ಬಸ್ ನಿಲ್ದಾಣಗಳಲ್ಲಿ ಶೀಘ್ರ ಮಾಹಿತಿ ಫಲಕ
Team Udayavani, Oct 29, 2017, 12:27 PM IST
ಮಹಾನಗರ: ಮಂಗಳೂರು ವಿಸ್ತಾರಗೊಳ್ಳುತ್ತಿದೆ. ಸ್ಮಾರ್ಟ್‌ಸಿಟಿಯತ್ತ ನಗರ ಹೆಜ್ಜೆಯಿಟ್ಟಿದೆ. ಇದರೊಂದಿಗೆ
ಮೂಲ ಸೌಕರ್ಯಗಳ ವೃದ್ಧಿಗೂ ಒಂದಿಷ್ಟು ಪೂರಕ ಯೋಜನೆಗಳು ಅನುಷ್ಠಾನಕ್ಕೆ ಬರುವುದು ಸಹಜ. ಪ್ರಯಾಣಿಕ ಸ್ನೇಹಿ ಸಂಚಾರ ವ್ಯವಸ್ಥೆ, ಸುಸಜ್ಜಿತ ಬಸ್ ನಿಲ್ದಾಣಗಳ ನಿರ್ಮಾಣಕ್ಕೂ ಆದ್ಯತೆ ಸಿಗಬೇಕಿದೆ.
ಮಂಗಳೂರು ನಗರದಲ್ಲಿ ಸುಮಾರು 350 ಸಿಟಿ ಬಸ್‌ಗಳು ಸಾರ್ವಜನಿಕ ಸೇವೆ ನೀಡುತ್ತಿವೆ. ಹೆಚ್ಚಿನ ರೂಟ್‌ಗಳಲ್ಲಿ ಅರ್ಧ ನಿಮಿಷಕ್ಕೊಂದು ಸಿಟಿಬಸ್ ಸಂಚಾರವಿದೆ. ನಿತ್ಯ ಸುಮಾರು 450 ಸರ್ವಿಸ್ ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳು ಸಂಚರಿಸುತ್ತಿವೆ. ಇವುಗಳಿಗೆ ನೆಹರೂ ಮೈದಾನದ ಪಕ್ಕದಲ್ಲಿರುವ ಸರ್ವಿಸ್ ಬಸ್‌ನಿಲ್ದಾಣ ಆರಂಭಿಕ ತಾಣ. ಸಿಟಿಬಸ್‌ಗಳಲ್ಲಿ ಶೇ. 90ರಷ್ಟು ಬಸ್‌ಗಳಿಗೆ ಸ್ಟೇಟ್ ಬ್ಯಾಂಕ್ ನಿಲ್ದಾಣವೇ ಕೇಂದ್ರ ಬಿಂದು. ರೂಟ್ ನಂ. 15ರ ಬಸ್‌ಗಳು ಮಂಗಳಾದೇವಿಯಿಂದ ಸಂಚಾರ ನಡೆಸುತ್ತವೆ. ಕಂಕನಾಡಿ ಮಾರುಕಟ್ಟೆ ನಿಲ್ದಾಣದಿಂದಲೂ ಕೆಲವು ಬಸ್‌ಗಳ ಸಂಚರಿಸುತ್ತವೆ.
ಪ್ರಮುಖ ಮಾರ್ಗಗಳು
ಸ್ಟೇಟ್ ಬ್ಯಾಂಕಿನಿಂದ ಪಣಂಬೂರು ಮಾರ್ಗವಾಗಿ ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ, ಮುಕ್ಕ, ಜೋಕಟ್ಟೆ; ಕುಳೂರು
ಮಾರ್ಗವಾಗಿ ಕಾವೂರು, ನಂತೂರು, ಕುಲಶೇಖರ ಮಾರ್ಗವಾಗಿ ನೀರು ಮಾರ್ಗ, ವಾಮಂಜೂರು, ಪಿಲಿಕುಳ,
ಮೂಡುಶೆಡ್ಡೆ, ಬೆಂದೂರುವೆಲ್; ಪಂಪ್‌ವೆಲ್ ಮಾರ್ಗವಾಗಿ ತಲಪಾಡಿ, ಸೋಮೇಶ್ವರ, ತೊಕ್ಕೊಟ್ಟು ಮಾರ್ಗವಾಗಿ
