ಅಕ್ರಮ ಮಸಾಜ್ ಸೆಂಟರ್, ಸ್ಕಿಲ್ ಗೇಮ್ ಕ್ಲಬ್‌ಗಳಿಗೆ ಮೇಯರ್ ದಾಳಿ
Team Udayavani, Jul 12, 2017, 4:30 AM IST
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿದ್ದ ಮಸಾಜ್ ಸೆಂಟರ್ ಹಾಗೂ ಸ್ಕಿಲ್‌ಗೇಮ್ ಕ್ಲಬ್‌ಗಳಿಗೆ ಪಾಲಿಕೆ ಮೇಯರ್ ಕವಿತಾ ಸನಿಲ್ ಮಂಗಳವಾರ ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿ ಬೀಗ ಹಾಕಿಸಿದರು. ಮೇಯರ್ ಅವರು ಅಧಿಕಾರಿಗಳ ಜತೆಗೆ ಕದ್ರಿ ಕಂಬಳ ರಸ್ತೆ ಬಳಿಯಿಂದ ಬಿಜೈ ಚರ್ಚ್ ರೋಡ್ ಸಂಪರ್ಕಿಸುವ ರಸ್ತೆ, ಬಲ್ಮಠ ಸಹಿತ ಸುಮಾರು ನಾಲ್ಕೈದು ಮಸಾಜ್ ಸೆಂಟರ್ ಹಾಗೂ ಸ್ಕಿಲ್‌ಗೇಮ್ ಕ್ಲಬ್‌ಗಳ ಮೇಲೆ ಏಕಾಏಕಿ ದಾಳಿ ನಡೆಸಿದರು. ಈ ವೇಳೆ ಅನೇಕ ಪಾರ್ಲರ್‌ಗಳಲ್ಲಿ ಗ್ರಾಹಕರು ಅರೆಬೆತ್ತಲೆಯಾಗಿ ಮಸಾಜ್ ಮಾಡಿಸುತ್ತಿದ್ದು, ಮೇಯರ್ ದಾಳಿ ಮಾಡುತ್ತಿದ್ದಂತೆ ತುಂಡು ಉಡುಗೆಯಲ್ಲೇ ಎದ್ದು – ಬಿದ್ದು ಓಡಿ ಹೋದರು. ಆಯುರ್ವೇದಿಕ್ ಮಸಾಜ್ ಸೆಂಟರ್ ಹೆಸರಿನಲ್ಲಿ ನಗರದ ವಿವಿಧೆಡೆ ಕಾರ್ಯಾಚರಿಸುತ್ತಿದ್ದ ಈ ಮಸಾಜ್ ಸೆಂಟರ್‌ಗಳಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಂದ ಜಿಲ್ಲೆಯ ಹಾಗೂ ಹೊರರಾಜ್ಯದ ಯುವಕರಿಂದ ಹಿಡಿದು ವಯಸ್ಸಾದ ಹಿರಿಯರು ಕೂಡ ಮಸಾಜ್ ಮಾಡಿಸಿಕೊಳ್ಳುವುದು ದಾಳಿಯ ಮೂಲಕ ಬೆಳಕಿಗೆ ಬಂದಿದೆ.
ಮಸಾಜ್ ಸೆಂಟರ್‌ನಲ್ಲಿ ಹದಿಹರೆಯದ ಹೆಣ್ಣು ಮಕ್ಕಳು
ಮಾಧ್ಯಮದವರ ಜತೆ ಮೇಯರ್, ಪಾಲಿಕೆ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಹಾಗೂ ಇತರ ಅಧಿಕಾರಿಗಳು ಕದ್ರಿ ಕಂಬಳ ರಸ್ತೆ ಬಳಿಯಿಂದ ಬಿಜೈ ಚರ್ಚ್ ರೋಡ್ ಸಂಪರ್ಕಿಸುವ ರಸ್ತೆಯಲ್ಲಿರುವ ಮಸಾಜ್ ಸೆಂಟರ್‌ವೊಂದಕ್ಕೆ ದಾಳಿ ನಡೆಸಿದಾಗ ಅದರೊಳಗೆ ಯುವತಿಯರು ಇದ್ದರು. ಆಗ ಕೆಲವು ಮಂದಿ ಸಿಕ್ಕಸಿಕ್ಕಲ್ಲೆಲ್ಲ ಓಡಿ ಹೋಗುವುದು ಕಂಡುಬಂದಿತು. ಸೆಂಟರ್ ಮಾಲಕರಿಗೆ ಎಚ್ಚರಿಕೆ ಸಂದೇಶ ನೀಡಿದ ಮೇಯರ್ ಬಳಿಕ ಬೀಗ ಹಾಕಿಸಿದರು.
