ರೈಲ್ವೇ ಟಿಕೆಟ್ ತಪಾಸಣೆ: 661 ಮಂದಿ ಪತ್ತೆ; ಎರಡು ಲಕ್ಷ ರೂ. ದಂಡ ವಸೂಲಿ
Team Udayavani, Mar 2, 2020, 7:30 AM IST
ಮಂಗಳೂರು: ರೈಲ್ವೇ ಟಿಕೆಟ್ ತಪಾಸಣ ಅಧಿಕಾರಿಗಳು ಮಂಗಳೂರು- ಕಣ್ಣೂರು ನಡುವಣ ಪ್ರಯಾಣಿಕರಿಗೆ ಸಂಬಂಧಿಸಿ ಫೆ. 26 ಮತ್ತು 27ರಂದು ದಿಢೀರ್ ತಪಾಸಣೆ ನಡೆಸಿ 661 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ 2,12, 690 ರೂ. ದಂಡ ವಸೂಲಿ ಮಾಡಿದ್ದಾರೆ.
ಮಂಗಳೂರು ಸೆಂಟ್ರಲ್ ನಿಲ್ದಾಣ ದಲ್ಲಿಯೇ 218 ಪ್ರಕರಣಗಳು ಪತ್ತೆ ಯಾಗಿದ್ದು, 67,445 ರೂ. ದಂಡ ವಸೂಲಿಯಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಮಲಬಾರ್ ಎಕ್ಸ್‌ಪ್ರೆಸ್, ತಿರುವನಂತಪುರ ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರು ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ.
ಮಂಗಳೂರು- ಕಣ್ಣೂರು ವಿಭಾಗದಲ್ಲಿ ರೈಲು ಟಿಕೆಟ್ ಮಾರಾಟದಲ್ಲಿ ಏಕಾಏಕಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಹಿರಿಯ ರೈಲ್ವೇ ಅಧಿಕಾರಿ ಪ್ರತಾಪ್ ಸಿಂಗ್ ಶಮಿ ಅವರ ಸೂಚನೆಯ ಮೇರೆಗೆ ಈ ದಿಢೀರ್ ಟಿಕೆಟ್ ತಪಾಸಣೆಯನ್ನು ನಡೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ರೈಲ್ವೇ ಅಧಿಕಾರಿಗಳು, ಇನ್‌ಸ್ಪೆಕ್ಟರ್‌ಗಳು, ರೈಲು ಟಿಕೆಟ್ ತಪಾಸಣ ಸಿಬಂದಿ ಮತ್ತು ರೈಲ್ವೇ ಸುರಕ್ಷತಾ ಪಡೆಯ (ಆರ್‌ಪಿಎಫ್) ಅಧಿಕಾರಿಗಳು ಭಾಗವಹಿಸಿದ್ದರು.
ಟಿಕೆಟ್ ರಹಿತ ಪ್ರಯಾಣಿಕರಿಗೆ ಸೀಸನ್ ಟಿಕೆಟ್ ಅಥವಾ ಮೊಬೈಲ್ ಆ್ಯಪ್ ಬಳಸಿ ಯುಟಿಎಸ್ (ಅನ್‌ರಿಸರ್ವ್‌ಡ್ ಟಿಕೆಟಿಂಗ್ ಸಿಸ್ಟಮ್) ಟಿಕೆಟ್ ಪಡೆದು ಪ್ರಯಾಣಿ ಸುವಂತೆ ಸಲಹೆ ನೀಡಲಾಯಿತು ಎಂದು ಪ್ರಕಟನೆ ವಿವರಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.