ಪುತ್ತೂರು-ಸುಳ್ಯ :  ಬಿಜೆಪಿಯದ್ದೇ ಪಾರುಪತ್ಯ, ಕಾಂಗ್ರೆಸ್‌ ನೇಪಥ್ಯ


Team Udayavani, Apr 28, 2017, 4:18 PM IST

2704kpk2.jpg

ಪುತ್ತೂರು/ಸುಳ್ಯ: ಪುತ್ತೂರು ಮತ್ತು ಸುಳ್ಯ ತಾಲೂಕು ಕೃಷಿ ಉತ್ಪನ್ನ ಮಾರು ಕಟ್ಟೆ (ಎಪಿಎಂಸಿ)ಗೆ ನಡೆದ ಚುನಾವಣಾ ಫ‌ಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಎರಡೂ ಕಡೆ ಬಿಜೆಪಿ ದಿಗ್ವಿಜಯ ಸಾಧಿಸಿ ಆಡಳಿತ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಪುತ್ತೂರಿನಲ್ಲಿ 13 ಕ್ಷೇತ್ರಗಳ ಪೈಕಿ ಬಿಜೆಪಿ 11 ಸ್ಥಾನಗಳನ್ನು ಗೆದ್ದರೆ, ಸುಳ್ಯದಲ್ಲಿ 13 ಸ್ಥಾನಗಳ ಪೈಕಿ 12 ನ್ನು ಬಿಜೆಪಿ ಗೆದ್ದಿದೆ. ಪುತ್ತೂರಿನಲ್ಲಿ ಕಾಂಗ್ರೆಸ್‌ ಕೇವಲ ಎರಡು ಸ್ಥಾನಕ್ಕೆ ತೃಪ್ತಿ ಪಟ್ಟರೆ, ಸುಳ್ಯದಲ್ಲಿ ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಸುಳ್ಯದಲ್ಲಿ ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ.

ಪುತ್ತೂರು ವಿವರ
ಒಟ್ಟು 13 ಸ್ಥಾನಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣಕಮಾರ್‌ ರೈ ಅವಿರೋಧ ಆಯ್ಕೆಯಾಗಿದ್ದರು. ಉಳಿದ 12 ಸ್ಥಾನಗಳಿಗೆ ಗುರುವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ನಡೆಯಿತು. ಇದರಲ್ಲಿ 10 ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾದರೆ, ಉಳಿದ 2 ಸ್ಥಾನ ಕಾಂಗ್ರೆಸ್‌ನ ವಶವಾಗಿದೆ.

ಕಾಂಗ್ರೆಸ್‌ ನಷ್ಟ, ಬಿಜೆಪಿಗೆ ಲಾಭ
ಕಳೆದ ಅವಧಿಯಲ್ಲಿ ಎಪಿಎಂಸಿಯಲ್ಲಿ ಬಿಜೆಪಿ ಆಡಳಿತ ಹೊಂದಿತ್ತು. ಬಿಜೆಪಿ 10 ಮತ್ತು ಕಾಂಗ್ರೆಸ್‌ 3 ಚುನಾಯಿತ ಸದಸ್ಯರನ್ನು ಹೊಂದಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತ ಒಂದು ಹೆಚ್ಚು ಸ್ಥಾನ ಪಡೆದು ಅಧಿಕಾರ ಉಳಿಸಿಕೊಂಡಿದೆ. 

ಬಿಜೆಪಿ ನಾಲ್ಕನೇ ಮೂರು ಭಾಗಕ್ಕಿಂತ ಅಧಿಕ ಸ್ಥಾನ ಗಳಿಸಿ ಮೂರನೇ ಬಾರಿ ಅಧಿಕಾರ ಗಿಟ್ಟಿಸಿದೆ. ಇದು ಹ್ಯಾಟ್ರಿಕ್‌ ಗೆಲುವು. ಕಳೆದ ಬಾರಿ ಬಿಜೆಪಿ ವಶದಲ್ಲಿದ್ದ ಕೋಡಿಂಬಾಡಿ ಕ್ಷೇತ್ರ ಕೈ ಪಾಲಾದರೆ, ಕಾಂಗ್ರೆಸ್‌ ವಶದಲ್ಲಿದ್ದ ನೆಟ್ಟಣಿಗೆ ಮುಟ್ನೂ ರು, ನೆಲ್ಯಾಡಿ ಕ್ಷೇತ್ರ ಬಿಜೆಪಿ ಪಾಲಾಗಿದೆ.

ವಿಜಯೋತ್ಸವ
ಮತ ಕೇಂದ್ರದ ಹೊರಭಾಗದಲ್ಲಿ ನೆರೆದಿದ್ದ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಅಭ್ಯರ್ಥಿಗಳ ಗೆಲುವಿನ ವಿಜಯೋತ್ಸವ ಆಚರಿಸಿದರು. ಉಭಯ ಪಕ್ಷಗಳ ಕಾರ್ಯಕರ್ತರು ಹೂವಿನ ಹಾರ ಹಾಕಿ, ಸಿಹಿ ತಿಂಡಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಕಂಡು ಬಂತು. 

ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಸಂಭ್ರ ಮಾಚರಣೆ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್‌ ಜೈನ್‌, ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಮುಖಂಡರಾದ ಅರುಣ್‌ ಕುಮಾರ್‌ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ, ರಾಜೇಶ್‌ ಬನ್ನೂರು, ಗೋಪಾಲಕೃಷ್ಣ ಹೇರಳೆ ಮೊದಲಾದವರು ಉಪಸ್ಥಿತರಿದ್ದರು. ಕಾಂಗ್ರೆಸ್‌ ಅಭ್ಯರ್ಥಿಗಳ ವಿಜಯೋತ್ಸವದ ಸಂದರ್ಭ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಫಝÉಲ್‌ ರಹೀಂ, ನಿರಂಜನ ರೈ ಮಠಂತಬೆಟ್ಟು, ಉಲ್ಲಾಸ್‌ ಕೋಟ್ಯಾನ್‌, ಈಶ್ವರ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ಕಡಬ, ಮರ್ದಾಳ, ಕಾವು ಮತ್ತಿತರ ಪ್ರದೇಶಗಳಲ್ಲೂ ವಿಜಯೋತ್ಸವ ಆಚರಿಸಲಾಯಿತು.
 
ಸುಳ್ಯ ವಿವರ

ಒಟ್ಟು 13 ಸ್ಥಾನಗಳ ಪೈಕಿ 11 ಕ್ಷೇತ್ರಗಳಿಗೆ ಜರಗಿದ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಸ್ಥಾನಗಳನ್ನು ಪಡೆಯುವುದರೊಂದಿಗೆ ಇತಿಹಾಸ ನಿರ್ಮಿಸಿದೆ. ಕೃಷಿಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ವರ್ತಕರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದರು. ಒಟ್ಟಿನಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿದೆ.  ಎಪಿಎಂಸಿ ಆವರಣದಿಂದ ಬಿಜೆಪಿ ಕಚೇರಿಯವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಜಿ.ಪಂ. ಸದಸ್ಯ ಎಸ್‌.ಎನ್‌. ಮನ್ಮಥ ಹರ್ಷ ವ್ಯಕ್ತಪಡಿಸಿ, ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿ ಸಿರುವುದು ಇತಿಹಾಸ ಎಂದರು.

ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಎ.ವಿ. ತೀರ್ಥರಾಮ,ವಿಜೇತ ಅಭ್ಯರ್ಥಿ ಅಡ್ಡಂತಡ್ಕ ದೇರಣ್ಣ ಗೌಡ ಅವರು ಮಾತನಾಡಿದರು. ಇನ್ನೋರ್ವ ವಿಜೇತ ಅಭ್ಯರ್ಥಿ ಜಯಪ್ರಕಾಶ್‌ ಕುಂಚಡ್ಕ ಹರ್ಷ ವ್ಯಕ್ತಪಡಿಸಿದರು.ಜಿ.ಪಂ. ಸದಸ್ಯರಾದ ಪುಷ್ಪಾವತಿ ಬಾಳಿಲ, ಹರೀಶ ಕಂಜಿಪಿಲಿ, ಆಶಾತಿಮ್ಮಪ್ಪ , ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಬಿಜೆಪಿ ವಕ್ತಾರ ಉಮೇಶ್‌ ವಾಗ್ಲೆ, ಪ್ರಕಾಶ್‌ ಹೆಗ್ಡೆ, ನವೀನ್‌ ಕುಮಾರ್‌ ಮೇನಾಲ, ಹರೀಶ್‌ ರೈ, ಭಾಗೀರಥೀ ಮುರುಳ್ಯ, ಕರುಣಾಕರ , ಪಕ್ಷದ ನ.ಪಂ., ತಾ.ಪಂ. ಸದಸ್ಯರು, ವಿಜೇತ ಎಪಿಎಂಸಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

3 ಮತದ ಸೋಲು..!
ಈ ಬಾರಿ ಅತ್ಯಂತ ಪೈಪೋಟಿ ಕಣವಾಗಿ ಮಾರ್ಪಟ್ಟಿದ್ದು ನೆಟ್ಟಣಿಗೆ ಮು ಟ್ನೂರು ಕ್ಷೇತ್ರ. ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ತೀರ್ಥಾನಂದ ದುಗ್ಗಳ 180 ಕ್ಕೂ ಅಧಿಕ ಮತದ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆ ಕ್ಷಣದಲ್ಲಿ ಅಂತರ ಇಳಿಮುಖಗೊಂಡು, ಕಾಂಗ್ರೆಸ್‌ ಅಭ್ಯರ್ಥಿ ಮಹೇಶ್‌ ರೈ ಅಂಕೋತ್ತಿಮಾರ್‌ ಅವರು ಕೇವಲ 3 ಮತಗಳ ಅಂತರದಿಂದ ಪರಾಜಿತರಾದರು. ಜೆಡಿಎಸ್‌ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದ ಅಶ್ರಫ್‌ ಕೊಟ್ಯಾಡಿ ಕಣದಿಂದ ಹಿಂದೆ ಸರಿದಿದ್ದರೂ 19 ಮತ ಪಡೆದಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಿರಬಹುದು.  ತಿರಸ್ಕೃತ ಮತಗಳ ಪರಿಣಾಮ ಕಡಿಮೆ. 

