ದುಡಿಮೆಗಾಗಿ ನಗರಕ್ಕೆ ಬರುವ ವಸತಿ ರಹಿತ ಮಹಿಳೆಯರಿಗೆ ಶೀಘ್ರ ಆಶ್ರಯ ಕೇಂದ್ರ

ಮಹಾನಗರ ಪಾಲಿಕೆ ಚಿಂತನೆ

Team Udayavani, Jan 13, 2020, 5:52 AM IST

0701MLR37

ಮಹಾನಗರ: ನಗರಕ್ಕೆ ಬೇರೆಡೆ ಯಿಂದ ದುಡಿಮೆಗಾಗಿ ಬಂದು ವಸತಿ ರಹಿತರಾಗಿ ಬಸ್‌ ನಿಲ್ದಾಣ, ಫ‌ುಟ್‌ಪಾತ್‌ಗಳಲ್ಲಿ ದಿನ ಕಳೆಯುವ ಮಹಿಳೆಯರಿಗೂ ಶೀಘ್ರದಲ್ಲೇ ಆಶ್ರಯ ಕಲ್ಪಿಸುವುದಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ.

ಏಕೆಂದರೆ ನಗರದ ಎರಡು ಕಡೆ ಕಾರ್ಯನಿರ್ವಹಿಸುತ್ತಿರುವ ನಗರ ವಸತಿ ರಹಿತರ ಆಶ್ರಯ ಕೇಂದ್ರಗಳ ಪೈಕಿ ಒಂದನ್ನು ಮಹಿಳೆಯರಿಗಾಗಿಯೇ ಮೀಸಲಿಟ್ಟು ಅದರ ನಿರ್ವಹಣೆ ಹೊಣೆಯನ್ನು ಸರಕಾರೇತರ ಸಂಸ್ಥೆಗೆ ವಹಿಸಿ ಕೊಡಲು ಉದ್ದೇಶಿಸಲಾಗಿದೆ. ಸಾಮಾನ್ಯವಾಗಿ ನಗರದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಕಳೆಯುವವರಿಗೆ ಆಶ್ರಯ ಒದಗಿಸುವ ಉದ್ದೇಶದಿಂದ ಈಗಾಗಲೇ ನಗರದ ಉರ್ವ ಮಾರ್ಕೆಟ್‌ ಮತ್ತು ಬಂದರಿನಲ್ಲಿ ಆಶ್ರಯ ಕೇಂದ್ರಗಳನ್ನು ಆರಂಭಿಸಲಾಗಿದೆ. ಉರ್ವ ಮಾರ್ಕೆಟ್‌ನಲ್ಲಿ 20, ಬಂದರಿನಲ್ಲಿ 25 ಮಂದಿ ಸದ್ಯ ಆಶ್ರಯ ಪಡೆಯುತ್ತಿದ್ದಾರೆ. ಆದರೆ ಎರಡು ಕಡೆಯೂ ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆಗಳಿಲ್ಲ. ಹೀಗಾಗಿ, ನಿರಾಶ್ರಿತ ಮಹಿಳೆ ಯರು ಕೂಡ ನಗರದಲ್ಲಿ ಹಲವೆಡೆ ಕಂಡು ಬಂದಿರುವುದರಿಂದ ಅವರಿಗೂ ಆಶ್ರಯ ಒದಗಿಸಲು ಯೋಜನೆ ರೂಪಿಸಲಾಗಿದೆ.

ಡೆ-ನಲ್ಮ್ ಯೋಜನೆ
ಈಗ ದೀನ್‌ ದಯಾಳ್‌ ಅಂತ್ಯೋದಯ ಯೋಜನೆ(ಡೆ- ನಲ್ಮ್) ಅಡಿಯಲ್ಲಿ ನಗರ ವಸತಿ ರಹಿತರ ಆಶ್ರಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಉಚಿತ ಆಶ್ರಯ ಒದಗಿಸಲಾಗುತ್ತದೆ. ಮನಪಾ ಇದರ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದು, ಸುವರ್ಣ ಕರ್ನಾಟಕ ಎಂಬ ಸರಕಾರೇತರ ಸಂಸ್ಥೆ ನಿರ್ವಹಣೆ ಮಾಡುತ್ತಿದೆ.

ಯಾರಿಗೆಲ್ಲ ಆಶ್ರಯ?
ಸಾಮಾನ್ಯವಾಗಿ ಕೂಲಿ ಕೆಲಸಗಳನ್ನು ಮಾಡಿಕೊಂಡಿರುವ ಬೇರೆ ಜಿಲ್ಲೆಗಳ ನಿರಾಶ್ರಿತರಿಗೆ ಆಶ್ರಯ ಕೊಡುವುದು ಇಂತಹ ಕೇಂದ್ರಗಳ ಮುಖ್ಯ ಉದ್ದೇಶ. ಆದರೆ ಕಾರ್ಮಿಕರಲ್ಲದವರಿಗೂ ಆಶ್ರಯ ಒದಗಿಸಲಾಗುತ್ತದೆ. ಇಲ್ಲಿ ಇಂತಿಷ್ಟೇ ದಿನಗಳ ಕಾಲ ಮಾತ್ರ ಆಶ್ರಯ ಪಡೆಯ ಬಹುದು ಎಂಬ ನಿಯಮವನ್ನು ಕೂಡ ರೂಪಿಸಿಲ್ಲ. ನಿಯಮಿತವಾಗಿ ಕೆಲಸಕ್ಕೆ ಹೋಗುವವರಾಗಿದ್ದರೆ ಅವರಿಗೆ ಬಾಡಿಗೆ ಕೊಠಡಿಗಳು ದೊರೆಯುವವರೆಗೆ ಇಂತಹ ಕೇಂದ್ರಗಳಲ್ಲಿ ಆಶ್ರಯ ಪಡೆಯುವವರೂ ಇದ್ದಾರೆ. ಅಲೆಮಾರಿ ಸ್ವಭಾವದವರಾಗಿದ್ದರೆ ಅವರು ಆಶ್ರಯ ಕೇಂದ್ರಗಳಿಂದ ಕೆಲವೇ ದಿನಗಳಲ್ಲಿ ತೆರಳುತ್ತಾರೆ. ಇಲ್ಲಿ ಆಶ್ರಯ ಪಡೆಯುವವರು ಮಾನಸಿಕ ರೋಗಿಗಳಾಗಿರಬಾರದು, ಕುಡಿತದ ಚಟ ಹೊಂದಿರಬಾರದು.