ಸ್ಕಿಲ್‌ಗೇಮ್ ಕ್ಲಬ್ ಮಾಲಕಿಯನ್ನು ಪೊಲೀಸರು ಕ್ಲಬ್‌ನಿಂದ ಹೊರಗೆ ಕಳುಹಿಸಿದರು.
ಅನಂತರ ಬಲ್ಮಠದಿಂದ ಆರ್ಯ ಸಮಾಜ ಸೇರುವ ರಸ್ತೆಯ ಬಳಿಯಿದ್ದ ಮಸಾಜ್ ಸೆಂಟರ್‌ಗೆ ದಾಳಿ ಮಾಡಿದರು; ಆದರೆ ಅಲ್ಲಿ ಬೀಗ ಹಾಕಲಾಗಿತ್ತು. ಆ ಬಳಿಕ ಬಲ್ಮಠದಿಂದ ಕಂಕನಾಡಿಗೆ ತೆರಳುವ ರಸ್ತೆಯ ಬಳಿ ಕಾರ್ಯಾಚರಿಸುತ್ತಿದ್ದ ಮಸಾಜ್ ಸೆಂಟರ್‌ಗಳಿಗೆ ಹೋದರೂ ಅವುಗಳ ಬಾಗಿಲು ಮುಚ್ಚಲಾಗಿತ್ತು. ಆದರೆ ಇದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಇನ್ನೊಂದು ಯುನಿಸೆಕ್ಸ್ ಸೆಲೂನ್ ಹಾಗೂ ಸ್ಪಾ ಸೆಂಟರ್‌ನಲ್ಲಿ ಹೊರರಾಜ್ಯದ ಕೆಲವು ಮಂದಿ ಹಾಗೂ ಅಪ್ರಾಪ್ತ ವಯಸ್ಕ ಯುವತಿಯರಿರುವುದು ಕಂಡುಬಂದಿತ್ತು. ಸ್ಪಾ ಮಾಲಕ ಮೇಯರ್ ಜತೆ ವಾಗ್ವಾದ ನಡೆಸಿದರು. ಕೊನೆಗೂ ಪಾರ್ಲರ್‌ಗೆ ಬೀಗ ಹಾಕಿಸುವಲ್ಲಿ ಮೇಯರ್ ಯಶಸ್ವಿಯಾದರು.
ಪಾಲಿಕೆ ಯಾವ ಲೆಕ್ಕ?
ಬಲ್ಮಠ – ಫಳ್ನೀರ್ ಸಂಪರ್ಕ ರಸ್ತೆಯ ಬಳಿ ಬೃಹತ್ ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದ ಸ್ಕಿಲ್‌ಗೇಮ್ ಕ್ಲಬ್‌ವೊಂದಕ್ಕೆ ಮೇಯರ್ ಕವಿತಾ ಸನಿಲ್ ಅಧಿಕಾರಿಗಳ ಸಮೇತ ದಾಳಿ ಮಾಡಿದರು. ಈ ವೇಳೆ ಸ್ಕಿಲ್‌ಗೇಮ್ ಕ್ಲಬ್ ನಡೆಸಲು ಲೈಸನ್ಸ್ ಕೇಳಿದಾಗ, ಮೊದಲಿಗೆ ಲೈಸನ್ಸ್ ನವೀಕರಣಕ್ಕೆ ನೀಡಲಾಗಿದೆ ಎಂದು ಉತ್ತರಿಸಿದ ಸೆಂಟರ್‌ನ ಮಾಲಕಿ ಬಳಿಕ, ‘ತಮಗೆ ಹೈಕೋರ್ಟ್ ಆದೇಶವಿದೆ, ಲೈಸನ್ಸ್ ಅಗತ್ಯವಿಲ್ಲ. ಈ ಕ್ಲಬ್ ನಿಲ್ಲುವುದಿಲ್ಲ. ಬೀಗವೂ ಹಾಕುವುದಿಲ್ಲ. ಪೊಲೀಸ್ ಇಲಾಖೆಯನ್ನೇ ನೋಡಿಕೊಳ್ಳುತ್ತಿದ್ದೇವೆ. ಇನ್ನು ನೀವು ಯಾವ ಲೆಕ್ಕ. ತಾಕತ್ತಿದ್ದಲ್ಲಿ ಬಂದು ಮಾಡಿಸಿ’ ಎಂದು ಸವಾಲು ಹಾಕಿದರು.
