ನಗರದ ಸರಕಾರಿ ಕಚೇರಿಗಳಲ್ಲಿಯೇ ಇಲ್ಲ ಮಳೆಕೊಯ್ಲು!
Team Udayavani, Jun 10, 2019, 6:10 AM IST
ಮಹಾನಗರ: ನಗರದಲ್ಲಿ ನೀರಿನ ಸಮಸ್ಯೆಗೆ ಪರಿಹಾರೋಪಾಯವಾಗಿ ಮಳೆಕೊಯ್ಲು ವ್ಯವಸ್ಥೆ ಕಡ್ಡಾಯ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಮಾದರಿಯಾಗಬೇಕಾಗಿರುವ ಸರಕಾರಿ ಕಚೇರಿಗಳಲ್ಲೇ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿಲ್ಲ ಎನ್ನುವುದು ವಾಸ್ತವ!
ನಗರದಲ್ಲಿರುವ ಮೂರು ಸರಕಾರಿ ಕಚೇರಿ ಗಳನ್ನು ಹೊರತುಪಡಿಸಿದರೆ, ಉಳಿದಂತೆ ಯಾವುದೇ ಕಚೇರಿಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ ಎನ್ನುವುದು ಗೊತ್ತಾಗಿದೆ. ಅಂದರೆ, ಸರಕಾರಿ ವ್ಯವಸ್ಥೆಯಲ್ಲಿ ಇರುವ ಅಧಿಕಾರಿ ವರ್ಗದವರಿಗೇ ಮಳೆಕೊಯ್ಲು ಬಗ್ಗೆ ಅಷ್ಟೊಂದು ಬದ್ಧತೆ ಅಥವಾ ಇಚ್ಛಾಶಕ್ತಿ ಇಲ್ಲದಿರಬೇಕಾದರೆ, ಜನಸಾಮಾನ್ಯರನ್ನು ಆ ದಿಕ್ಕಿನಲ್ಲಿ ಎಷ್ಟರ ಮಟ್ಟಿಗೆ ಉತ್ತೇಜಿಸಲು ಸಾಧ್ಯ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವುದು ಸಹಜ.
ದ.ಕ. ಜಿಲ್ಲಾಧಿಕಾರಿ ಕಚೇರಿ, ದ.ಕ. ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿ ಕೆಯ ಆವರಣದಲ್ಲಿ ಹಲವು ವರ್ಷಗಳ ಹಿಂದೆಯೇ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇಡೀ ಕಚೇರಿಗಳ ಅಗತ್ಯಕ್ಕೆ ಬೇಸಗೆಯಲ್ಲಿ ಈ ನೀರಿನ ಬಳಕೆ ಆಗುತ್ತದೆ. ಕೆಲವು ಇಲಾಖಾ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿರುವುದರಿಂದ ಅಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲು ಸಾಧ್ಯ ವಾಗಿಲ್ಲ ಎಂದು ಅಧಿಕಾರಿಗಳು ಹೇಳು ತ್ತಾರೆ. ಆದರೆ ಸ್ವಂತ ಕಟ್ಟಡಗಳಲ್ಲಿ ಯಾಕೆ ಅಳವಡಿಸಲಾಗಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿಯೂ ಸರಿಯಾದ ಉತ್ತರವಿಲ್ಲ.
ಬೆಂದೂರ್‌ವೆಲ್ನಲ್ಲಿರುವ ತೋಟ ಗಾರಿಕಾ ಇಲಾಖೆ, ಹಂಪನಕಟ್ಟೆಯಲ್ಲಿರುವ ಲೋಕೋಪಯೋಗಿ ಇಲಾಖೆ, ಬಂದರಿನಲ್ಲಿ ರುವ ಮೀನುಗಾರಿಕಾ ಇಲಾಖೆ, ಹಂಪನ ಕಟ್ಟೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗ ಳೂರು ಪ್ರಾದೇಶಿಕ ಸಾರಿಗೆ ಕಚೇರಿ, ಪಡೀಲ್ನಲ್ಲಿರುವ ಅರಣ್ಯ ಇಲಾಖೆಗಳು ಸ್ವಂತ ಕಟ್ಟಡಗಳಲ್ಲೇ ಹಲವಾರು ವರ್ಷ ಗಳಿಂದ ಕಾರ್ಯಾಚರಿಸುತ್ತಿವೆ. ಆದರೆ ಇಲ್ಲಿಯವರೆಗೆ ಆ ಕಚೇರಿಗಳಲ್ಲಿ ಮಳೆ ಕೊಯ್ಲು ಅಳವಡಿಸಲಾಗಿಲ್ಲ ಎನ್ನುವುದು ಗಮನಾರ್ಹ.
ಎಲ್ಲಿಯೂ ಇಲ್ಲ
‘ಉಪ ನಿರ್ದೇಶಕರ ಕಚೇರಿಯ ಹೊಸ ಕಟ್ಟಡ ಬೆಂದೂರ್‌ನಲ್ಲಿ ನಿರ್ಮಾಣ ಗೊಳ್ಳುತ್ತಿದ್ದು, ಅಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಲಾಗುವುದು’ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ನಾಯಕ್ ಹೇಳಿದರೆ, ‘ಮೇಲಧಿಕಾರಿಗಳಿಗೆ ಅನುಮತಿಗಾಗಿ ಪತ್ರ ಬರೆಯಲಾಗುವುದು. ಅನುಮತಿ ಸಿಕ್ಕಲ್ಲಿ ಅಳವಡಿಸಲಾಗುವುದು’ ಎಂದು ಪ್ರಭಾರ ಆರ್‌ಟಿಒ ಜಾನ್ ಮಿಸ್ಕಿತ್ ಹೇಳುತ್ತಾರೆ.
ಮನೆ-ಮನೆಗೆ ಮಳೆಕೊಯ್ಲು ‘ಸುದಿನ’ ನಮಗೆ ಪ್ರೇರಣೆ
ನಗರವಾಸಿಗಳನ್ನು ಮಳೆ ಕೊಯ್ಲು ವ್ಯವಸ್ಥೆಯತ್ತ ಉತ್ತೇಜಿಸುವ ಜತೆಗೆ ಅವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸುದಿನವು ‘ಮನೆ ಮನೆಗೆ ಮಳೆಕೊಯ್ಲು’ ಎನ್ನುವ ಅಭಿಯಾನ ಪ್ರಾರಂಭಿಸಿದೆ. ಇದಕ್ಕೆ ಪೂರಕವಾಗಿ, ನಗರ ವ್ಯಾಪ್ತಿಯ ಯಾವೆಲ್ಲ ಸರಕಾರಿ ಕಚೇರಿ ಕಟ್ಟಡಗಳಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಲಾಗಿದೆ ಎನ್ನುವ ವಾಸ್ತವಾಂಶ ತಿಳಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.