ರಾ. ಹಿರಿಯರ ಆ್ಯತ್ಲೆಟಿಕ್ಸ್: ಮಹಾರಾಷ್ಟ್ರಕ್ಕೆ ಪ್ರಶಸ್ತಿ
Team Udayavani, Apr 16, 2018, 11:52 AM IST
ಮಂಗಳೂರು: ಭಾರತ ಕಿರಿಯರ ಆ್ಯತ್ಲೆಟಿಕ್ ಫೆಡರೇಶನ್ (ಇಂಡಿಯನ್ ಮಾಸ್ಟರ್ ಆ್ಯತ್ಲೆಟಿಕ್ಸ್)ನ
ಅನುಮೋದನೆಯೊಂದಿಗೆ ದ.ಕ. ಜಿಲ್ಲಾ ಹಿರಿಯರ ಆ್ಯತ್ಲೆಟಿಕ್ ಅಸೋಸಿಯೇಶನ್ ಮತ್ತು ಕರ್ನಾಟಕ ರಾಜ್ಯ
ಹಿರಿಯರ ಆ್ಯತ್ಲೆಟಿಕ್ ಅಸೋಸಿಯೇಶನ್‌ನ ಜಂಟಿ ಸಹಯೋಗದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ 38ನೇ ರಾಷ್ಟ್ರೀಯ ಹಿರಿಯರ ಆ್ಯತ್ಲೆಟಿಕ್ ಕ್ರೀಡಾಕೂಟದಲ್ಲಿ ಮಹಾರಾಷ್ಟ್ರ ಪ್ರಶಸ್ತಿ ಜಯಿಸಿದ್ದರೆ ಕರ್ನಾಟಕ ರನ್ನರ್ ಅಪ್ ಸ್ಥಾನ ಪಡೆದಿದೆ.
ನಾಲ್ಕು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಕರ್ನಾಟಕ ಸಹಿತ ವಿವಿಧ ರಾಜ್ಯಗಳ 1,600 ಹಿರಿಯ ಆ್ಯತ್ಲೀಟ್‌ಗಳು ಭಾಗವಹಿಸಿದ್ದರು. 400ಕ್ಕೂ ಹೆಚ್ಚು ವಿಭಾಗಗಳಲ್ಲಿ ಸ್ಪರ್ಧೆ ನಡೆದಿವೆ. ವಿಶೇಷ ಆಮಂತ್ರಿತರಾಗಿ ಶ್ರೀಲಂಕಾದ 47 ಆ್ಯತ್ಲೀಟ್‌ಗಳು ಭಾಗ ವಹಿಸಿದ್ದು ವಿಶೇಷವಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಚೇರ್ಮನ್ ಸದಾನಂದ ಶೆಟ್ಟಿ ಮಾತನಾಡಿ, ಈ ಬಾರಿಯ ಕ್ರೀಡಾಕೂಟ ಮಂಗಳೂರಿನಲ್ಲಿ ನಡೆದಿದ್ದು ಹೆಮ್ಮೆಯ ವಿಷಯ. ಇದರೊಂದಿಗೆ ಮಂಗಳೂರಿನಲ್ಲಿಯೂ ಸಮರ್ಥವಾಗಿ ಕ್ರೀಡಾಕೂಟಗಳನ್ನು ಆಯೋಜಿಸಬಹುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಇಂಡಿಯನ್ ಮಾಸ್ಟರ್ ಆ್ಯತ್ಲೆಟಿಕ್‌ನ ಚೇರ್ಮನ್ ಅಮರೇಂದ್ರ ರೆಡ್ಡಿ, ಐ.ಎಂ.ಎ. ಹಿರಿಯ ಉಪಾಧ್ಯಕ್ಷ ಧರ್ಮಪಾಲ ಶರ್ಮ, ಸಂಘಟನಾ ಸಮಿತಿಯ ಅಧ್ಯಕ್ಷ ಕೆ.ತೇಜೋಮಯ, ದ. ಕ. ಮಾಸ್ಟರ್ ಆ್ಯತ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಕೆ.ಎಸ್.ಕೋದಂಡ ರಾಮೇಗೌಡ, ಇಂಡಿಯಾ ಮಾಸ್ಟರ್ ಆ್ಯತ್ಲೆಟಿಕ್‌ನ ಕಾರ್ಯದರ್ಶಿ ಜೆರಾಲ್ಡ್ ಡಿ”ಸೋಜಾ, ಸಂಘಟನಾ ಕಾರ್ಯದರ್ಶಿ ರೈಮಂಡ್ ಡಿ”ಸೋಜಾ ಉಪಸ್ಥಿತರಿದ್ದರು.
ಏಷ್ಯನ್ ಆ್ಯತ್ಲೆಟಿಕ್ಸ್‌ಗೆ ಆಯ್ಕೆ
ಈ ಕ್ರೀಡಾಕೂಟದಲ್ಲಿ ವಿಜೇತರಾದ ಆ್ಯತ್ಲೀಟ್‌ಗಳು ಮುಂದಿನ ಆಗಸ್ಟ್ 18, 19ರಂದು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯನ್ ಮಾಸ್ಟರ್ ಆ್ಯತ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.