ಅಭಿವೃದ್ಧಿ  ಯೋಜನೆಗಳ ತ್ವರಿತ ಅನುಷ್ಠಾನ ಅಗತ್ಯ


Team Udayavani, Oct 8, 2017, 12:57 PM IST

8-Mng-1.jpg10.jpg

ಮಹಾನಗರ: ಮಂಗಳೂರು ನಗರ ಹಾಗೂ ದ.ಕ. ಜಿಲ್ಲೆಯಲ್ಲಿ ಮಂಜೂರಾಗಿರುವ, ಅನುದಾನಗಳು ಬಿಡುಗಡೆಯಾಗಿರುವ ಹಲವು ಯೋಜನೆಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಪ್ರಸ್ತಾವನೆ ಸಲ್ಲಿಸಿರುವ ಯೋಜನೆಗಳು ಅಂಗೀಕಾರದ ಹಂತಕ್ಕೆ ತಲುಪಿಲ್ಲ. ಯೋಜನೆಗಳ ಅನುಷ್ಠಾನ ವಿಳಂಬವಾದಂತೆ ವೆಚ್ಚದಲ್ಲೂ ಏರಿಕೆಯಾಗುತ್ತಿದೆ, ಸಮಸ್ಯೆಗಳೂ ಉದ್ಭವವಾಗುತ್ತಿವೆ.

ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಂಗಳೂರು ನಗರದ ಎಮ್ಮೆಕೆರೆಯಲ್ಲಿ 2 ಎಕ್ರೆ ಜಮೀನಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣಕ್ಕೆ 5 ಕೋ.ರೂ. ಅಂದಾಜು ವೆಚ್ಚದಲ್ಲಿ ಯೋಜನೆ ಸಿದ್ಧವಾಗಿ ವರ್ಷಗಳೇ ಕಳೆದಿವೆ. ಮೊದಲ ಹಂತದ ಅನುದಾನವೂ ಬಿಡುಗಡೆಯಾಗಿದೆ, ಶಂಕು ಸ್ಥಾಪನೆ ನೆರವೇರಿದೆ. ಆದರೆ ಯೋಜನೆ ಇನ್ನೂ ಆರಂಭವಾಗಿಲ್ಲ. ಮಂಗಳೂರು ನೆಹರೂ ಮೈದಾನದಲ್ಲಿರುವ ಪುಟ್‌ಬಾಲ್‌ ಮೈದಾನವನ್ನು ಅಂತಾರಾಷ್ಟ್ರೀಯ ಮಟ್ಟದ ಫ‌ುಟ್‌ಬಾಲ್‌ ಅಂಗಳವಾಗಿ ಅಭಿವೃದ್ಧಿಪಡಿಸಲು 25 ಲಕ್ಷ ರೂ.ಬಿಡುಗಡೆಯಾಗಿದ್ದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.

* ಮಂಗಳೂರು ಹಳೇ ಬಂದರಿನಲ್ಲಿ ಸುಮಾರು 65 ಕೋ.ರೂ. ವೆಚ್ಚದಲ್ಲಿ ವೆಚ್ಚದಲ್ಲಿ ಲಕ್ಷದ್ವೀಪದ ಆಡಳಿತದ ನೆರವಿನೊಂದಿಗೆ ಕರ್ನಾಟಕ ಸರಕಾರದ ಸಹಭಾಗಿತ್ವದಲ್ಲಿ ಸುಸಜ್ಜಿತವಾದ ಡೆಡಿಕೇಟೆಡ್‌ ಜೆಟ್ಟಿಯೊಂದರ ನಿರ್ಮಾಣ ಯೋಜನೆ ಸಿದ್ಧವಾಗಿ 2 ವರ್ಷ ಕಳೆದರೂ ಸಾಕಾರಗೊಂಡಿಲ್ಲ. ಇದೀಗ ಶಾಸಕ ಜೆ.ಆರ್‌. ಲೋಬೋ ಅವರು ಮುತುವರ್ಜಿವಹಿಸಿ ಯೋಜನೆಯನ್ನು ನಿರ್ಣಾಯಕ ಹಂತಕ್ಕೆ ತರುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

 *ಸೋಮೇಶ್ವರ, ಉಳ್ಳಾಲ, ಸುರತ್ಕಲ್‌, ತಲಪಾಡಿ ಮತ್ತು ಸುಲ್ತಾನ್‌ ಬತ್ತೇರಿ ಬೀಚುಗಳ ಅಭಿವೃದ್ಧಿಗೆ 13.72  ಕೋ.ರೂ. ಮಂಜೂಗಿದ್ದರೂ ಅನುಷ್ಠಾನ ಅಮೆಗತಿಯಲ್ಲಿ ಸಾಗುತ್ತಿದೆ.  

