ಅಣೆಕಟ್ಟಿಗೆ ಹಲಗೆ ಅಳವಡಿಕೆ: ವಾರದೊಳಗೆ ಪೂರ್ಣ

Team Udayavani, Jan 24, 2019, 4:33 AM IST

24-january-2.jpg

ಪುತ್ತೂರು: ಬೇಸಗೆಯಲ್ಲಿ ಎದುರಾಗುವ ನೀರಿನ ಬವಣೆ ನೀಗಿಸಲು ಪುತ್ತೂರು ನಗರಸಭೆ ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ನೆಕ್ಕಿಲಾಡಿಯಲ್ಲಿರುವ ಕುಮಾರಧಾರಾ ನದಿಯ ಅಣೆಕಟ್ಟಿಗೆ ಹಲಗೆ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, 5-6 ದಿನದಲ್ಲಿ ಪೂರ್ಣಗೊಳ್ಳಲಿದೆ.

ಸಾಮಾನ್ಯವಾಗಿ ಫೆಬ್ರವರಿಯಿಂದ ಕುಡಿಯುವ ನೀರಿನ ಕೊರತೆ ಕಾಡಲಾರಂಭಿಸುತ್ತದೆ. ಇದನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಲಿದ್ದಾರೆ. ಮೊದಲ ಹಂತವಾಗಿ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ.

6 ಸ್ತರ 396 ಹಲಗೆ
ಉಪ್ಪಿನಂಗಡಿಯಲ್ಲಿ ನೇತ್ರಾವತಿ ಜತೆ ಸಂಗಮವಾಗುವ ಸ್ಥಳಕ್ಕಿಂತ ಸ್ವಲ್ಪ ಹಿಂದೆಯೇ ಕುಮಾರಧಾರಾ ನದಿಗೆ ಅಣೆಕಟ್ಟು ನಿರ್ಮಿಸಲಾಗಿದೆ. 197 ಮೀ. ಉದ್ದ, 3 ಮೀ. ಎತ್ತರ, 4.5 ಮೀ. ಅಗಲ ಅಣೆಕಟ್ಟಿನ ವಿಸ್ತೀರ್ಣ. ಇದರಲ್ಲಿ ಸಂಗ್ರಹವಾಗುವ 630 ಮಿಲಿಯನ್‌ ಕ್ಯುಬಿಕ್‌ ಮೀ. ನೀರು 4 ತಿಂಗಳಿಗೆ ಸಾಕು. ಅಂದರೆ ದಿನಕ್ಕೆ 6.5 ಮಿಲಿಯನ್‌ ಲೀ. ನೀರು ಬೇಕು. ಒಂದು ಹಲಗೆ 6 ಅಡಿ ಅಗಲವಿದೆ. ಒಂದು ಸ್ಥರದಲ್ಲಿ 66 ಹಲಗೆಗಳಂತೆ 6 ಸ್ತರದಲ್ಲಿ ಒಟ್ಟು 396 ಹಲಗೆಗಳನ್ನು ಅಳವಡಿಸಲಾಗುತ್ತದೆ.

ಒಳಹರಿವು ಹೆಚ್ಚಿದೆ
ಮಾನವ ಶ್ರಮದಲ್ಲಿ ಹಲಗೆ ಅಳವಡಿಸುವ ಕೆಲಸ ನಡೆಯುತ್ತಿದೆ. ಇದು ಸುಮಾರು 25 ದಿನಗಳ ಕೆಲಸ. ಈಗಾಗಲೇ 3 ಸ್ತರದಷ್ಟು ಹಲಗೆಗಳನ್ನು ಅಳವಡಿಸಲಾಗಿದೆ. ಸದ್ಯ 3 ಸ್ತರದ ಮೇಲಿನಿಂದ ನೀರು ಓವರ್‌ ಫ್ಲೋ ಆಗುತ್ತಿದೆ. ಈ ಬಾರಿ ನೀರಿನ ಒಳಹರಿವು ಹೆಚ್ಚಿದೆ. ವಾರದೊಳಗೆ ಹಲಗೆ ಅಳವಡಿಸುವ ಕೆಲಸ ಪೂರ್ಣಗೊಳ್ಳಲಿದೆ.

ಅಷ್ಟರಲ್ಲಿ 3 ಮೀಟರ್‌ ಎತ್ತರಕ್ಕೂ ನೀರು ಶೇಖರಣೆ ಆಗುವುದು ಮಾತ್ರವಲ್ಲ ಓವರ್‌ಫ್ಲೋ ಆಗಲಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಹಲಗೆಗೆ ಬೀಡಿಂಗ್‌
ಮಳೆಗಾಲದಲ್ಲಿ ಅಣೆಕಟ್ಟಿನ ಸೆರೆಗಳಲ್ಲಿ ನಿಂತ ಕಸ, ಕಡ್ಡಿಗಳನ್ನು ಶುಚಿಗೊಳಿಸಿ, ಅದರ ಮೇಲೆ ಹಲಗೆಗಳನ್ನು ಅಳವಡಿಸಲಾಗುತ್ತದೆ. ನೀರಿನ ರಭಸ ಹೆಚ್ಚಿರುವುದರಿಂದ ವೇಗವಾಗಿ ಕೆಲಸ ಮಾಡಲು ಅಡ್ಡಿಯಾಗುತ್ತದೆ. ಆದ್ದರಿಂದ ಒಂದು ಬದಿಯಿಂದ ಹಲಗೆಗಳನ್ನು ಕಡಿಮೆ ಇಡಲಾಗುತ್ತದೆ. ಹಲಗೆಗಳಿಗೆ ಬೀಡಿಂಗ್‌ ಬಡಿದು, ನೀರು ಸೋರಿಕೆ ಇಲ್ಲ ಎಂದ ಬಳಿಕವೇ ಒಂದು ಸ್ಥರದ ಕೆಲಸವನ್ನು ಪೂರ್ಣಗೊಳಿಸಲಾಗುತ್ತದೆ.

