ಮಳೆ ಪರಿಹಾರ, ಮನೆ ನಿರ್ಮಾಣ ತ್ವರಿತಕ್ಕೆ ಆಗ್ರಹ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
Team Udayavani, Feb 11, 2020, 1:40 AM IST
ಮಂಗಳೂರು: “ಕಳೆದ ಮಳೆಗಾಲದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದ ಹಲವರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಇನ್ನೊಂದು ಮಳೆಗಾಲ ಬರುವ ಮೊದಲಾದರೂ ಪರಿಹಾರ ಒದಗಿಸಿ ಮನೆ ನಿರ್ಮಿಸಿ ಕೊಡಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರು ಆಗ್ರಹಿಸಿದ್ದಾರೆ.
ಸೋಮವಾರ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ವಿನೋದ್ ಕುಮಾರ್ ಬೊಳ್ಳೂರು ಅವರು, “ಸರಕಾರ ಘೋಷಿಸಿದ 5 ಲ.ರೂ. ಇನ್ನೂ ಹಲವರಿಗೆ ಸಿಕ್ಕಿಲ್ಲ. ಕುಸಿದ ಮನೆಗಳು ಹಾಗೆಯೇ ಇವೆ’ ಎಂದರು. “ನನ್ನ ಕ್ಷೇತ್ರದಲ್ಲಿಯೂ ಹಲವು ಮನೆಗಳು ಕುಸಿದಿದ್ದವು; ಇನ್ನೂ ಪರಿಹಾರ ದೊರೆತಿಲ್ಲ. ಪರಿಹಾರ ವಿತರಣೆ, ಮನೆ ನಿರ್ಮಾಣ ಶೀಘ್ರವಾಗಲು ನಿರ್ದಿಷ್ಟ ಅಧಿಕಾರಿಗಳಿಗೆ ಹೊಣೆ ವಹಿಸಬೇಕು’ ಎಂದು ಜನಾರ್ದನ ಗೌಡ ಹೇಳಿದರು.
ಇದಕ್ಕೆ ಎಂ.ಎಸ್. ಮಹಮ್ಮದ್, ತುಂಗಪ್ಪ ಬಂಗೇರ ದನಿಗೂಡಿಸಿದರು. ಹರೀಶ್ ಕಂಜಿಪಿಲಿ ಮಾತನಾಡಿ, “ಜೂನ್- ಸೆಪ್ಟಂಬರ್‌ನ ಭಾರೀ ಮಳೆಯಿಂದ ಕುಸಿದ ಮನೆಗಳಿಗೆ ಸರಕಾರ 5 ಲ.ರೂ ಹಾಗೂ ಅಕ್ಟೋಬರ್-ನವೆಂಬರ್‌ನಲ್ಲಿ ಕುಸಿದ ಮನೆಗಳಿಗೆ 97,000 ರೂ. ಪರಿಹಾರ ನಿಗದಿಪಡಿಸಿತ್ತು. ಹೆಚ್ಚಿನ ಮನೆಗಳಿಗೆ ಹಣ ಬಿಡುಗಡೆಯಾಗುತ್ತಿದೆ. ಪರಿಹಾರ ವಿತರಣೆಯಾಗಿಲ್ಲ ಎಂಬುದು ಸರಿಯಲ್ಲ. ಆದರೆ ಎಲ್ಲ ಮನೆಗಳಿಗೂ 5 ಲ.ರೂ. ನೀಡಬೇಕೆಂಬ ನಮ್ಮ ಬೇಡಿಕೆ ಈಡೇರಿಸುವತ್ತ ಸರಕಾರದ ಗಮನ ಸೆಳೆಯಬೇಕಿದೆ’ ಎಂದರು.
ಹಂತ ಹಂತವಾಗಿ ಬಿಡುಗಡೆ
“ಪರಿಹಾರ ಮೊತ್ತ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ. 5.56 ಕೋ.ರೂ. ಬಿಡುಗಡೆಯಾಗಿದ್ದು ಹಾನಿಗೊಳಗಾದ 627 ಮನೆಗಳ ಪೈಕಿ 47 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಉಳಿದವುಗಳ ನಿರ್ಮಾಣ ಪ್ರಗತಿಯಲ್ಲಿದೆ’ ಎಂದು ಯೋಜನಾಧಿಕಾರಿ ತಿಳಿಸಿದರು. “ಪರಿಹಾರ ವಿತರಣೆ ವಿಳಂಬವಾಗುತ್ತಿದ್ದರೆ ಸಂಬಂಧಪಟ್ಟ ಪಿಡಿಒಗಳ ಜತೆ ಸಮನ್ವಯ ಸಾಧಿಸಿ ತ್ವರಿತಗೊಳಿಸಲಾಗುವುದು’ ಎಂದು ಸಿಇಒ ಡಾ| ಸೆಲ್ವಮಣಿ ಆರ್. ಭರವಸೆ ನೀಡಿದರು.