*ಸ್ಮಾರ್ಟ್‌ ಸಿಟಿಯಾಗುತ್ತಿರುವ ಮಂಗಳೂರಿನಲ್ಲಿ ಇನ್ನೂ ಪರಿಪೂರ್ಣ ಕ್ರೀಡಾಂಗಣವಿಲ್ಲ. ಮಂಗಳೂರಿನಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನವನ್ನು ನಿರ್ಮಿಸುವ ಪ್ರಸ್ತಾವ 1999ರಿಂದಲೂ ಇದೆ. 15 ಎಕ್ರೆ ಜಾಗವನ್ನು ಜಿಲ್ಲಾಡಳಿತ ನೀಡಿದರೆ ಮೈದಾನ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದ ಕರ್ನಾಟಕ ಕ್ರಿಕೆಟ್‌ ಅಸೋಸಿಯೇಶನ್‌ ಪ್ರಸ್ತಾಪ ಮುಂದಿರಿಸಿ 17 ವರ್ಷಗಳಾಗಿವೆ. ಕೆಲವು ಕಡೆ ಜಾಗ ನೋಡಲಾಗಿದೆ. ಒಂದೆರಡು ಬಾರಿ ಸಭೆಗಳು ನಡೆದಿರುವುದು ಬಿಟ್ಟರೆ ಈವರೆಗೆ ಹೆಚ್ಚಿನ ಪ್ರಗತಿಯಾಗಿಲ್ಲ.

* ಮಂಗಳೂರಿನಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣದ ಕನಸು 25 ವರ್ಷಗಳಿಂದ ಇದೆ.  ಹಲವು ಬಾರಿ ಶಿಲಾನ್ಯಾಸವಾಗಿದೆ. ಪ್ರಸ್ತುತ ಬೊಂದೇಲ್‌ನಲ್ಲಿ ಜಾಗ ಗುರುತಿಸಿ ರಂಗಮಂದಿರಕ್ಕೆ ಮೀಸಲಿಡಲಾಗಿದೆ. ಕೇಂದ್ರದ ನೆರವಿಗಾಗಿ ಒಂದಷ್ಟು ವರ್ಷ ಕಾದು ಬಳಿಕ ರಾಜ್ಯ ಸರಕಾರದ ವತಿಯಿಂದಲೇ ನಿರ್ಮಿಸಲು ತೀರ್ಮಾನಿಸಲಾಯಿತು.ಇದಕ್ಕೆ ಹೊಸ ಪ್ರಸ್ತಾವನೆ ರೂಪಿಸಿ ಇದೀಗ ಎರಡು ವರ್ಷಗಳಾಗಿವೆ.

 *ಮಂಗಳೂರು ವಿಮಾನ ನಿಲ್ದಾಣ ನಿಜಾರ್ಥದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ವರೂಪ ಪಡೆಯಬೇಕಾದರೆ ದೊಡ್ಡ ಗಾತ್ರದ ವಿಮಾನಗಳು ಇಳಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ 2013ರಲ್ಲಿ ರನ್‌ ವೇಯನ್ನು 11,600 ಅಡಿಗೆ ವಿಸ್ತರಿಸುವ ಪ್ರಸ್ತಾವನೆ ರೂಪಿಸಲಾಯಿತು. ವಿಮಾನ ನಿಲ್ದಾಣದ ಪಕ್ಕದ ಕಂದಾವರ ಗ್ರಾ.ಪಂ. ವ್ಯಾಪ್ತಿಯ ಕೊಳಂಬೆ ಹಾಗೂ ಅದ್ಯಪಾಡಿ ಗ್ರಾಮದಲ್ಲಿ ಇದಕ್ಕೆ ಪೂರಕದ ಜಮೀನು ಗುರುತಿಸಿ, ಸ್ವಾಧೀನಕ್ಕೆ ಆವಶ್ಯವಿರುವ ಹಣದ ಅಂದಾಜುಪಟ್ಟಿ ಸಲ್ಲಿಕೆಯಾಗಿದೆ.ಬಜೆಟ್‌ನಲ್ಲೂ ಪ್ರಸ್ತಾವನೆಯಾಗಿದೆ. ಅದರೂ ಯೋಜನೆ ಬಗ್ಗೆ ಮೀನಮೇಷ ಎಣಿಸಲಾಗುತ್ತಿದೆ.

* ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ನಂತೂರಿನಲ್ಲಿ ಓವರ್‌ ಪಾಸ್‌ ಅಥವಾ ಅಂಡರ್‌ಪಾಸ್‌ ನಿರ್ಮಾಣ ಹಲವು ವರ್ಷಗಳ ಬೇಡಿಕೆ. ಇದು ಕಾರ್ಯರೂಪಕ್ಕೆ ಬಂದಿಲ್ಲ.

