ಮಳೆಯೋ, ಭೂಕಂಪವೋ?
Team Udayavani, Sep 17, 2017, 10:25 AM IST
ಬಜಪೆ: ವಿಮಾನ ನಿಲ್ದಾಣದ ಪರಿಸರದಲ್ಲಿ ಶುಕ್ರವಾರ ರಾತ್ರಿ ಸುರಿದ ಜಡಿಮಳೆಗೆ ಬಜಪೆಯಿಂದ ಹಳೆ ವಿಮಾನ ನಿಲ್ದಾಣವಾಗಿ ಉಣಿಲೆ- ಕೊಳಂಬೆ ಅದ್ಯಪಾಡಿ ಜಿಲ್ಲಾ ಪಂಚಾಯತ್ ರಸ್ತೆಯ ಡಾಮರು ಸಂಪೂರ್ಣ ಎದ್ದು ಹೋಗಿದ್ದು, ಭೂಕಂಪವಾದ ಪ್ರದೇಶದಂತಾಗಿದೆ. ಶುಕ್ರವಾರ ಸಂಜೆಯವರೆಗೂ ಉತ್ತಮ ಸ್ಥಿತಿಯಲ್ಲಿದ್ದ ರಸ್ತೆ ರಾತ್ರಿ ಬೆಳಗಾಗುವುದರೊಳಗೆ ಈ ಸ್ಥಿತಿಗೆ ತಲುಪಿದ್ದನ್ನು ಕಂಡ ಗ್ರಾಮಸ್ಥರು ಹೌಹಾರಿದ್ದಾರೆ. ವಿಶೇಷ ಎಂದರೆ 15 ದಿನಗಳ ಹಿಂದೆಯಷ್ಟೆ ಗ್ರಾಮ ಪಂಚಾಯತ್ ಈ ರಸ್ತೆಯನ್ನು ದುರಸ್ತಿ ಮಾಡಿತ್ತು.
ಈ ಪ್ರದೇಶದಲ್ಲಿ ರಾತ್ರಿಪೂರ್ತಿ ಉತ್ತಮ ಮಳೆಯಾಗಿ, ಗುಡ್ಡ ಕುಸಿದು ನೀರು ರಸ್ತೆ ಮೇಲೆ ಹರಿಯಿತು. ಮಣ್ಣು ಸಡಿಲವಾಗಿದ್ದರಿಂದ ನೀರು ಹರಿಯುತ್ತಲೇ ಡಾಮರು ಪದರ, ಪದರವಾಗಿ ಎದ್ದಿದೆ. ಯಾವುದೇ ಕ್ಷಣ ರಸ್ತೆ ಕುಸಿಯುವ ಅಪಾಯವೂ ಇದೆ.
ರಸ್ತೆ ಬದಿಯಲ್ಲಿದ್ದ ಪಂಚಾಯತ್‌ನ ನೀರಿನ ಪೈಪ್‌ಗ್ೂ ಹಾನಿಯಾಗಿದೆ. ಈ ಪರಿಸರದ ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಅದ್ಯಪಾಡಿ, ಕೊಳಂಬೆ ಗ್ರಾಮಸ್ಥರು ಬಜಪೆ ಕೆಂಜಾರು ಮೂಲಕ ಸಂಚರಿಸುವುದು ಅನಿ ವಾರ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.