ಪ್ಲಾಸ್ಟಿಕ್ ಸವಾಲು
ಗ್ರಾಮೀಣ ಭಾಗಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಹೆಚ್ಚುತ್ತಿದೆ. ಕೆಲವು ಗ್ರಾ.ಪಂ.ಗಳಲ್ಲಿ ಶೇಖರಿಸಿಡಲು ಸ್ಥಳಾವಕಾಶ ಇಲ್ಲ ಎಂದು ಕೆಲವು ಸದಸ್ಯರು ಅಹವಾಲು ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಪ್ಲಾಸ್ಟಿಕ್ ತ್ಯಾಜ್ಯ, ಅದರಲ್ಲಿಯೂ ಮುಖ್ಯವಾಗಿ ಬಹುಪದರದ ತಿಂಡಿಯ ಪ್ಯಾಕೆಟ್‌ಗಳ ವಿಲೇವಾರಿ ಸವಾಲಾಗಿದೆ. ಔರಂಗಬಾದ್‌ನ ಸಂಸ್ಥೆಯೊಂದು ಪ್ಲಾಸ್ಟಿಕನ್ನು ಕೊಂಡೊಯ್ಯುವ ಭರವಸೆ ನೀಡಿದೆ ಎಂದರು. ಕೆಲವೆಡೆ ಕಾರ್ಖಾನೆ, ಕಂಪೆನಿಗಳು ಕಲುಷಿತ ನೀರನ್ನು ನದಿ, ತೊರೆಗಳಿಗೆ ಬಿಡುತ್ತಿದ್ದು ಇದು ಕುಡಿಯುವ ನೀರಿನ ಮೂಲ, ಅಣೆಕಟ್ಟುಗಳಿಗೆ ಸೇರುತ್ತಿದೆ. ಮೀನುಗಳ ದೇಹವನ್ನೂ ಸೇರುತ್ತಿದೆ ಎಂದು ಸದಸ್ಯರು ಗಮನ ಸೆಳೆದರು. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯವರ ಗಮನ ಸೆಳೆಯಲಾಗುವುದು ಎಂದು ಸಿಇಒ ಹೇಳಿದರು.
ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿವಿಧ ಸ್ಥಾಯೀ ಸಮಿತಿಗಳ ಅಧ್ಯಕ್ಷರಾದ ಕೆ. ರವೀಂದ್ರ ಕಂಬಳಿ, ಧನಲಕ್ಷ್ಮೀ ಶೆಟ್ಟಿ, ಮಮತಾ ಶೆಟ್ಟಿ ಉಪಸ್ಥಿತರಿದ್ದರು. ಕೊರಗಪ್ಪ ನಾಯ್ಕ, ಧರಣೇಂದ್ರ ಕುಮಾರ್, ಸುಚರಿತ ಶೆಟ್ಟಿ, ಆಶಾ ತಿಮ್ಮಪ್ಪ ಗೌಡ, ಪ್ರಮೀಳಾ ಜನಾರ್ದನ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಶಾಲಾ ಕಟ್ಟಡ ಕುಸಿಯುವ ಭೀತಿ
“ಅತ್ಯಂತ ಹಳೆಯದಾಗಿರುವ ಬಂಟ್ವಾಳ ಸಜೀಪಮುನ್ನೂರಿನ ಪಾಣೇಲಬರಿಕೆ ಶಾಲೆಯ 3 ಕೊಠಡಿಗಳು ಕುಸಿಯುವ ಭೀತಿ ಇದೆ’ ಎಂದು ಮಮತಾ ಗಟ್ಟಿ ಹೇಳಿದರು. “ನನ್ನ ಕ್ಷೇತ್ರದಲ್ಲಿಯೂ ಮಣ್ಣಿನ ಗೋಡೆಯ ಶಾಲೆಗಳಿವೆ. ಶಿಕ್ಷಣ ಇಲಾಖೆ ಇಂತಹ ಕಟ್ಟಡಗಳಿಗೆ ಅನುದಾನ ಕೊಡುತ್ತಿಲ್ಲ’ ಎಂದು ಮಂಜುಳಾ ದೂರಿದರು. “ಮಳೆಯಿಂದ ಹಾನಿಯಾದ ಶಾಲಾ ಕಟ್ಟಡಗಳಿಗೂ ಅನುದಾನ ದೊರೆತಿಲ್ಲ’ ಎಂದು ತುಂಗಪ್ಪ ಬಂಗೇರ ಹೇಳಿದರು. “ಶಿಕ್ಷಣ ಇಲಾಖೆ ಶಾಲಾ ಕೊಠಡಿಗಳಿಗೆ ಅನುದಾನ ಒದಗಿಸುವಾಗ ಗೊಂದಲ ಸೃಷ್ಟಿಸುತ್ತಿದೆ’ ಎಂದು ಮಹಮ್ಮದ್ ಹೇಳಿದರು. ಈ ಬಗ್ಗೆ ವರದಿ ನೀಡುವಂತೆ ಸಿಇಒ ಅವರು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಕೆಆರ್‌ಐಡಿಎಲ್‌ಗಿಲ್ಲ ನೀರಿನ ಘಟಕ ಹೊಣೆ
ನಾಲ್ಕು ವರ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಯೋಜನೆಗಳನ್ನು ಇನ್ನು ಮುಂದೆ ಕೆಆರ್‌ಐಡಿಎಲ್ ಸಂಸ್ಥೆಗೆ ನೀಡದಿರಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೇ ಕುಡಿಯುವ ನೀರಿನ ಘಟಕಗಳ ನಿರ್ಮಾಣ, ದುರಸ್ತಿಯ ಜವಾಬ್ದಾರಿ ನಿರ್ವಹಿಸಲಿದೆ ಎಂದು ಸಿಇಒ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
Mangaluru: ತ್ಯಾಜ್ಯ ಸಾಗಾಟ ವಾಹನಕ್ಕೆ ಏಳೇ ವರ್ಷ ಬಾಳಿಕೆ!
Mangaluru: ದ್ವಿಮುಖ ಸಂಚಾರ ನಿರ್ಧಾರಕ್ಕೆ ಅಡೆತಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Simple Life: ಬದುಕು ನಿರಾಡಂಬರವಾಗಿರಲಿ
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Udupi: ಇಲ್ಲಿ ಹೊಂಡಗಳೇ ಸ್ಪೀಡ್ ಬ್ರೇಕರ್‌ಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.