ದೇರಳಕಟ್ಟೆ, ಕೋಣಾಜೆ, ಮುಡಿಪು; ನಾಟೆಕಲ್ ಮಾರ್ಗವಾಗಿ ಮಂಜನಾಡಿ, ಕೆಎಸ್‌ಆರ್‌ಟಿಸಿ ನಿಲ್ದಾಣ; ಬಿಜೈ ಮಾರ್ಗ
ವಾಗಿ ಯೆಯ್ನಾಡಿ, ಬೊಂದೇಲ್; ಬಿಜೈ ಕಾಫಿಕಾಡ್ ಮಾರ್ಗವಾಗಿ ಕುಂಟಿಕಾನ, ಕೊಂಚಾಡಿ, ಕಾವೂರು; ಸ್ಟೇಟ್ ಬ್ಯಾಂಕಿನಿಂದ ಕಂಕನಾಡಿ, ವೆಲೆನ್ಸಿಯಾ ಮಾರ್ಗವಾಗಿ ಮಾರ್ನಮಿ ಕಟ್ಟೆ, ಹಂಪನ ಕಟ್ಟೆ; ಪಳ್ನೀರ್ ಮಾರ್ಗವಾಗಿ ನಾಗುರಿ, ಪಡೀಲ್, ಬಜಾಲ್; ಸ್ಟೇಟ್ ಬ್ಯಾಂಕಿನಿಂದ ಪಾಂಡೇಶ್ವರ, ಬೋಳಾರ, ಬೋಳೂರು ಸಹಿತ ನಗರದ ಹಲವು ಕಡೆ ಗಳಿಗೆ ಸಿಟಿ ಬಸ್‌ಗಳು ಸಂಚರಿಸುತ್ತಿವೆ. ಮಂಗಳಾದೇವಿಯಿಂದ 15 ಸಿಟಿ ಬಸ್‌ಗಳು, ಬೆಂದೂರುವೆಲ್, ಮಲ್ಲಿಕಟ್ಟೆ, ನಂತೂರು ಮೂಲಕ ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರಕ್ಕೆ, ನಂ. 13ರ ಬಸ್‌ಗಳು ಬೆಂದೂರುವೆಲ್, ಮಲ್ಲಿಕಟ್ಟೆ, ನಂತೂರು, ಕುಳೂರು ಮೂಲಕ ಕಾವೂರಿಗೆ ಓಡಾಟ ನಡೆಸುತ್ತವೆ.
ಸಿಟಿ, ಸರ್ವಿಸ್ ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳು ಸಾಗುವ ಮಾರ್ಗದಲ್ಲಿ ಹಲವು ನಿಲ್ದಾಣಗಳು ಸಿಗುತ್ತವೆ. ಸಾರ್ವಜನಿಕರು ಇಲ್ಲೇ ಇಳಿಯುವುದು, ಬಸ್ ಹಿಡಿಯುವುದು ಸಾಮಾನ್ಯ. ಆದರೆ ಈ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಂಚಾರ ಮಾರ್ಗದ ಬಗ್ಗೆ ಮಾಹಿತಿ ನೀಡುವ ಯಾವುದೇ ವ್ಯವಸ್ಥೆ ಇರುವುದಿಲ್ಲ. ಬೇರೆ ಪ್ರಯಾಣಿಕರನ್ನು ಅಥವಾ ಬಸ್ ನಿರ್ವಾಹಕರನ್ನು ವಿಚಾರಿಸಿಯೇ ಸಂಚರಿಸಬೇಕಾಗುತ್ತಿದೆ.ಪ್ರಸ್ತುತ ಪುರಭವನದಿಂದ ಆರ್‌ಟಿಒ ಕಚೇರಿವರೆಗೆ ಇರುವ ಬಸ್ ನಿಲ್ದಾಣಗಳಲ್ಲಿ ಮಾತ್ರ ಬಸ್‌ಗಳ ನಿಲುಗಡೆಗಾಗಿ ರೂಟ್ ನಂ.ಗಳನ್ನು ಹಾಕಿದ್ದಾರೆ.
