ಪುತ್ತೂರು: ಸತತ 3 ಬಾರಿ ಮಹಿಳಾ ಮೇಲುಗೈ 


Team Udayavani, May 2, 2018, 12:29 PM IST

2-May-8.jpg

ಮಂಗಳೂರು: ಕರಾವಳಿ ಮತ್ತು ಮಲೆನಾಡಿನ ನಡುವೆ, ಎರಡೂ ಪ್ರದೇಶಗಳ ವೈಶಿಷ್ಟ್ಯಗಳನ್ನು ತನ್ನ ಮಡಿಲಲ್ಲಿ ತುಂಬಿಕೊಂಡಿದೆ ಪುತ್ತೂರು ವಿಧಾನಸಭಾ ಕ್ಷೇತ್ರ. ಪುತ್ತೂರಿನ ಚುನಾವಣಾ ಕಣವೆಂದರೆ ಅದು ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ಗಮನ ಸೆಳೆಯುವಷ್ಟು ಪ್ರಮುಖವಾಗಿರುತ್ತದೆ.

ತೆಂಗು ಕಂಗು ಬಾಳೆ ಗೇರು ಭತ್ತ ಕೋಕೋ ಬೆಳೆಗಳ ಸಮೃದ್ಧಿ. ಅಡಿಕೆ ಕೃಷಿಯೇ ಪ್ರಧಾನ. ಈ ಮೂಲಕ ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ಇಲ್ಲಿಂದ ದೊರೆಯುತ್ತದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪುರಾಣ-ಇತಿಹಾಸ ಪ್ರಸಿದ್ಧಿ. ಸರ್ವ ಧರ್ಮ ಸಮನ್ವಯ ಪ್ರದೇಶ. ಶಿಕ್ಷಣ ಕ್ಷೇತ್ರದಲ್ಲಿಯೂ ಸಾಧನೆ. ಪ್ರತಿಷ್ಠಿತ ಕ್ಯಾಂಪ್ಕೋ ಚಾಕ್ಲೇಟ್‌ ಫ್ಯಾಕ್ಟರಿಯೂ ಇಲ್ಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೂ ವ್ಯಾಪಕ ಅವಕಾಶಗಳಿವೆ.

80ರ ದಶಕದ ಅವಿಭಜಿತ ಜಿಲ್ಲೆಯ ಅನೇಕ ರಾಜಕೀಯ ಸ್ಥಿತ್ಯಂತರಗಳು ಪುತ್ತೂರು ಕ್ಷೇತ್ರವನ್ನು ಕೂಡ ಪ್ರಭಾವಿಸಿದವು. ಪುತ್ತೂರಿನ ಶಾಸಕರಾಗಿದ್ದ ವಿನಯ ಕುಮಾರ್‌ ಸೊರಕೆ (ಕಾಂಗ್ರೆಸ್‌) ಮುಂದೆ ಸಂಸದರಾಗಿದ್ದರು. ಅಂತೆಯೇ ಡಿ. ವಿ. ಸದಾನಂದ ಗೌಡ (ಬಿಜೆಪಿ) ಅವರು ಮುಂದೆ ಮುಖ್ಯಮಂತ್ರಿಯಾದರು; ಸಂಸದರಾಗಿ ಈಗ ಕೇಂದ್ರ ಸಚಿವರು. ಹಾಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿದ್ದಾರೆ. ಪುತ್ತೂರು ಕ್ಷೇತ್ರವೆಂದಾಗ ಉರಿಮಜಲು ರಾಮ ಭಟ್‌ ಅವರ ಹೆಸರು ಉಲ್ಲೇಖವಾಗುತ್ತದೆ: 1957ರಿಂದ 1985ರವರೆಗೆ ಅವರು 7 ಬಾರಿ; ಲೋಕಸಭೆಗೆ 2 ಬಾರಿ ಸ್ಪರ್ಧಿಸಿದವರು.

ಬಿ. ವಿಠಲದಾಸ ಶೆಟ್ಟಿ, ಎ. ಶಂಕರ ಆಳ್ವ ಅವರು ಪುತ್ತೂರಿನಿಂದ ಗೆದ್ದು, ಸೊರಕೆ ಅವರು ಕಾಪುವಿನಿಂದ ಗೆದ್ದು ಸಚಿವರಾದವರು. 1952ರಲ್ಲಿ ಆಗಿನ ಸುಳ್ಯ ಸಹಿತ ಇದು ದ್ವಿಸದಸ್ಯ (ಎರಡು ಸ್ಥಾನ) ಕ್ಷೇತ್ರವಾಗಿತ್ತು. 1957ರಲ್ಲೂ ಇದೇ ಸ್ವರೂಪವಿದ್ದು 1962ರಲ್ಲಿ ಪುತ್ತೂರು ಕ್ಷೇತ್ರ ಪ್ರತ್ಯೇಕವಾಯಿತು.