144 ಬೋರ್‌ವೆಲ್‌
6.5 ಎಂಎಲ್‌ಡಿ ನೀರು ಅಣೆಕಟ್ಟಿನಿಂದ ತೆಗೆದರೆ, 1.5 ಎಂಎಲ್‌ಡಿ ನೀರನ್ನು ಬೋರ್‌ವೆಲ್‌ಗ‌ಳಿಂದ ಪಡೆಯಲಾಗುತ್ತದೆ. ಇದಕ್ಕಾಗಿ ನಗರಸಭೆ ವ್ಯಾಪ್ತಿಯೊಳಗೆ 144 ಬೋರ್‌ವೆಲ್‌ಗ‌ಳಿವೆ. ಬೇಸಗೆ ಮಿತಿ ಮೀರಿದರೆ ಕೆಲ ಬೋರ್‌ವೆಲ್‌ಗ‌ಳು ಒಣಗುತ್ತದೆ. ಈ ಸಂದರ್ಭ ಸಮೀಪದ ಬೋರ್‌ವೆಲ್‌ನ ನೀರನ್ನು ಕಳುಹಿಸುವ ವ್ಯವಸ್ಥೆಯೂ ನಡೆದಿದೆ.

ಟ್ಯಾಂಕರ್‌ ಸಿದ್ಧ
ಹಿಂದಿನ ಕೆಲ ವರ್ಷಗಳಲ್ಲಿ ಎತ್ತರದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಆ ಸಂದರ್ಭ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಮುಂಜಾಗ್ರತೆಯಾಗಿ ಈಗಾಗಲೇ ಟ್ಯಾಂಕರ್‌ ಒಂದಕ್ಕೆ ಗುತ್ತಿಗೆ ನೀಡಲಾಗಿದೆ. ನೀರಿನ ಸಮಸ್ಯೆ ಎದುರಾಗುವ ಎತ್ತರದ ಪ್ರದೇಶಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲಾಗುವುದು. ಜಲಸಿರಿ ಯೋಜನೆಯ 24್x7 ಕುಡಿಯುವ ನೀರಿನ ಜಾರಿಗೆ ಇನ್ನೂ 2 ವರ್ಷ ಕಾಯಬೇಕು. ಅಲ್ಲಿವರೆಗೆ ಇಂತಹ ಉಪಕ್ರಮಗಳನ್ನು ಅನುಸರಿಸುವುದು ಅನಿವಾರ್ಯ.

ವಿದ್ಯುತ್‌ನದ್ದೇ ಸಮಸ್ಯೆ
ಕುಡಿಯುವ ನೀರು ಸರಬರಾಜಿಗೆ ಪವರ್‌ ಕಟ್ ದೊಡ್ಡ ಸಮಸ್ಯೆ. ನೀರು ಪೂರೈಕೆ ಆಗುತ್ತಿದ್ದಾಗ ಪವರ್‌ ಕಟ್ ಆದರೆ, ನೀರು ಪೂರೈಕೆ ಸ್ಥಗಿತಗೊಳ್ಳುತ್ತದೆ. ಇದರ ಬಗ್ಗೆ ಮೆಸ್ಕಾಂನ ಗಮನ ಸೆಳೆಯಲಾಗಿದೆ. ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿ ಸಭೆಯಲ್ಲೂ ಪ್ರಸ್ತಾವವಾಗಿದೆ. ಸಮಸ್ಯೆಯನ್ನು ತತ್‌ಕ್ಷಣ ಪರಿಹರಿಸುವಂತೆ ಜಿಲ್ಲಾಧಿಕಾರಿಗಳು ಮೆಸ್ಕಾಂಗೆ ಸೂಚನೆ ನೀಡಿದ್ದಾರೆ ಎಂದು ಪುತ್ತೂರು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಅಪ್‌ಗ್ರೇಡ್‌ ಅಗತ್ಯ
ಜಲಸಿರಿ ಯೋಜನೆ ಜಾರಿಗೆ ಬರುತ್ತಿದ್ದಂತೆ ಅಣೆಕಟ್ಟಿಗೆ ಹಲಗೆ ಜೋಡಿಸುವ ತಂತ್ರಜ್ಞಾನದಲ್ಲೂ ಅಪ್‌ಗ್ರೇಡ್‌ ಆಗುವ ಅಗತ್ಯ ಇದೆ. ಈಗ ಮಾನವ ಶ್ರಮದಲ್ಲಿ ಹಲಗೆ ಅಳವಡಿಸುತ್ತಿದ್ದು, ಸುಮಾರು ಒಂದು ತಿಂಗಳು ಕೆಲಸ ನಿರ್ವಹಿಸಬೇಕಾಗುತ್ತದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ, ಇಷ್ಟು ಶ್ರಮ ಹಾಗೂ ದಿನ ಉಳಿಯುತ್ತದೆ. ಅಣೆಕಟ್ಟಿಗೆ ಹಲಗೆ ಜೋಡಿಸುವ ಕೆಲಸ ಈಗಾಗಲೇ ಅರ್ಧ ಪೂರ್ಣಗೊಂಡಿದೆ.

ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.