ಒಂದೂವರೆ ತಿಂಗಳಲ್ಲಿ ಸಿದ್ಧವಾಗಲಿದೆ ಪುರಭವನ!
Team Udayavani, Jan 24, 2019, 5:27 AM IST
ಪುತ್ತೂರು: ನವೀಕರಣ ಗೊಳ್ಳುತ್ತಿರುವ ಪುತ್ತೂರು ಪುರಭವನ ಮುಂದಿನ ಒಂದೂವರೆ ತಿಂಗಳ ಒಳಗಾಗಿ ಲೋಕಾರ್ಪಣೆಗೊಳ್ಳಲಿದೆ.
ಇಪ್ಪತ್ತೈದು ವರ್ಷಗಳ ಹಿಂದೆ ಈ ಪುರಭವನವನ್ನು ನಿರ್ಮಿಸಲಾಗಿತ್ತು. ಸಾಮಾಜಿಕ ಧುರೀಣರು, ಸಂಘ – ಸಂಸ್ಥೆಗಳ ಸಹಕಾರ ಪಡೆದು ಕೊಂಡು ಪುರಭವನವನ್ನು ನಿರ್ಮಿಸಲಾಗಿತ್ತು. ಇತ್ತೀಚೆಗೆ ಪುತ್ತೂರು ಪುರಭವನ ಕಳಪೆಯಾಗಿ ಕಾಣುತ್ತಿದ್ದು, ನವೀಕರಣ ಮಾಡುವ ಅನಿವಾರ್ಯತೆ ಎದುರಾ ಗಿತ್ತು. ಈ ಹಿನ್ನೆಲೆಯಲ್ಲಿ 50 ಲಕ್ಷ ರೂ. ಅನುದಾನ ಬಳಸಿಕೊಂಡು ಕಾಮ ಗಾರಿ ಆರಂಭ ಮಾಡಲಾಗಿತ್ತು. ಮುಂದಿನ ಹಂತದಲ್ಲಿ ಈ ಅನುದಾನ ಸಾಕಾಗದು ಎಂದು ನಗರಸಭೆ ನಿಧಿಯಿಂದ ಅನುದಾನ ಇಡಲಾಗಿದೆ. ಒಟ್ಟು ಕಾಮಗಾರಿಗೆ 75 ಲಕ್ಷ ರೂ. ವೆಚ್ಚ ಆಗಬಹುದು ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ.
ಜಯಂತಿ ಬಲ್ನಾಡ್ ಅಧ್ಯಕ್ಷತೆಯ ಆಡಳಿತ ಅವಧಿಯಲ್ಲಿ ಪುರಭವನದ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಪ್ರಸ್ತುತ ಪುರಭವನದಲ್ಲಿ ಆಸನ ವ್ಯವಸ್ಥೆ ಅಳವಡಿಸುವ ಕೆಲಸ ಭರದಿಂದ ಸಾಗುತ್ತಿದ್ದು, ಪೈಂಟಿಂಗ್ ಕೆಲಸವೂ ಪ್ರಗತಿಯಲ್ಲಿದೆ. ವೇದಿಕೆ ವಿನ್ಯಾಸ ಮತ್ತು ಸಭಾಂಗಣದ ಒಳಗಿನ ಗೋಡೆಗಳಿಗೆ ವಾಲ್ ಗ್ಲೆ„ಡಿಂಗ್ ಕೆಲಸ ಇನ್ನಷ್ಟೇ ನಡೆಯಬೇಕಿದೆ.
ಇದೀಗ ಇಡೀ ಕಟ್ಟಡಕ್ಕೆ ಬಣ್ಣ ಬಳಿಯಲಾಗಿದ್ದು, ಕಿಟಕಿ, ಬಾಗಿಲು ಬದಲಾಯಿಸಲಾಗಿದೆ. ಒಳಾಂಗಣ ವಿನ್ಯಾಸ ಪೂರ್ತಿ ಬದಲಾಯಿ ಸಲಾಗಿದೆ. ವೇದಿಕೆ ವಿನ್ಯಾಸ ಸುಂದರ ಗೊಳಿಸ ಲಾಗುತ್ತಿದೆ. ಇನ್ನೂ ಒಂದು ತಿಂಗಳ ಕೆಲಸ ಬಾಕಿ ಇದೆ. ಮಾರ್ಚ್ ತಿಂಗಳಲ್ಲಿ ಸಿದ್ಧಗೊಳ್ಳುವ ನಿರೀಕ್ಷೆ ಇದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದ ಪುರಭವನ ಕೆಲ ಸಮಯಗಳಿಂದ ಕಾರ್ಯಕ್ರಮಕ್ಕೆ ಸಿಗುತ್ತಿಲ್ಲ. ಆದಷ್ಟು ಶೀಘ್ರ ಪುರಭವನ ಸಾರ್ವಜನಿಕ ಮುಕ್ತವಾದರೆ, ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಣವಾಗಲಿದೆ.
ಸಭಾಂಗಣಕ್ಕೆ ಅಳವಡಿಸಲಾದ ಸುಂದರ ಆಸನಗಳೇ ಈಗ ತಲೆ ನೋವಾಗಿ ಪರಿಣಮಿಸಿದೆ. ಸೀಟುಗಳು ಎತ್ತರವಾಗಿದ್ದು, ಸುಖಾಸೀನವಾಗಿವೆ. ಸೀಟು ಎತ್ತರವಾಗಿ ಇರುವುದರಿಂದ ಹಿಂದಿನ ಸಾಲಿನವರಿಗೆ ವೇದಿಕೆ ಅಡ್ಡವಾಗಲಿದೆ. ಅದರಲ್ಲೂ ಮಕ್ಕಳು ಕುಳಿತುಕೊಂಡರೆ, ಏನೇನೂ ಕಾಣದು. ಇದನ್ನು ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಧನಾತ್ಮಕವಾಗಿ ಸ್ಪಂದಿಸಿದ ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದರು. ನಗರಸಭೆ ಸದಸ್ಯ ಜೀವಂಧರ ಜೈನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.