ಮಸಾಜ್ ಸೆಂಟರ್ ದಾಳಿಯ ವೇಳೆ ಸಿಕ್ಕಿಬಿದ್ದ ಗ್ರಾಹಕ.
ಇದಕ್ಕೆ ಸೂಕ್ತ ಉತ್ತರ ನೀಡಿದ ಮೇಯರ್ ಬಳಿಕ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಬರುವವರೆಗೆ ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಪೊಲೀಸರು ಬಂದು ಆಕೆಯನ್ನು ಕ್ಲಬ್‌ನಿಂದ ಹೊರಗೆ ಹೋಗುವಂತೆ ಮಾಡಿದ ಬಳಿಕ ಸ್ಕಿಲ್‌ಗೇಮ್ ಕ್ಲಬ್‌ಗೆ ಬೀಗ ಹಾಕಿಸಿ ಸೀಲ್ ಮಾಡಿಸಲಾಯಿತು. ದಕ್ಷಿಣ ವಿಭಾಗದ ಎಸಿಪಿ ಶೃತಿ ಅವರ ಮೂಲಕ ಮಹಿಳಾ ಪೊಲೀಸ್ ಸಿಬಂದಿಗಳ ಸಹಾಯದಿಂದ ಕ್ಲಬ್ ಮಾಲಕಿಯನ್ನು ಹೊರಗೆ ಹೋಗುವಂತೆ ಮಾಡಲಾಯಿತು.
ಮುಕ್ಕಾಲು ಗಂಟೆಯ ಬಳಿಕ ಬಂದ ಪೊಲೀಸ್
ಸ್ಕಿಲ್‌ಗೇಮ್ ಕ್ಲಬ್ ಮಾಲಕಿಯ ಉದ್ಧಟನ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ತುತ್ಛವಾಗಿ ಮಾತನಾಡಿದ ಬಗ್ಗೆ ಮೇಯರ್ ಪೊಲೀಸ್ ಆಯುಕ್ತರಲ್ಲಿ ದೂರು ನೀಡಿ ಅಧಿಕಾರಿಗಳನ್ನು ಸ್ಥಳಕ್ಕೆ ಬರಿಸುವಂತೆ ಸೂಚಿಸಿದ್ದರೂ ಸುಮಾರು ಮುಕ್ಕಾಲು ಗಂಟೆಯ ಬಳಿಕ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಪೊಲೀಸ್ ಇಲಾಖೆಗೆ 2 ಲಕ್ಷ ರೂ.?
ದಾಳಿ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸ್ಕಿಲ್‌ಗೇಮ್ ಕ್ಲಬ್‌ನ ಮಾಲಕಿ ‘ಪೊಲೀಸ್ ಠಾಣೆಗೆ ಪ್ರತೀ ತಿಂಗಳು 2 ಲಕ್ಷ ರೂ. ನೀಡುತ್ತಿದ್ದೇವೆ. ಬರುವ ಆದಾಯದಲ್ಲಿ 2 ಲಕ್ಷ ರೂ. ಪೊಲೀಸರಿಗೆ, ಸುಮಾರು 1.50 ಲಕ್ಷ ರೂ. ಖರ್ಚುವೆಚ್ಚ ಹಾಗೂ ಮಿಕ್ಕಿ 3 ಲಕ್ಷ ರೂ. ಲಾಭವಾಗುತ್ತದೆ.ಈ ಹಿಂದೆ ಪೊಲೀಸರು ಕೂಡ ದಾಖಲೆ ನೋಡಿ ಕ್ಲಬ್ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ ಎಂಬುದಾಗಿ ಪೊಲೀಸರ ಮೇಲೆಯೇ ಆರೋಪ ಮಾಡಿದರು.
