‘ಮನೆ ಮನೆಗೆ ಮಳೆಕೊಯ್ಲು’ ಉದಯವಾಣಿ ಅಭಿಯಾನಕ್ಕೆ ಯಶಸ್ವಿ ಎರಡು ತಿಂಗಳು
ಜನರನ್ನು ಜಲ ಸಾಕ್ಷರಗೊಳಿಸುವ ಪ್ರಯತ್ನಕ್ಕೆ ಗಣ್ಯರು-ಧಾರ್ಮಿಕ ನೇತಾರರ ಮೆಚ್ಚುಗೆ
Team Udayavani, Aug 9, 2019, 5:55 AM IST
ಮಹಾನಗರ: ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರು ಎಂದೂ ಬತ್ತದ ಅಕ್ಷಯಪಾತ್ರೆಯಂತಿತ್ತು. ಆದರೆ ನಿರಂತರ ಕಾಡು ನಾಶ, ಗಿಡ ಮರಗಳ ಮರೆ ಮಾಚಿ ಕಾಂಕ್ರಿಟ್ ಕಾನನದ ಬೆಳವಣಿಗೆಯಿಂದಾಗಿ ಮೂರ್‍ನಾಲ್ಕು ವರ್ಷಗಳಿಂದೀಚೆಗೆ ನೀರಿಗಾಗಿ ಜಿಲ್ಲೆಯ ಜನತೆ ಹಾಹಾಕಾರ ಅನುಭವಿಸುವಂತಾಗಿದೆ.
ಕಳೆದ ಬೇಸಗೆಯಲ್ಲಂತೂ ಜಿಲ್ಲೆಯ ಜನತೆಯನ್ನು ಅದರಲ್ಲಿಯೂ ನಗರದವರಿಗೆ ನೀರಿನ ಅಭಾವ ಬಹಳ ತೀವ್ರವಾಗಿ ಬಿಸಿ ಮುಟ್ಟಿಸಿತ್ತು. ಬೇಸಗೆಯಲ್ಲಿ ಮನೆಗೆ ಕುಡಿಯುವ ನೀರು ಬರದಿದ್ದಾಗ ಅದಕ್ಕೆ ಆಡಳಿತ ವ್ಯವಸ್ಥೆಯನ್ನು ದೂರುವ ಬದಲು ಪರ್ಯಾಯವಾಗಿ ನೀರಿನ ಮೂಲದತ್ತ ಜಾಗೃತರಾಗುವುದು ಪ್ರತಿ ನಾಗರಿಕರ ಕರ್ತವ್ಯ. ಏಕೆಂದರೆ, ವಾರ್ಷಿಕ 3,500 ಲೀಟರ್ ಮಳೆ ಬೀಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಗೆಯಲ್ಲಿ ನೀರಿಲ್ಲ ಅಂದರೆ, ನಾವೆಲ್ಲಿ ಎಡವಿದ್ದೇವೆ ಎಂಬ ಗಂಭೀರ ಚಿಂತನೆಯೂ ಅಗತ್ಯ. ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಇಂಗಿಸುವ ಮೂಲಕ ಅಂತರ್ಜಲ ವೃದ್ಧಿಸುವುದಕ್ಕೆ ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕಿದೆ. ಅದಕ್ಕಾಗಿ ಎರಡು ತಿಂಗಳ ಹಿಂದೆ ‘ಉದಯವಾಣಿ’ ಪ್ರಾರಂಭಿಸಿದ್ದ ಅಭಿಯಾನವೇ ‘ಮನೆ ಮನೆಗೆ ಮಳೆಕೊಯ್ಲು’.
ಜನರಲ್ಲಿ ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ಉದಯವಾಣಿ’ಯು ಜೂನ್ 8ರಂದು ಪ್ರಾರಂಭಿಸಿದ್ದ ಈ ಅಭಿಯಾನವು ಇದೀಗ ಯಶಸ್ವಿಯಾಗಿ ಎರಡು ತಿಂಗಳುಗಳನ್ನು ಪೂರ್ಣಗೊಳಿಸಿದೆ. ಈ ಅಭಿಯಾನವು ಸಾವಿರಾರು ಜನರನ್ನು ಜಲ ಸಂರಕ್ಷಣೆಯತ್ತ ಜಾಗೃತಗೊಳಿಸಿದೆ. ಹಲವಾರು ಮನೆ, ಸಂಘ-ಸಂಸ್ಥೆ, ಚರ್ಚ್, ದೇವಸ್ಥಾನ, ಸಮುದಾಯ, ಶಾಲೆ-ಕಾಲೇಜುಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಕಳೆದ ಎರಡು ತಿಂಗಳಿನಿಂದ ಅಳವಡಿಕೆಯಾಗುತ್ತಿರುವುದು ಗಮನಾರ್ಹ.
