ಜಾತ್ರಾ ಸಂಭ್ರಮಕ್ಕೆ ತೆರೆದುಕೊಳ್ಳುತ್ತಿರುವ ಪುತ್ತೂರು
Team Udayavani, Apr 13, 2017, 2:06 PM IST
ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾ ತೋಭಾರ ಶ್ರೀ ಮಹಾಲಿಂಗೇಶ್ವರನ ಜಾತ್ರೆ ದೇವ ಸ್ಥಾನದ ಒಳಗಿನ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತ ವಾಗಿಲ್ಲ. ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ವಿವಿಧ ಕಾರ್ಯಕ್ರಮಗಳು, ರಾರಾಜಿಸುವ ಕಮಾನು, ಕಟೌಟ್‌ಗಳಿಂದ ಮೆರುಗು ಹೆಚ್ಚಿದೆ.
ನಗರವಂತೂ ತಳಿರು ತೋರಣ, ಮಹಾದ್ವಾರ, ದೇವರ ಕಟೌಟ್‌ಗಳು, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳುತ್ತಿದೆ. ನಗರವನ್ನು ಪ್ರವೇಶಿಸುವ ವಿವಿಧ ಕಡೆಗಳಲ್ಲಿ ಹಾಗೂ ದೇವರು ಸವಾರಿ ತೆರಳುವ ಕಡೆಗಳಲ್ಲಿ ಭಕ್ತರು ಅಳವಡಿಸಿರುವ ಸ್ವಾಗತ ಕಮಾನುಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿವೆ.
ಜಾತ್ರೆಯ ಸಂದರ್ಭದಲ್ಲಿ ಎ. 10ರಿಂದ ಎ.18ರ ವರೆಗೆ ರಾತ್ರಿ ಶ್ರೀ ದೇವರ ಪೇಟೆ ಸವಾರಿ ನಡೆಯುತ್ತದೆ. ಎ. 16ರಂದು ಮಾತ್ರ ದೇವರ ಪೇಟೆ ಸವಾರಿ ನಡೆಯುವುದಿಲ್ಲ.
ಶ್ರೀ ದೇವರ ಪೇಟೆ ಸವಾರಿಯ ಸಂದರ್ಭದಲ್ಲಿ ವಿವಿಧ ಕಟ್ಟೆಗಳಲ್ಲಿ ಪೂಜೆ ನಡೆಯುತ್ತದೆ. ಪೂಜೆ ನಡೆಯುವ ಕಟ್ಟೆಗಳಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಭಕ್ತರು ಆಯೋಜಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಲಂಕಾರಗಳೂ ನಡೆಯುತ್ತವೆ.
ಪೇಟೆ ಸವಾರಿ
ಶ್ರೀ ದೇವರ ಪೇಟೆ ಸವಾರಿ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರ ಬೆಟ್ಟು, ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು ಏಳ್ನಾಡುಗುತ್ತು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ, ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳು ವಾರುಬೈಲು, ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್ ಸವಾರಿ, ಬನ್ನೂರು, ಅಶೋಕನಗರ, ರೈಲ್ವೇ ಮಾರ್ಗ ಸವಾರಿ, ಬಂಗಾರ್ ಕಾಯರ್‌ಕಟ್ಟೆ ಸವಾರಿ ನಡೆಯುತ್ತದೆ.