ಬಂದರಿನಲ್ಲಿರುವ ಆಶ್ರಯ ಕೇಂದ್ರಕ್ಕೆ ಕೆಲವೊಮ್ಮೆ ಪೊಲೀಸರು ಕೂಡ ನಿರಾಶ್ರಿತರನ್ನು ಕರೆತರುತ್ತಾರೆ. ಮೀನುಗಾರಿಕೆಯಲ್ಲಿ ತೊಡಗಿ ಕೊಂಡವರು ಕೂಡ ರಾತ್ರಿ ಕಳೆಯಲು ಬರುತ್ತಾರೆ. ವೆನಾÉಕ್‌ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಕಡೆಯವರೂ ಇಲ್ಲಿ ಆಶ್ರಯ ಪಡೆಯುತ್ತಾರೆ. ಇಲ್ಲಿ ಅಂಗವಿಕಲರಿಗೂ ಪ್ರತ್ಯೇಕವಾದ ಡಾರ್ಮಿಟರಿ ಇದೆ.

ಈ ಆಶ್ರಯ ಕೇಂದ್ರಗಳು ಮನೆಯಂತೆಯೇ ಇರಬೇಕು ಎಂಬ ಉದ್ದೇಶದಿಂದ ಸುವ್ಯವಸ್ಥೆ, ನಿಯಮ ಗಳಿಗೂ ಆದ್ಯತೆ ನೀಡಲಾಗುತ್ತಿದೆ. ಅಗತ್ಯ ಇದ್ದವರಿಗೆ ಸುಮಾರು 15 ದಿನಗಳಿಗೊಮ್ಮೆ ವೆನಾÉಕ್‌ ಆಸ್ಪತ್ರೆಯ ತಜ್ಞರಿಂದ ಆಪ್ತ ಸಮಾಲೋಚನೆ ಕೂಡ ಮಾಡಿಸಲಾಗುತ್ತದೆ.

ಹೊರ ಜಿಲ್ಲೆಯವರಿಗೂ ಆಶ್ರಯ
ಕೂಲಿ ಕೆಲಸ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಮಲಗುವವರಿಗೆ ಆಶ್ರಯ ಒದಗಿಸಲಾಗುತ್ತಿದೆ. ಬಂದರಿನಲ್ಲಿರುವ ಆಶ್ರಯ ಕೇಂದ್ರದಲ್ಲಿ ಕಾರವಾರ, ಗೋವಾ, ಯಲ್ಲಾಪುರ, ಮೈಸೂರು, ಸಕಲೇಶಪುರ, ಬೆಂಗಳೂರು, ಕಾಸರಗೋಡಿನವರೂ ಇದ್ದಾರೆ. ಅಗತ್ಯ ಇರುವವರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲು ಪಾಲಿಕೆಯ ಜತೆಗೆ ಆಗಾಗ್ಗೆ ರ್ಯಾಪಿಡ್‌ ಸರ್ವೆ ಮಾಡಿ ಇಂತಹ ನಿರಾಶ್ರಿತರನ್ನು ಗುರುತಿಸುತ್ತೇವೆ.
 - ಎನ್‌.ಪಿ. ಶೆಣೈ,”ಸುವರ್ಣ ಕರ್ನಾಟಕ’ ಎನ್‌ಜಿಒ ಅಧ್ಯಕ್ಷರು

ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ
ಬಂದರಿನಲ್ಲಿರುವ ಆಶ್ರಯ ಕೇಂದ್ರದಲ್ಲಿ ಪ್ರಸ್ತುತ 25 ಮಂದಿ ಇದ್ದಾರೆ. ಅಲ್ಲಿ 75ರಷ್ಟು ಮಂದಿ ಆಶ್ರಯ ಪಡೆಯಲು ಅವಕಾಶವಿದೆ. ಹಾಗಾಗಿ ಉರ್ವ ಮಾರ್ಕೆಟ್‌ನಲ್ಲಿರುವ ನಿರಾಶ್ರಿತರನ್ನು ಬಂದರ್‌ಗೆ ವರ್ಗಾಯಿಸಿ ಉರ್ವದ ಕೇಂದ್ರವನ್ನು ಮಹಿಳೆಯರಿಗೆ ಮೀಸಲಿಡಲು, ಅದರ ನಿರ್ವಹಣೆಯನ್ನು ಸರಕಾರೇತರ ಸಂಸ್ಥೆಗೆ ವಹಿಸಲು ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ನಗರದಲ್ಲಿ 15ಕ್ಕೂ ಅಧಿಕ ಮಂದಿ ನಿರಾಶ್ರಿತ ಮಹಿಳೆಯರನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಲಾಗಿದೆ.
 - ಚಿತ್ತರಂಜನ್‌, ಡೇ ನಲ್ಮ್ ಯೋಜನೆ ಮೇಲ್ವಿಚಾರಕರು

ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.