ರಿಯಲ್ ಟೈಮ್ ಫಲಕಗಳು
ಪ್ರಯಾಣಿಕರು ಎದುರಿಸುತ್ತಿರುವ ಗೊಂದಲಗಳನ್ನು ನಿವಾರಿಸಲು ಬಿಎಂಟಿಸಿ ಕ್ರಮಗಳನ್ನು ಕೈಗೊಂಡಿದೆ. ಬಸ್‌ಗಳು ಸಂಚರಿಸುವ ಮಾರ್ಗ, ಸಮಯದ ಮಾಹಿತಿ ನೀಡುವ ರಿಯಲ್ ಟೈಮ್ ಫಲಕಗಳನ್ನು ಬಸ್ ನಿಲ್ದಾಣಗಳಲ್ಲಿ
ಅಳವಡಿಸಲಾಗುತ್ತಿದೆ. ಸುಮಾರು 251 ಪ್ರಮುಖ ಬಸ್ ನಿಲ್ದಾಣಗಳಲ್ಲಿ ಡಿಜಿಟಲ್ ಫಲಕಗಳನ್ನು ಅಳವಡಿಸಲು ಯೋಜನೆ ರೂಪಿಸಿ, ಟೆಂಡರ್ ಕರೆದಿದೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿರುವ ಈ ಫಲಕಗಳು ಬಸ್ ಬರುವ
ಸಮಯ, ಸಾಗುವ ಮಾರ್ಗಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಿದೆ. ದಕ್ಷ ಅಧಿಕಾರಿಯೆಂದು ಹೆಸರು ಗಳಿಸಿರುವ ವಿ.ಪೊನ್ನುರಾಜ್ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಅವರು ಈ ಜನಸ್ನೇಹಿ ಯೋಜನೆ ರೂಪಿಸಿದ್ದಾರೆ. ಇವುಗಳನ್ನು ಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಬೆಳಗ್ಗೆ 5ರಿಂದ ರಾತ್ರಿ 11 ಗಂಟೆಯವರೆಗೆ ಈ ಡಿಜಿಟಲ್ ಫಲಕಗಳು ಕಾರ್ಯಾಚರಿಸುತ್ತವೆ. ಬಸ್ ಸದ್ಯ ಇರುವ ಜಾಗದ ಬಗ್ಗೆ ಮಾಹಿತಿ ನೀಡುವ ಜತೆಗೆ ಆಯಾ ದಿನದ ಹವಾಮಾನ ವರದಿ, ದೈನಂದಿನ ಸುದ್ದಿಯೂ ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಮಂಗಳೂರಿನ ನಿಲ್ದಾಣಗಳಲ್ಲೂ ಅಳವಡಿಸಿ
ಪ್ರಮುಖ ನಿಲ್ದಾಣಗಳ ಮೂಲಕ ಸಂಚರಿಸುವ ಬಸ್‌ಗಳು ಸಾಗುವ ಪ್ರದೇಶಗಳ ಮಾಹಿತಿ ಫಲಕವನ್ನು ಳವಡಿಸುವುದು ಪ್ರಯಾಣಿಕರ ಅನುಕೂಲತೆಯ ನಿಟ್ಟಿನಲ್ಲಿ ಅವಶ್ಯವಾಗಿದೆ. ಸಿಟಿ ಬಸ್‌ಗಳಾದರೆ ಅವುಗಳ ನಂಬರ್‌ಗಳು ಹಾಗೂ ಸಂಚರಿಸುವ ಪ್ರದೇಶಗಳನ್ನು ನಮೂದಿಸಬಹುದು. ಇದಲ್ಲದೆ ಬಸ್ ನಿಲ್ದಾಣ ಮೂಲಕ ಯಾವ ಉರುಗಳಿಗೆ ಹೋಗುವ ಬಸ್‌ಗಳು ಬರುತ್ತವೆ ಎಂಬುದರ ಮಾಹಿತಿಯನ್ನೂ ಹಾಕಬಹುದು. ನಾಮಫಲಕಗಳನ್ನು ಸಾರ್ವಜನಿಕ, ವಾಣಿಜ್ಯ ಸಂಸ್ಥೆಗಳ ಸಹಭಾಗಿತ್ವ ಪಡೆದುಕೊಂಡು ಅಳವಡಿಸಬಹುದು. ಬೆಂಗಳೂರು ಮಾದರಿಯಲ್ಲಿ ನಗರದ ಒಂದೆರಡು ಪ್ರಮುಖ ಪ್ರದೇಶಗಳಲ್ಲಿ ಪಿಪಿ ಮಾದರಿಯಲ್ಲಿ ಡಿಜಿಟಲ್ ಫಲಕಗಳನ್ನು ಅಳವಡಿಸಬಹುದಾಗಿದೆ.
ಉದ್ದೇಶಿಸಲಾಗಿದೆ
ಮಂಗಳೂರು ನಗರದಲ್ಲಿ ಬಸ್ ನಿಲ್ದಾಣಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸುವ ಪ್ರಸ್ತಾವನೆ ಇದೆ. ನಿಲ್ದಾಣಕ್ಕೆ ಬರುವ ಬಸ್‌ಗಳು, ವೇಳಾಪಟ್ಟಿ ಸಹಿತ ಅವಶ್ಯ ಮಾಹಿತಿಗಳನ್ನು ಎಲ್‌ಇಡಿ ಮೂಲಕ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಇದರ ಅನುಷ್ಠಾನಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.
– ಮಹಮ್ಮದ್ ನಜೀರ್, ಆಯಕ್ತರು
ಮಂಗಳೂರು ಮಹಾನಗರ ಪಾಲಿಕೆ
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.