ಮಳೆ,ಗಾಳಿ: ಮೆಸ್ಕಾಂಗೆ 2 ಲಕ್ಷ ರೂ. ನಷ್ಟ
Team Udayavani, Jul 21, 2017, 5:15 AM IST
ಹಳೆಯಂಗಡಿ: ಎರಡು ದಿನಗಳಿಂದ ಸುರಿದ ಮಳೆ ಹಾಗೂ ಗಾಳಿಯಿಂದ ಹಳೆಯಂಗಡಿ ಹಾಗೂ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವೆಡೆ ಮರಗಳು ಉರುಳಿ ಅಪಾರ ಹಾನಿ ಯುಂಟಾಗಿದೆ.
ಹಳೆಯಂಗಡಿ ಗ್ರಾ.ಪಂ.ನ ಕೊಪ್ಪಳದಲ್ಲಿ ಬೃಹತ್ ಆಲದ ಮರವೊಂದು ಬುಧವಾರ ರಾತ್ರಿ ಉರುಳಿ ಬಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡು, ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ಗುರುವಾರ ಮರವನ್ನು ತೆರವುಗೊಳಿಸಲಾಯಿತು.ಇಂದಿರಾನಗರದ ಅಂಗನವಾಡಿ ಕೇಂದ್ರದ ಆವರಣ ಗೋಡೆಗೂ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ ಸಹಿತ ಸದಸ್ಯರು ಹಾಗೂ ಪಿಡಿಒ ಅಬೂಬಕ್ಕರ್ ಭೇಟಿ ನೀಡಿದ್ದಾರೆ.
ಪಡು ಪಣಂಬೂರು ಗ್ರಾ.ಪಂ.ವ್ಯಾಪ್ತಿಯ ಬೆಳ್ಳಾಯರು ಕೆರೆ ಕಾಡಿನ ನಿವಾಸಿ ಗಿರಿಜಾ ಲೋಕಯ್ಯ ದೇವಾಡಿಗ ಅವರ ಮನೆಗೆ ಮಾವಿನ ಮರ ಬಿದ್ದಿದೆ.
ಪರಿಣಾಮ ಸುಮಾರು 50 ಸಾವಿರ ರೂ.ನಷ್ಟವಾಗಿದೆ ಎಂದು ಗ್ರಾಮ ಕರಣಿಕ ಮೋಹನ್ ತಿಳಿಸಿದ್ದಾರೆ. ಪಡು ಪ ಣಂಬೂರು ಗ್ರಾ.ಪಂ.ಬಳಿಯ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯುಂಟಾಯಿತು.ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ಮೋಹನ್ ದಾಸ್,ಉಪಾಧ್ಯಕ್ಷೆ ಸುರೇಖಾ,ಸದಸ್ಯರು,ಹಾಗೂ ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಲೋಕನಾಥ ಭಂಡಾರಿ ಭೇಟಿ ನೀಡಿದ್ದಾರೆ.
ಕಿನ್ನಿಗೋಳಿ: ಮೆಸ್ಕಾಂಗೆ ನಷ್ಟ
ಕಿನ್ನಿಗೋಳಿ ಮೆಸ್ಕಾಂ ಸೆಕ್ಷನ್ ಕಚೇರಿ ವ್ಯಾಪ್ತಿಯಲ್ಲಿ ಗುರುವಾರ ಸುರಿದ ಮಳೆ ಗಾಳಿಗೆ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿ ಚಂದ್ರಹಾಸ ತಿಳಿಸಿದ್ದಾರೆ. ಕೆರೆಕಾಡು ಬಸ್ ನಿಲ್ದಾಣ, ಕಟೀಲು, ಎಕ್ಕಾರು ಕೃಷ್ಣ ಮಠ ಹಾಗೂ ಪೊಂಪೈ ಕಾಲೇಜು ಬಳಿ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಮರ ಬಿದ್ದಿದೆ. ಇದರಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಕೂಡಲೇ ದುರಸ್ತಿ ಕಾರ್ಯ ನಡೆಸಿದ್ದರಿಂದ ಮಧ್ಯಾಹ್ನದ ವೇಳೆಗೆ ವಿದ್ಯುತ್ ಸರಬರಾಜು ಮಾಡಲಾಯಿತು.ಕೆಂಚನಕೆರೆ ಬಳಿ ಸರಸ್ವತಿ ಅವರ ಮನೆಯ ಹತ್ತಿರದ ದೂಪದ ಮರವು ಅರ್ಧ ತುಂಡಾಗಿ ಮನೆಯ ಸಮೀಪದ ಬಚ್ಚಲು ಶೆಡ್ ಮೇಲೆ ಬಿದ್ದಿದ್ದು, ಭಾರೀ ಅನಾಹತವೊಂದು ತಪ್ಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.