ಕೋರ್ಟ್‌ನಲ್ಲಿ 2 ಪ್ರಕರಣ, 3 ಬಾರಿ ನೋಟಿಸ್
ಸ್ಕಿಲ್‌ಗೇಮ್ ಕ್ಲಬ್ ಮಾಲಕಿಯ ಆರೋಪಕ್ಕೆ ಉತ್ತರಿಸಿದ ಡಿಸಿಪಿ ಶಾಂತರಾಜು, ಎಸಿಪಿ ಉದಯನಾಯಕ್ ಹಾಗೂ ಪಾಂಡೇಶ್ವರ ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ ಅವರು, ಆಕೆಯ ಆರೋಪ ಒಪ್ಪುವಂತದಲ್ಲ. ಈಗಾಗಲೇ ನಾವು ಈ ಸ್ಕಿಲ್‌ಗೇಮ್ ಸೆಂಟರ್ ಮೇಲೆ ದಾಖಲಿಸಿದ ಪ್ರಕರಣ ಇನ್ನೂ ಕೋರ್ಟ್‌ನಲ್ಲಿದೆ. ಈ ಹಿಂದೆ ಮಹಾನಗರ ಪಾಲಿಕೆಗೆ ಈ ಸ್ಕಿಲ್‌ಗೇಮ್ ಕ್ಲಬ್‌ನ ಪರವಾನಿಗೆ ರದ್ದುಗೊಳಿಸಲು 3 ಬಾರಿ ಪತ್ರ ಬರೆಯಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಯಾರಾದರೂ ದೂರು ದಾಖಲಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಆದರೆ, ದಾಳಿ ನಡೆಸಿದರೂ ಯಾರೂ ಪೊಲೀಸರ ಬಳಿ ದೂರು ದಾಖಲಿಸುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಲೈಸನ್ಸ್ ಪಡೆಯದೆ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ವ್ಯಾಪಾರ ನಡೆಸುವುದು ಕಾನೂನು ಬಾಹಿರ. ಮಸಾಜ್ ಸೆಂಟರ್‌ಗಳಿಗೆ ಪಾಲಿಕೆಯಲ್ಲಿ ಅನುಮತಿಯಿಲ್ಲ. ಆದರೂ ವೈದ್ಯರ ಸರ್ಟಿಫಿಕೇಟ್ ಪಡೆದು ಯಾವುದೋ ಉದ್ದೇಶ ತಿಳಿಸಿ ಮಸಾಜ್ ಸೆಂಟರ್ ತೆರೆಯಲಾಗುತ್ತಿದೆ. ಸ್ಕಿಲ್‌ಗೇಮ್ ಕ್ಲಬ್ ಪ್ರಾರಂಭಿಸಲೂ ನಿಯಮಗಳಿದ್ದು, ಪಾಲಿಕೆಯಿಂದ ಅನುಮತಿ ಕಡ್ಡಾಯ. ಚಂದ್ರಶೇಖರ್ ಅವರು ಪೊಲೀಸ್ ಆಯುಕ್ತರಾಗಿದ್ದಾಗ ಇದಕ್ಕೆಲ್ಲ ಕಡಿವಾಣ ಬಿದ್ದಿತ್ತು. ಆದರೆ, ಪ್ರಸ್ತುತ ಇವುಗಳೆಲ್ಲ ಮತ್ತೆ ಬಾಲ ಬಿಚ್ಚಿವೆ. ಪೊಲೀಸ್ ಇಲಾಖೆ ಇವುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಯುವಕರು ದಾರಿ ತಪ್ಪುವುದು ತಪ್ಪಿಸಬೇಕು.
– ಕವಿತಾ ಸನಿಲ್, ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.