ಈವರೆಗೆ ಇಲ್ಲಿ ಕೂಜುಗೋಡು ವೆಂಕಟರಮಣ ಗೌಡರು 3 ಬಾರಿ, ಡಿ.ವಿ. ಸದಾನಂದ ಗೌಡ, ವಿನಯ ಕುಮಾರ್‌ ಸೊರಕೆ, ಶಕುಂತಳಾ ಶೆಟ್ಟಿ ತಲಾ 2 ಬಾರಿ; ಕೆ. ಈಶ್ವರ, ಬಿ. ವಿಠಲದಾಸ ಶೆಟ್ಟಿ, ಕೆ. ರಾಮ ಭಟ್‌, ಸುಬ್ಬಯ್ಯ ನಾಯ್ಕ, ಮಲ್ಲಿಕಾ ಪ್ರಸಾದ್‌ ತಲಾ ಒಂದು ಬಾರಿ ಜಯಿಸಿದ್ದಾರೆ. ಈ ಬಾರಿ ಪುತ್ತೂರಿನಲ್ಲಿ ಸ್ಪರ್ಧಾ ಕಣದಲ್ಲಿರುವವರು: ಶಕುಂತಳಾ ಶೆಟ್ಟಿ (ಕಾಂ.), ಸಂಜೀವ ಮಠಂದೂರ್‌ (ಬಿಜೆಪಿ), ಐ.ಸಿ. ಕೈಲಾಸ್‌ (ಜೆಡಿಎಸ್‌), ಶೇಖರ (ಪ್ರ.ಪ. ಪಕ್ಷ), ಮಜೀದ್‌ (ಜೆಡಿಯು), ಸೇಷಪ್ಪ ರಾವ್‌ (ಸಾ. ಜನತಾಪಕ್ಷ), ಶಬನಾ (ಎಂಇಪಿ), ಅಮರನಾಥ ಬಪ್ಪಳಿಗೆ, ಅಬ್ದುಲ್‌ ಬಶೀರ್‌, ಬುಡಿಯಾರ್‌, ಬಿ.ಎಸ್‌. ಚೇತನ್‌ ಕುಮಾರ್‌, ವಿದ್ಯಾಶ್ರೀ (ಪಕ್ಷೇತರರು). 2004ರಲ್ಲಿ ಇಲ್ಲಿ 1,62,895 ಮತದಾರರಿದ್ದರು. ಈ ಬಾರಿ 2,01,884 ಮತದಾರರಿದ್ದಾರೆ.

ಅಂದ ಹಾಗೆ …
ಪುತ್ತೂರು ಕ್ಷೇತ್ರದಲ್ಲಿ 2004ರಿಂದ ಈವರೆಗೆ ಮಹಿಳಾ ಪ್ರಾತಿನಿಧ್ಯ! 2004ರಲ್ಲಿ ಬಿಜೆಪಿಯಿಂದ ಶಕುಂತಳಾ ಶೆಟ್ಟಿ; 2008ರಲ್ಲಿ ಬಿಜೆಪಿಯಿಂದ ಮಲ್ಲಿಕಾ ಪ್ರಸಾದ್‌ ಜಯಿಸಿದರೆ 2013ರಲ್ಲಿ ಶಕುಂತಳಾ ಶೆಟ್ಟಿ ಕಾಂಗ್ರೆಸ್‌ನಿಂದ ಗೆದ್ದರು. ಶೆಟ್ಟಿ ಈ ಬಾರಿ ಸತತ 4ನೆಯ ಬಾರಿ ಕಣದಲ್ಲಿದ್ದಾರೆ. 2008ರಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇಲ್ಲಿ ಪುರುಷರಿಗಿಂತ 643 ಹೆಚ್ಚು ಮಹಿಳಾ ಮತದಾರರಿದ್ದಾರೆ (1,01,262).

ಮನೋಹರ ಪ್ರಸಾದ್‌

ಟಾಪ್ ನ್ಯೂಸ್

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.