ಜನಜಂಗುಳಿ
ಜಾತ್ರಾ ಗದ್ದೆಯಲ್ಲಿ ಸಂತೆ ಮಾರುಕಟ್ಟೆ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಈ ಮಧ್ಯೆ ನಗರದಲ್ಲಿ ಜನಜಂಗುಳಿಯೂ ಹೆಚ್ಚಾಗಿದೆ. ಮಾಮೂಲಾಗಿ ಸಂಜೆ ಸಮಯದಲ್ಲಿ ನಗರದಲ್ಲಿ ಒಂದಷ್ಟು ಜನಸಂದಣಿ ಕಡಿಮೆಯಾದರೆ ಜಾತ್ರೆಯ ಸಂದರ್ಭದಲ್ಲಿ ದೇವರ ಪೇಟೆ ಸವಾರಿ ನಡೆಯುವುದರಿಂದ ತಡರಾತ್ರಿಯವರೆಗೂ ಜನಸಂದಣಿ ಕಂಡುಬರುತ್ತದೆ. ದೂರದೂರುಗಳಿಂದಲೂ ಭಕ್ತರು ಪೇಟೆ ಸವಾರಿಯನ್ನು ನೋಡಲು ಆಗಮಿಸುತ್ತಿದ್ದಾರೆ.
ಆಕರ್ಷಕ ಸ್ವಾಗತ
ದೇವರ ಪೇಟೆ ಸವಾರಿಯ ಸಂದರ್ಭದಲ್ಲಿ ದೇವರನ್ನು ಸ್ವಾಗತಿಸುವ ಆಕರ್ಷಕ ಕಮಾನುಗಳು ನಗರದೆಲ್ಲೆಡೆ ಕಂಡುಬರುತ್ತಿದೆ. ಸೀಮೆಯ ಜನತೆ ಪುತ್ತೂರು ಜಾತ್ರೆ ಉತ್ಸವದ ಸಂಭ್ರಮವನ್ನು ಅನುಭವಿಸುತ್ತಾರೆ. ಶ್ರೀ ದೇವರ ಪೇಟೆ ಸವಾರಿ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳು, ವ್ಯಾಪಾರಸ್ಥರು, ಮನೆಗಳನ್ನು ಹೊಂದಿರುವವರು ಎಲ್ಲಿಗೂ ತೆರಳದೆ ಶ್ರೀ ದೇವರ ಪೇಟೆ ಸವಾರಿ ದರ್ಶನಕ್ಕೆ ಕಾಯುತ್ತಾರೆ.
ಶ್ರೀ ದೇವರ ಬಲಿ ಉತ್ಸವ
ಪುತ್ತೂರು: ಶ್ರೀ ಮಹಾಲಿಂಗೇ ಶ್ವರ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಬುಧ ವಾರ ಬೆಳಗ್ಗೆ ಶ್ರೀ ದೇವರ ಬಲಿ ಉತ್ಸವ ಬೆಂಡೆ ಮೇಳದೊಂದಿಗೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರವಾಗಿ ಶ್ರೀ ದೇವರ ಪೇಟೆ ಸವಾರಿ ತೆರಳಿ ಕಟ್ಟೆ ಪೂಜೆಗಳನ್ನು ಸ್ವೀಕರಿಸಿ ರಾತ್ರಿ ದೇವಸ್ಥಾನಕ್ಕೆ ಮರಳಿತು.
ಇಂದಿನ ಪೇಟೆ ಸವಾರಿ
ಎ. 13ರಂದು ಮೇಷ ಸಂಕ್ರಮಣದ ದಿನ ಬೆಳಗ್ಗೆ ದೇವಸ್ಥಾನದಲ್ಲಿ ಶ್ರೀ ದೇವರ ಉತ್ಸವ ಬಲಿ, ರಾತ್ರಿ ಉತ್ಸವ ನಡೆಯಲಿದೆ. ಬಳಿಕ ಶ್ರೀ ದೇವರ ಪೇಟೆ ಸವಾರಿಯು ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರುಬೈಲುಗಳಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ರಾತ್ರಿ ದೇವಸ್ಥಾನಕ್ಕೆ ಹಿಂದಿರುಗಲಿದೆ.
ನಗರದ ಮಹಮ್ಮಾಯಿ ದೇವಸ್ಥಾನ ರಸ್ತೆಯಲ್ಲಿ ಅಳವಡಿಸಿರುವ ಆಕರ್ಷಕ ಸ್ವಾಗತ ಕಮಾನು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.