ಉಭಯ ತಾಲೂಕಿಗೆ ರಾಹುಲ್ ಭೇಟಿ
Team Udayavani, Apr 28, 2018, 8:00 AM IST
ಬಂಟ್ವಾಳ: ಬಿ.ಸಿ. ರೋಡ್ ಗೋಲ್ಡನ್ ಮೈದಾನದಲ್ಲಿ ಎ. 27ರಂದು ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದರು. ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಸಹಿತ ಮುಖಂಡರು ಉಪಸ್ಥತರಿದ್ದರು. ರಾಹುಲ್ ಗಾಂಧಿ ಭಾಷಣ ಮುಗಿದು ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆಗಮಿಸಿದರು. ವೇದಿಕೆಯಲ್ಲಿ ಸ್ವತಃ ರಾಹುಲ್ ಗಾಂಧಿ ಮುಂದೆ ಬಂದು ಪೂಜಾರಿ ಅವರ ಕೈಹಿಡಿದು ಆಸನದಲ್ಲಿ ಕುಳ್ಳಿರಿಸಿ ಅವರಲ್ಲಿ ಮಾತನಾಡಿದರು. ರಾಹುಲ್ ಆಗಮಿಸುವ ಮೊದಲು ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ಬಾಲಕೃಷ್ಣ ಆಳ್ವ ಕೊಡಾಜೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು.
ಅಭ್ಯರ್ಥಿಗಳಿಗೆ ಪ್ರತ್ಯೇಕ ವೇದಿಕೆ
ಮುಖ್ಯ ವೇದಿಕೆಯ ಎದುರು ಭಾಗದಲ್ಲಿ ನಿರ್ಮಿ ಸಿದ ಕಿರು ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ. ರಮಾನಾಥ ರೈ, ಶಕುಂತಳಾ ಟಿ. ಶೆಟ್ಟಿ, ಡಾ| ರಘು, ಮೊದಿನ್ ಬಾವ, ಯು.ಟಿ. ಖಾದರ್, ಎಸ್.ಆರ್. ಲೋಬೊ ಉಪಸ್ಥಿತರಿದ್ದರು. ಮೂಡಬಿದಿರೆ ಅಭ್ಯರ್ಥಿ ಉಪಸ್ಥಿತರಿರಲಿಲ್ಲ.
ಬಿಗು ಬಂದೋಬಸ್ತ್
ರಾ.ಹೆ.ಯಲ್ಲಿ ಬಿಗು ಬಂದೋ ಬಸ್ತ್ ಮಾಡಲಾಗಿತ್ತು. ವಿವಿಧೆಡೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಹೆಚ್ಚುವರಿ ಪೊಲೀಸರು, ಅರೆಸೇನಾ ಪಡೆಯ ಸಿಬಂದಿಯನ್ನು ನಿಯೋಜಿಸಲಾಗಿತ್ತು. ಬಾಂಬ್ ತಪಾಸಣೆ ದ್ವಾರವನ್ನು ಅಳವಡಿಸಲಾಗಿತ್ತು.
ಗುರುತಿನ ಚೀಟಿ
ವೇದಿಕೆಯಿಂದ ಸಾಕಷ್ಟು ದೂರದಲ್ಲಿ ಪತ್ರಕರ್ತರು, ಕೆಮರಾಮೆನ್‌ಗಳಿಗೆ ಅವಕಾಶ ಮಾಡಲಾಗಿತ್ತು. ನಿರ್ದಿಷ್ಟ ಬಣ್ಣದ ಗುರುತು ಪತ್ರವಿದ್ದ ಪಕ್ಷದ ಪ್ರಮುಖರಿಗೆ ಮಾತ್ರ ವೇದಿಕೆಗೆ ಏರುವ ಅವಕಾಶ ನೀಡಲಾಗಿತ್ತು. ಸುರಕ್ಷಾ ಸಿಬಂದಿಗೆ, ಪತ್ರಕರ್ತರಿಗೆ, ಪಕ್ಷ ನಾಯಕರಿಗೆ, ಕಾರ್ಯಕರ್ತರಿಗೆ, ವ್ಯವಸ್ಥಾಪಕರಿಗೆ ಪ್ರತ್ಯೇಕ ಬಣ್ಣದ ಗುರುತು ಪತ್ರ ನೀಡಲಾಗಿತ್ತು. ಸಭೆಗೆ ಕುಡಿಯುವ ನೀರು, ಮಜ್ಜಿಗೆ ಪ್ಯಾಕೆಟ್ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.