ಪುತ್ತೂರು ಜಾತ್ರೆ: ಇಂದು ಧ್ವಜಾರೋಹಣ
ಎ. 14ರಂದು ಶ್ರೀ ದೇಗುಲದಲ್ಲಿ ವಿಷು ಕಣಿ ಉತ್ಸವ
Team Udayavani, Apr 10, 2019, 6:00 AM IST
ನಗರ: ಸೀಮಾತೀತ ಪ್ರಭಾವ ವಲಯವನ್ನು ಹೊಂದಿರುವ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಬುಧವಾರ ಧ್ವಜಾರೋಹಣದ ಮೂಲಕ ಚಾಲನೆ ದೊರೆಯಲಿದೆ. ಬೆಳಗ್ಗೆ 9.46ರ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಾರೋಹಣ ನಡೆಯಲಿದೆ.
ಪುತ್ತೂರ ಉಳ್ಳಾಯನಾಗಿ ಭಕ್ತರ ನಂಬಿಕೆ, ಪ್ರೀತಿ, ಗೌರವಕ್ಕೆ ಪಾತ್ರವಾಗಿರುವ ಶ್ರೀ ಮಹಾಲಿಂಗೇಶ್ವರನ ದೇಗುಲವು ಕೇವಲ 273 ದಿನಗಳಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಭಕ್ತ ಸಮುದಾಯದ ನಿತ್ಯ ಕರಸೇವೆಯ ಜತೆಗೆ ನಿರ್ಮಾಣಗೊಂಡಿರುವುದು ಒಂದು ಚರಿತ್ರೆ. ಇಂತಹ ಹಲವು ಐತಿಹಾಸಿಕ ಕಾರಣದಿಂದಲೇ ಪುತ್ತೂರು ಜಾತ್ರೆ ಕೂಡ ಭಕ್ತ ಸಮುದಾಯದಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ.
ಧಾರ್ಮಿಕ ಚರಿತ್ರೆ
ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಪ್ರತಿವರ್ಷ ಎ. 10ರಿಂದ 20ರ ತನಕ ನಡೆಯುತ್ತದೆ. ಜಾತ್ರೆಯ ಸಂದರ್ಭ ದೇವರು ದಶ ದಿಕ್ಕುಗಳಿಗೆ ಪೇಟೆ ಸವಾರಿ ಉತ್ಸವದಲ್ಲಿ ತೆರಳಿ ಭಕ್ತರ ಕಟ್ಟೆ ಪೂಜೆ ಸೇವೆಯನ್ನು ಸ್ವೀಕರಿಸುವುದು ಮತ್ತು ವರ್ಷ ಕಳೆದಂತೆ ಕಟ್ಟೆಪೂಜೆ ಸೇವೆಗಳು ಮತ್ತಷ್ಟು ವಿಜ್ರಂಭಣೆಯಿಂದ ನಡೆಯುತ್ತಿರುವುದು ಪುತ್ತೂರು ಜಾತ್ರೆಯ ವಿಶೇಷತೆಗಳಲ್ಲಿ ಒಂದು. 10 ದಿನಗಳ ಕಾಲ ಪೇಟೆ ಸವಾರಿ ನಡೆಯುವ ಜಾತ್ರೆ ದ. ಕ. ಜಿಲ್ಲೆಯ ಮಟ್ಟಿಗೆ ಧಾರ್ಮಿಕ ಚರಿತ್ರೆಯೂ ಹೌದು.
