮದ್ಯಪಾನ ಮಾಡುವುದು, ಕರ್ಕಶ ಧ್ವನಿವರ್ಧಕ ಹಚ್ಚಿ ಅದರ ತಾಳಕ್ಕೆ ಅಶ್ಲೀಲ ನೃತ್ಯ ಮೊದಲಾದವುಗಳು ನಡೆದ ಉದಾಹರಣೆಗಳಿವೆ. ಮಹಿಳೆಯರಿಗೆ, ಯವತಿಯರಿಗೆ, ಇತರರಿಗೆ ಸಂಭ್ರಮಾಚರಣೆಯಿಂದ ಸಂಚಾರಕ್ಕೂ ತೊಂದರೆ ಆಗಲಿದ್ದು, ಹಾಗಾಗಿ ರಸ್ತೆ ಮತ್ತು ಪ್ರಮುಖ ತೀರ್ಥಕ್ಷೇತ್ರಗಳಲ್ಲಿ, ಪ್ರವಾಸಿ ಸ್ಥಳ, ಕೋಟೆಯಂತಹ ಐತಿಹಾಸಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮತ್ತು ಧೂಮಪಾನ ಹಾಗೂ ಪಾರ್ಟಿ ನಡೆಸಲು ಅನುಮತಿ ನೀಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಆರಕ್ಷಕರು ಗಸ್ತು ತಿರುಗುವುದು, ಅತಿ ವೇಗ ವಾಹನ ಚಲಾವಣೆಗೆ ದಂಡ ವಿಧಿಸುವುದು, ಪಟಾಕಿಗಳಿಂದಾಗುವ ಪ್ರದೂಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇತ್ಯಾದಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಗ್ರಹಿಸಲಾಗಿದೆ. 15 ದಿನಗಳ ಒಳಗಾಗಿ ಈ ಬಗ್ಗೆ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆಯೂ ವಿನಂತಿಸಲಾಗಿದೆ. ಈ ಸಂದರ್ಭ ಹಿಂದೂ ಜನಜಾಗೃತಿ ಸಮಿತಿಯ ಕೃಷ್ಣಕುಮಾರ್ ಶರ್ಮ, ವಂದನಾ, ನಾರಾಯಣ ಶರ್ಮ, ರಮೇಶ, ದಯಾನಂದ ಹೆಗ್ಡೆ, ಸಾಂತಪ್ಪ ಗೌಡ, ಹರಿಪ್ರಸಾದ್ ಶೆಟ್ಟಿ, ಶರತ್ ಆಳ್ವ, ಕೇಶವ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.