ಸುಳ್ಯ : ಗರಿಷ್ಠ ಅಂತರ
ಅರಂತೋಡು ಕ್ಷೇತ್ರದಲ್ಲಿ 1028 ಮತ ಗರಿಷ್ಠ ಗೆಲುವಿನ ಅಂತರವಾಗಿದ್ದರೆ, ಬೆಳ್ಳಾರೆ ಕ್ಷೇತ್ರದಲ್ಲಿ ಕನಿಷ್ಠ ಗೆಲುವಿನ ಅಂತರ 33 ಮತಗಳು. ಸಹಕಾರಿ ಕ್ಷೇತ್ರದಲ್ಲಿ ಯಾವುದೇ ಮತ ಅಸಿಂಧುಗೊಂಡಿಲ್ಲ. ಬೆಳ್ಳಾರೆ ಕ್ಷೇತ್ರದಲ್ಲಿ ಗರಿಷ್ಠ 18 ಮತ ಅಸಿಂಧುಗೊಂಡಿವೆ.

ಮತ ಎಣಿಕೆ ಕೇಂದ್ರದೆದುರು ಸಂಭ್ರಮದಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಅಧ್ಯಕ್ಷರಿಗೆ ಆಕ್ಷೇಪಾರ್ಹ ಘೋಷಣೆ ಕೂಗಿದಾಗ  ಸುಳ್ಯ ಎಸ್‌. ಐ. ಚಂದ್ರಶೇಖರ್‌ ಆಕ್ಷೇಪಿಸಿದರು. ಅದು ಬಿಜೆಪಿ ನಾಯಕರ ಮತ್ತು ಎಸ್‌.ಐ. ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು.

ಸೋತ -ಗೆದ್ದ ಪ್ರಮುಖರು
ಗೆದ್ದ ಪ್ರಮುಖರು
: ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು (ಬಿಜೆಪಿ), ತಾ.ಪಂ.ಮಾಜಿ ಅಧ್ಯಕ್ಷೆ ಪುಲಸ್ತಾÂ ರೈ (ಬಿಜೆಪಿ), ಜಿ.ಪಂ.ಮಾಜಿ ಸದಸ್ಯೆ ತ್ರಿವೇಣಿ ಕರುಣಾಕರ ಪೆರೊÌàಡಿ (ಬಿಜೆಪಿ), ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್‌ ಮೆದು ( ಬಿಜೆಪಿ), ಎಪಿಎಂಸಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್‌ ( ಬಿಜೆಪಿ).

ಸೋತ ಪ್ರಮುಖರು : ತಾ.ಪಂ. ಸದಸ್ಯೆ ಉಷಾ ಅಂಚನ್‌ (ಕಾಂಗ್ರೆಸ್‌), ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಕ್ಷಿ (ಕಾಂಗ್ರೆಸ್‌), ಪ್ರಕಾಶ್ಚಂದ್ರ ಆಳ್ವ ಮುಂಡೇಲು ( ಕಾಂಗ್ರೆಸ್‌), ಮಹೇಶ್‌ ರೈ ಅಂಕೋತ್ತಿಮಾರ್‌ (ಕಾಂಗ್ರೆಸ್‌).

ಫಲಿತಾಂಶ ಘೋಷಣೆ ವಿಳಂಬ
ಎಣಿಕೆ ಕೇಂದ್ರದಲ್ಲಿ ಬೆಳಗ್ಗೆ 8 ಕ್ಕೆ ಎಣಿಕೆ ಕಾರ್ಯ ಆರಂಭಗೊಂಡರೂ, ಸ್ಪಷ್ಟ ಫಲಿತಾಂಶ ಪ್ರಕಟವಾಗುವಾಗ ಮಧ್ಯಾಹ್ನ 1 ಗಂಟೆ ದಾಟಿತ್ತು. ವಿಜಯಿ ಅಭ್ಯರ್ಥಿಗಳು ಪ್ರಮಾಣಪತ್ರ ಪಡೆದು ಕೇಂದ್ರದಿಂದ ಹೊರ ಬಂದಾಗ 2 ಗಂಟೆ. ಆರಂಭದಲ್ಲಿ ಮತ ಪತ್ರಗಳನ್ನು ವಿಭಜಿಸಿ, ಎಣಿಕೆ ನಡೆಸಿದ ಪರಿಣಾಮ ಫಲಿತಾಂಶ  ವಿಳಂಬಕ್ಕೆ ಕಾರಣ ಎನ್ನಲಾಗಿದೆ. 

ಟಾಪ್ ನ್ಯೂಸ್

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.