ದ.ಕ. ಜಿಲ್ಲಾ ಪಂಚಾ ಯತ್ ಸಹ ಯೋಗದಲ್ಲಿ ನಿರ್ಮಿತಿ ಕೇಂದ್ರ ದವರು ಜಿಲ್ಲೆಯಾ ದ್ಯಂತ ಅಲ್ಲಲ್ಲಿ ಮಳೆ ಕೊಯ್ಲು ಮಾಹಿತಿ ಕಾರ್ಯ ಕ್ರಮ-ಪ್ರಾತ್ಯಕ್ಷಿಕೆ, ಮನೆ-ಮನೆಗೆ ಭೇಟಿ, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈಗಾಗಲೇ ಸಾವಿರಾರು ಮಂದಿಗೆ ಮಳೆಕೊಯ್ಲಿನ ಅಗತ್ಯ-ಅನುಕೂಲತೆಯನ್ನು ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ 293 ಮಂದಿ ನಿರ್ಮಿತಿ ಕೇಂದ್ರಕ್ಕೆ ಕರೆ ಮಾಡಿ ಮಳೆಕೊಯ್ಲು ಬಗ್ಗೆ ಮಾಹಿತಿ ಕೇಳಿದ್ದು, 105 ಮನೆಗಳಿಗೆ ಈವರೆಗೆ ಭೇಟಿ ನೀಡಲಾಗಿದೆ. ಉಳಿದವರಿಗೆ ಫೋನ್‌ನಲ್ಲೇ ಅಳವಡಿಸಿಕೊಳ್ಳಲು ಮಾರ್ಗದರ್ಶ ಮಾಡಲಾಗಿದೆ.
ಮಳೆಕೊಯ್ಲು ಕಾರ್ಯಾಗಾರದಲ್ಲಿ ಮಾಹಿತಿ ನೀಡುವಂತೆ 47 ಆಹ್ವಾನಗಳು ಬಂದಿದ್ದು, ಈ ಪೈಕಿ 37 ಕಡೆ ಮಾಹಿತಿ ಕಾರ್ಯಕ್ರಮ ನೀಡಲಾಗಿದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಹೇಳಿದ್ದಾರೆ.
ಅಭಿಯಾನದಿಂದ ಸ್ಫೂರ್ತಿಗೊಂಡು ಬೆಳ್ತಂಗಡಿಯ ಮುಂಡಾಜೆಯಲ್ಲಿ ‘ನೀರಿಂಗಿಸೋಣ’ ಎಂಬ ತಂಡವೊಂದು ಅಸ್ತಿತ್ವಕ್ಕೆ ಬಂದಿದ್ದು, ಇಡೀ ಗ್ರಾಮದಲ್ಲಿ ಈಗ ಜಲಾಂದೋಲನದ ಕಾರ್ಯಕ್ರಮಗಳು ನಡೆಯುತ್ತಿವೆ. ಪೊಳಲಿ ಸರಕಾರಿ ಶಾಲೆಗೆ ಬಿರುವೆರ್ ಕುಡ್ಲ ಸಂಘಟನೆಯು ತಮ್ಮ ಖರ್ಚಿನಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಟ್ಟಿದೆ. ಅಲ್ಲದೆ, ಹಲವಾರು ವಿದ್ಯಾಸಂಸ್ಥೆ, ಸಮುದಾಯ ಸಂಘಟನೆಗಳು, ಪ್ರಾರ್ಥನಾ ಮಂದಿರಗಳು ಸ್ವಯಂಪ್ರೇರಿತವಾಗಿ ಅಲ್ಲಲ್ಲಿ ಮಳೆಕೊಯ್ಲು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಉದಯವಾಣಿಯ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದಕ್ಕೆ ಪ್ರಯತ್ನಿಸಿರುವುದು ಗಮನಾರ್ಹ.
ಈ ಹಿನ್ನೆಲೆಯಲ್ಲಿ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಇದೇರೀತಿ ಮತ್ತಷ್ಟು ಜಲ ಸಾಕ್ಷರತೆಗೆ ಪೂರಕವಾದ ಜನಾಂದೋಲನದೊಂದಿಗೆ ಮುಂದುವರಿಯಲಿದೆ.
ಆ ಮೂಲಕ, ಇಡೀ ಜಿಲ್ಲೆಯಲ್ಲಿ ಇನ್ನಷ್ಟು ಮನೆಗಳನ್ನು ಜಲ ಸಾಕ್ಷರತೆಗೊಳಿಸುವ ಪ್ರಯತ್ನಕ್ಕೆ ಈ ಅಭಿಯಾನವು ವೇದಿಕೆಯಾಗಲಿದೆ.
‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಈಗ ಯಶಸ್ವಿಯಾಗಿ ಎರಡು ತಿಂಗಳು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಪ್ರಮುಖರು, ಧಾರ್ಮಿಕ ನೇತಾರರು ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸಂದೇಶದ ಮೂಲಕ ಮತ್ತಷ್ಟು ಜನರನ್ನು ಈ ದಿಸೆಯಲ್ಲಿ ಪ್ರೇರಣೆಗೊಳಿಸುವ ಆಶಯ ವ್ಯಕ್ತಪಡಿಸಿದ್ದಾರೆ.
– ಡಾ| ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ
-ದೇವದಾಸ್ ಕಾಪಿಕಾಡ್, ತುಳು ಚಲನಚಿತ್ರ ನಟ
-ಅಲ್ಹಾಝ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಖಾಝಿ, ಮಂಗಳೂರು
ಸಂದರ್ಭೋಚಿತ ಅಭಿಯಾನ
– ಡಾ| ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ, ಶ್ರೀ ಧರ್ಮಸ್ಥಳ ಮಂಜುನಾಥ ಕ್ಷೇತ್ರ
ವಿವಿ ಕೈಜೋಡಿಸಿದೆ
– ಡಾ| ಪಿ.ಎಸ್. ಯಡಪಡಿತ್ತಾಯ, ಉಪ ಕುಲಪತಿ, ಮಂಗಳೂರು ವಿವಿ
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.