 *ಹಂಪನಕಟ್ಟೆಯಲ್ಲಿ ಈ ಹಿಂದಿನ ಸರ್ವಿಸ್‌ ಬಸ್‌ನಿಲ್ದಾಣ ಜಾಗದಲ್ಲಿ ಬಹು ಅಂತಸ್ತು ವಾಹನ ನಿಲುಗಡೆ ಸಂಕೀರ್ಣ ನಿರ್ಮಿಸುವ ಪ್ರಸ್ತಾವನೆ ರೂಪುಗೊಂಡು ದಶಕ ಕಳೆದಿದೆ. ಆದರೆ ಅನುಷ್ಠಾನದ ನಿಟ್ಟಿನಲ್ಲಿ ಇನ್ನೂ ಚರ್ಚೆಗಳ ಹಂತದಲ್ಲೇ ಇದೆ. ಇದೀಗ ಈ ಯೋಜನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೈಗೆತ್ತಿಗೊಳ್ಳಲು ನಿರ್ಧರಿಸಲಾಗಿದೆ.

* ಮಂಗಳೂರಿಗೆ ಸುಸಜ್ಜಿತ ಕೇಂದ್ರ ಬಸ್‌ನಿಲ್ದಾಣ ನಿರ್ಮಾಣ ಯೋಜನೆ ಹಲವಾರು ವರ್ಷಗಳಿಂದ ನನೆಗುದಿಯಲ್ಲಿದೆ. ಪಂಪ್‌ವೆಲ್‌ ಜಾಗ ಸ್ವಾಧೀನಪಡಿಸಲಾಗಿದೆ . ಆದರೆ ಬಸ್‌ನಿರ್ಮಾಣದ ಸ್ವರೂಪ, ವಿನ್ಯಾಸ, ಮಾದರಿಯ ನಿರ್ಧಾರದಲ್ಲೆ ಯೋಜನೆ ಕೆಲವು ವರ್ಷಗಳಿಂದ
ಸಾಗಿಬಂದಿದೆ. ಈಗಲೂ ಇದೇ ಹಂತದಲ್ಲಿದೆ.

 *ಸೆಂಟ್ರಲ್‌ ಮಾರುಕಟ್ಟೆ ಅಭಿವೃದ್ಧಿಯ ಆಶ್ವಾಸನೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಮಾರುಕಟ್ಟೆ ಅಭಿವೃದ್ಧಿ ಬಗ್ಗೆ ಹೊಸ ವಿನ್ಯಾಸ ತಯಾರಿಸಿದ್ದರು. ಯೋಜನೆ ಅನುಷ್ಠಾನದಲ್ಲಿ ಪ್ರಗತಿಯಾಗಿಲ್ಲ.

ಪ್ರಸ್ತಾವನೆಯಲ್ಲಿರುವ ಯೋಜನೆಗಳು ಮಂಜೂರಿಗೆ ಬಾಕಿ ಉಳಿಯಲು ನಿರ್ದಿಷ್ಟ ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿರುತ್ತವೆ. ಆದರೆ ಮಂಜೂರುಗೊಂಡು ಅನುದಾನ ಬಿಡುಗಡೆಯಾದ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ ಮತ್ತು ಬಿಡುಗಡೆಯಾದ ಹಣ ಇಲಾಖೆಯಲ್ಲೆ ವರ್ಷಗಟ್ಟಲೇ ಉಳಿದುಕೊಳ್ಳುತ್ತಿವೆ ಎಂದಾದರೆ ವ್ಯವಸ್ಥೆಯ ದೋಷವೇ ಅನುಷ್ಠಾನದಲ್ಲಿ ಇಚ್ಛಾಶಕ್ತಿಯೇ ಕೊರತೆಯೇ ಎಂದು ತಿಳಿಯುತ್ತಿಲ್ಲ. ಕಾಮಗಾರಿಗಳ ಅನುಷ್ಠಾನ ವಿಳಂಬವಾದಷ್ಟೂ ಅವುಗಳ ವೆಚ್ಚದಲ್ಲೂ ಏರಿಕೆಯಾಗುತ್ತವೆ. ಇದರ ಜತೆಗೆ ಒಂದಷ್ಟು ಹೊಸ ಸಮಸ್ಯೆಗಳು ಹುಟ್ಟಿ ಕೊಂಡು ಅನುಷ್ಠಾನದಲ್ಲಿ ತೊಡಕುಗಳಾಗುತ್ತಿವೆ. ಮಂಜೂರಾಗಿರುವ ಯೋಜನೆ ಗಳು ಶೀಘ್ರವಾಗಿ ಕಾರ್ಯಗತಗೊಳ್ಳುವ ಟ್ಟಿನಲ್ಲಿ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಮುತುವರ್ಜಿವಹಿಸಿದರೆ ಯೋಜನೆ ಉದ್ದೇಶ ಸಾರ್ಥಕಗೊಳ್ಳುತ್ತದೆ.

ಕೇಶವ ಕುಂದರ್‌

ಟಾಪ್ ನ್ಯೂಸ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

1-moidin

ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್‌ ಬಾವ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

12-hunsur

Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.