ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಶೀಘ್ರ ಸ್ವಂತ ಕಟ್ಟಡ
Team Udayavani, Aug 30, 2018, 10:04 AM IST
ಪುತ್ತೂರು: ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ದ.ಕ. ಜಿಲ್ಲೆಯ ಎರಡನೇ ಮಹಿಳಾ ಪೊಲೀಸ್ ಠಾಣೆಗೆ ಶೀಘ್ರ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಣೆಯ ಭಾಗ್ಯ ಲಭ್ಯವಾಗಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡ ಪುತ್ತೂರು ಪೊಲೀಸ್ ಠಾಣೆಯ ಹಳೆಯ ಕಟ್ಟಡವನ್ನು ಈ ನಿಟ್ಟಿನಲ್ಲಿ ಪುನರ್ ನವೀಕರಣ ಮಾಡಲಾಗುತ್ತಿದೆ. ನಗರದ ಮುಖ್ಯ ರಸ್ತೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಕೆರೆ ಸನಿಹದಲ್ಲಿ, ದೇವಾಲಯದ ದ್ವಾರದ ಪಕ್ಕದಲ್ಲೇ ಇರುವ ಹಳೆ ಠಾಣೆ ಕಟ್ಟಡವನ್ನು ನವೀಕರಿಸುವ ಕಾರ್ಯ ಒಂದು ತಿಂಗಳಿನಿಂದ ನಡೆಯುತ್ತಿದೆ. ನಿರ್ಮಿತಿ ಕೇಂದ್ರವು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಮಳೆಗಾಲ ಮುಗಿಯುವ ಹೊತ್ತಿಗೆ ಹಳೆ ಕಟ್ಟಡ ಹೊಸ ರೂಪ ಪಡೆಯಲಿದೆ.
ಮಹಿಳಾ ಠಾಣೆಯು ಪುತ್ತೂರಿಗೆ ಮಂಜೂರುಗೊಂಡು 2017ರ ಮಾ. 11ರಿಂದ ಕಾರ್ಯ ನಿರ್ವಹಣೆ ಆರಂಭಿಸಿತ್ತು. ಸ್ವಂತ ಕಟ್ಟಡದ ಕೊರತೆ ಇರುವ ಕಾರಣ ಸಂಚಾರ ಠಾಣೆಯ ಹೊಸ ಕಟ್ಟಡದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಅದರೆ ಇಲ್ಲಿ ಶಾಶ್ವತ ಸ್ಥಳಾವಕಾಶ ನೀಡಲು ಸಾಧ್ಯವಿಲ್ಲದ ಕಾರಣ ಪರ್ಯಾಯ ಹುಡುಕಾಟ ಆರಂಭವಾಗಿತ್ತು. ಆಗ ಹಳೆ ಪೊಲೀಸ್ ಸ್ಟೇಷನ್ ಕಟ್ಟಡವನ್ನು ನವೀಕರಿಸಿ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು.
ಮತ್ತೆ ಠಾಣೆಯೇ!
ಸ್ವಾತಂತ್ರ್ಯ ಪೂರ್ವದ ಈ ಕಟ್ಟಡದಲ್ಲಿ ಮೊದಲು ಪುತ್ತೂರು ನಗರ ಪೊಲೀಸ್ ಠಾಣೆ ಕಾರ್ಯ ನಿರ್ವಹಿಸುತ್ತಿತ್ತು. 2009ರ ಡಿ.25ರಂದು ಠಾಣೆಯ ಹೊಸ ಕಟ್ಟಡ ಉದ್ಘಾಟನೆಗೊಂಡಿದ್ದು, ಅನಂತರ ಹಳೆಯ ಕಟ್ಟಡ ಖಾಲಿಯಾಗಿತ್ತು. ಇದಾದ ಕೆಲವೇ ಸಮಯದಲ್ಲಿ ಪುತ್ತೂರಿಗೆ ಸಂಚಾರ ಠಾಣೆ ಮಂಜೂರಾಗಿದ್ದು, ಅದು ಈ ಹಳೆ ಕಟ್ಟಡದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. 2015ರ ಸೆ. 7ರಂದು ಸಂಚಾರ ಠಾಣೆಯ ನೂತನ ಕಟ್ಟಡ ಉದ್ಘಾಟನೆಗೊಂಡ ಕಾರಣ ಮತ್ತೆ ಹಳೆಯ ಕಟ್ಟಡ ಖಾಲಿ ಬಿತ್ತು.
ಯಾಕೆ ತಡವಾಯಿತು
ಮೊದಲ ಆರು ತಿಂಗಳ ಕಾಲ ಸಂಚಾರ ಠಾಣೆಯ ಕಡತಗಳು ಇದೇ ಕಟ್ಟಡದಲ್ಲಿದ್ದರೂ 2016ರ ಆರಂಭದಲ್ಲಿ ಸಂಪೂರ್ಣ ಸ್ಥಳಾಂತರಗೊಂಡಿತ್ತು. ಅಲ್ಲಿಂದೀಚೆಗೆ ಹಳೆ ಕಟ್ಟಡ ಖಾಲಿ ಬಿದ್ದಿತ್ತು. 2017ರಲ್ಲಿ ಮಹಿಳಾ ಠಾಣೆ ಆರಂಭಗೊಂಡಾಗ ಇದೇ ಕಟ್ಟಡದಲ್ಲಿ ಕೆಲಸ ಮಾಡುವುದೆಂದು ನಿರ್ಧರಿಸಲಾಯಿತಾದರೂ ಕಟ್ಟಡ ನವೀಕರಣ ಅಗತ್ಯವಿರುವ ಕಾರಣ ಮುಂದೂಡಲಾಗಿತ್ತು.
19.20 ಲಕ್ಷ ರೂ. ಯೋಜನೆ
ಹಳೆಯ ಕಟ್ಟಡ ನವೀಕರಣಕ್ಕೆ ರಾಜ್ಯ ಸರಕಾರ 19.20 ಲಕ್ಷ ರೂ. ಮಂಜೂರು ಮಾಡಿದೆ. ನಿರ್ಮಿತಿ ಕೇಂದ್ರದವರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಹಳೆ ಕಟ್ಟದ ಹೆಂಚಿನ ಮಾಡು ಹೊಂದಿದ್ದು, ಅದನ್ನು ತೆಗೆದು ಎತ್ತರಿಸಿ ಮತ್ತೆ ಹಂಚು ಅಳವಡಿಸಲಾಗಿದೆ. ಒಳಭಾಗದಲ್ಲಿ ಕೆಲವೊಂದು ವಿನ್ಯಾಸಗಳನ್ನು ಬದಲಾಯಿಸಲಾಗುತ್ತಿದೆ. ಪುನರ್ ನವೀಕರಣದ ಕಾಮಗಾರಿ ಹೆಚ್ಚು ಇರುವುದರಿಂದ ಇನ್ನೂ ಮೂರು ತಿಂಗಳು ಹಿಡಿಯಬಹುದು ಎಂದು ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರು ತಿಳಿಸಿದ್ದಾರೆ.
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.