ಜಾತ್ರೆಯ ವಿಶೇಷ
ಎ. 10ರಂದು ಧ್ವಜಾರೋಹಣದೊಂದಿಗೆ ಜಾತ್ರೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಎ. 14ರಂದು ಶ್ರೀ ದೇಗುಲದಲ್ಲಿ ವಿಷು ಕಣಿ ಉತ್ಸವ ವಿಶೇಷವಾಗಿ ನಡೆದು ಅಂದು ರಾತ್ರಿ ದೇಗುಲದಲ್ಲಿ ಚಂದ್ರಮಂಡಲ ರಥೋತ್ಸವ ನಡೆಯುತ್ತದೆ. ಎ. 16ರಂದು ದೇಗುಲದ ಹೊರಾಂಗಣದಲ್ಲಿ ಸಣ್ಣ ರಥೋತ್ಸವ, ಪಲ್ಲಕ್ಕಿ ಉತ್ಸವ, ಮುತ್ತು ಬೆಳೆದ ಪುತ್ತೂರಿನ ಕೆರೆಯಲ್ಲಿ ಶ್ರೀ ದೇವರ ಕೆರೆ ಅಯನ, ಎ. 17ರ ಬೆಳಗ್ಗೆ ಶ್ರೀ ದೇಗುಲದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಂಜೆ ಶ್ರೀ ದೇವರ ಬ್ರಹ್ಮರಥೋತ್ಸವ ಮತ್ತು ಸುಡುಮದ್ದು ಪ್ರದರ್ಶನ ನಡೆಯುತ್ತದೆ. ಎ. 18ರಂದು ಸಂಜೆ ವೀರಮಂಗಲ ಕುಮಾರಧಾರಾ ನದಿಗೆ ಶ್ರೀ ದೇವರ ಅವಭೃಥ ಸವಾರಿ ತೆರಳುತ್ತದೆ. ಎ. 19ರಂದು ಅವಭೃಥ ಸವಾರಿ ಮುಗಿಸಿ ದೇವರು ದೇಗುಲಕ್ಕೆ ಬಂದ ಬಳಿಕ ಧ್ವಜಾವರೋಹಣ ನಡೆಯುತ್ತದೆ. ಎ. 19ರ ರಾತ್ರಿ ಮತ್ತು ಎ. 20ರ ರಾತ್ರಿ ಮಂತ್ರಾಕ್ಷತೆ, ಅಂಕುರ ಪ್ರಸಾದ ಮತ್ತು ದೈವಗಳ ನೇಮ ನಡೆಯುತ್ತದೆ.
ದೇಗುಲದ ಧ್ವಜಸ್ಥಂಭಕ್ಕೆ ಕಟ್ಟಲು ಸೀಮೆಯ ಭಕ್ತರು ಅಡಿಕೆ, ಸೀಯಾಳ, ಬಾಳೆಗೊನೆ, ಕಬ್ಬಿನ ಜಲ್ಲೆ, ಮಾವಿನ ಕಾಯಿಯ ಗೊಂಚಲು, ಹಲಸಿನ ಕಾಯಿ, ಹಿಂಗಾರ ಮೊದಲಾದ ಸುವಸ್ತುಗಳನ್ನು ಎ. 10ರಂದು ದೇಗುಲಕ್ಕೆ ತಂದು ಒಪ್ಪಿಸುತ್ತಾರೆ. ಧ್ವಜಾರೋಹಣದ ಬಳಿಕ ಸುವಸ್ತುಗಳನ್ನು ಧ್ವಜಸ್ಥಂಭದ ಕಟ್ಟೆಗೆ ಕಟ್ಟಲಾಗುತ್ತದೆ.
ಪೇಟೆ ಸವಾರಿ ಆರಂಭ
ರಾತ್ರಿ ಅಂಕುರಾರ್ಪಣೆಯ ಬಳಿಕ ಶ್ರೀ ದೇವರ ಬಲಿ ಉತ್ಸವ ಹೊರಡುತ್ತದೆ. ಬಳಿಕ ಪೇಟೆ ಸವಾರಿಯು ಬೊಳುವಾರು, ಶ್ರೀರಾಮ ಪೇಟೆ, ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ತನಕ ತೆರಳಿ ತಡರಾತ್ರಿ ದೇವಾಲಯಕ್ಕೆ ತಲುಪಲಿದೆ.
ನಲ್ಕುರಿ ಸಂಪ್ರದಾಯ
ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ತುಳು ಪಂಚಾಂಗದಂತೆ ಹಿಂದಿನಿಂದಲೂ ನಿಗದಿತ ದಿನಗಳಂದೇ ನಡೆಯುತ್ತದೆ. ತುಳು ಧಾರ್ಮಿಕ ಸಂದರ್ಭ ಇದನ್ನು ನಲ್ಕುರಿ ಸಂಪ್ರದಾಯ ಎಂದು ಕರೆಯಲಾಗುತ್ತದೆ. ನಿಗದಿತ ದಿನಗಳಂದೇ ಧಾರ್ಮಿಕ ಉತ್ಸವಗಳು ನಡೆಯುವುದೇ ನಲ್ಕುರಿ ಸಂಪ್ರದಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.