ರೇಬಿಸ್ ಭಯಾನಕ; ಜಾಗೃತಿ ಅಗತ್ಯ: ಡಾ| ಸೆಲ್ವಮಣಿ
Team Udayavani, Oct 4, 2019, 5:00 AM IST
ಮಂಗಳೂರು: ರೇಬಿಸ್ ರೋಗವು ಡೆಂಗ್ಯೂ, ಮಲೇರಿಯಾಕ್ಕಿಂತಲೂ ಭಯಾನಕವಾಗಿದ್ದು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ತೀರಾ ಅಗತ್ಯ ಎಂದು ದ.ಕ ಜಿಲ್ಲಾ ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಆರ್. ಸೆಲ್ವಮಣಿ ಹೇಳಿದರು.
ಜಿ.ಪಂ., ಪಶು ಸಂಗೋಪನಾ ಇಲಾಖೆ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯ ಮಿತ ಮಂಗಳೂರು, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ವಿಶ್ವ ರೇಬಿಸ್ ದಿನಾಚರಣೆ ಹಾಗೂ ತಾಂತ್ರಿಕ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಬೇರೆ ಬೇರೆ ಇಲಾಖೆಗಳ ಸಹಭಾಗಿತ್ವದಲ್ಲಿ ಸಾಮಾಜಿಕ ಕಾಳಜಿಯುಳ್ಳ ಸರಕಾರೇತರ ಸಂಸ್ಥೆಗಳ ಮೂಲಕ ಇಂತಹ ರೋಗಗಳ ಬಗ್ಗೆ ಜಾಗೃತಿ ಮೂಡಿಸಬೇಕು. ನವೆಂಬರ್‌ನಲ್ಲಿ ಇಂತಹ ರೋಗಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಬಗ್ಗೆ ಪ್ರತಿ ತಾ.ಪಂ.ವ್ಯಾಪ್ತಿಯಲ್ಲಿ ಕಾರ್ಯಾಗಾರ ಮಾಡಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ಸಲಹೆ ನೀಡಿದರು.
ವಾರ್ಷಿಕ 70 ಸಾವಿರ ಸಾವು
ಡಾ| ಎನ್.ಎಲ್. ಗಂಗಾಧರ್ ಮಾತನಾಡಿ, ವಿಶ್ವ ಆರೋಗ್ಯ ಅಂಗ ಸಂಸ್ಥೆಯ ಸಮೀಕ್ಷೆ ಪ್ರಕಾರ ವಿಶ್ವದಲ್ಲೇ ಪ್ರತೀವರ್ಷ 70 ಸಾವಿರ ಜನರು ಮಾರಕ ರೇಬಿಸ್‌ಗೆ ತುತ್ತಾಗಿ ಸಾವಿಗೀಡಾಗುತ್ತಾರೆ. ಭಾರತ ದೇಶದಲ್ಲಿ ಶೇ. 96ರಷ್ಟು ಜನರಿಗೆ ರೇಬಿಸ್ ಸೋಂಕು ತಗಲುವುದು ಬೀದಿನಾಯಿಗಳಿಂದ. ಭಾರತ ದಲ್ಲಿ ಉಂಟಾಗುವ ರೇಬಿಸ್ ಸೋಂಕು ಮತ್ತು ಸಾವುನೋವುಗಳ ಅರ್ಧದಷ್ಟು ಕರ್ನಾಟಕ, ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ ರೇಬಿಸ್‌ನಿಂದ ಬಳಲುತ್ತಿದ್ದಾರೆ ಎಂದರು. ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ| ಜಯರಾಜ್, ಮೀನುಗಾರಿಕೆ ಕಾಲೇಜು ನಿವೃತ್ತ ಡೀನ್ ಡಾ| ಶಿವಪ್ರಸಾದ್, ಡಾ| ರಾಜಣ್ಣ ಉಪಸ್ಥಿತರಿದ್ದರು. ಕೊಡಿಯಾಲಬೈಲ್ ಪಶುಪಾಲನೆ ಆಸ್ಪತ್ರೆಯಲ್ಲಿ ವಿಶ್ವ ರೇಬಿಸ್ ದಿನದ ಅಂಗವಾಗಿ ಶ್ವಾನಗಳಿಗೆ ಉಚಿತ ಲಸಿಕೆ ನೀಡಲಾಯಿತು. ಮಂಗಳೂರು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಾಯಿ ಕಡಿದರೆ ನಿರ್ಲಕ್ಷಿಸದಿರಿ
ಪಶುಪಾಲನ ಸೇವಾ ಇಲಾಖೆ ಜಂಟಿ ನಿರ್ದೇಶಕ ಡಾ| ಕೆ.ವಿ. ಹಲಗಪ್ಪ ಮಾತನಾಡಿ, ರೇಬಿಸ್ ಪ್ರಾಣಿ ಗಳಿಂದ ಮಾನವರಿಗೆ ಹರಡುವ ಮಾರಕ ಕಾಯಿಲೆ. ಹಾಗಾಗಿ ಸಾರ್ವಜನಿಕರಲ್ಲಿ ಜಾಗೃತಿ ತುಂಬಾ ಮುಖ್ಯ. ನಾಯಿ ಕಚ್ಚಿ ದಾಗ ನಿರ್ಲಕ್ಷé ತೋರಿದರೆ ಭಯಾನಕ ರೇಬಿಸ್‌ಗೆ ತುತ್ತಾ ಗುವ ಸಾಧ್ಯತೆ ಹೆಚ್ಚು. ಆದ್ದರಿಂದ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು. ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಜನರು ಜಾಗೃತಿರಾಗಿದ್ದಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.