ಎ.1ರಿಂದ ಮಳೆ ನೀರು ಕೊಯ್ಲು ಕಡ್ಡಾಯ 


Team Udayavani, Mar 21, 2017, 5:12 PM IST

male-koylu.jpg

ಮಹಾನಗರ: ಎಪ್ರಿಲ್‌ 1ರಿಂದಲೇ ಜಿಲ್ಲಾದ್ಯಂತ ಮಳೆ ಕೊಯ್ಲು ಯೋಜನೆಯನ್ನು ಕಡ್ಡಾಯ ಗೊಳಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌, ಮುಂಬರುವ ಮಳೆಗಾಲವನ್ನು ಸಮೃದ್ಧವಾಗಿ ಹಿಡಿದಿಟ್ಟು ಕೊಳ್ಳಲು ಮುಂದಾಗಿದೆ.

ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಹಾಗೂ ಮುಂಬ ರುವ ದಿನದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆ ಯಲ್ಲಿ ಇಂಗುಗುಂಡಿಗಳ ರಚನೆ ಹಾಗೂ ತೆರೆದ ಬಾವಿಗೆ ಜಲ ಮರುಪೂರಣ ಯೋಜನೆಯನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಸಿದ್ಧತೆ ನಡೆದಿದೆ.

ಎರಡು-ಮೂರು ತಿಂಗಳೊಳಗೆ ಸುರಿಯುವ ಮಳೆಯ ನೀರನ್ನು ಪೋಲಾಗದಂತೆ ಸಂಗ್ರಹಿಸಿಡಲು ಮಳೆನೀರು ಕೊಯ್ಲು ಜಾರಿ ತರಲಾಗುತ್ತಿದೆ. ಇದ ರೊಂದಿಗೆ ಅಂತರ್ಜಲ ಹೆಚ್ಚಳ ಮಾಡುವ ಈ ಯೋಜನೆ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಜಾರಿಗೆ ಬರಲಿದೆ. 

ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾ.ಪಂ./ಪೊಲೀಸ್‌ ಠಾಣೆಗಳಲ್ಲಿ ಕಡ್ಡಾಯವಾಗಿ ಮಳೆನೀರು ಕೊಯ್ಲು ಯೋಜನೆ ಅನುಷ್ಠಾನ‌ಗೊಳಿಸುವಂತೆ ಜಿ.ಪಂ. ಎಲ್ಲ ಗ್ರಾ.ಪಂಗಳಿಗೆ ಶೀಘ್ರವೇ ಸೂಚಿಸಲಿದೆ.

ಬೊಟ್ಟು ಮಾಡಿದರೆ ಆಗದು..
ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸರಕಾರ /ಆಡಳಿತ ವ್ಯವಸ್ಥೆಗಳು ಯಾವುದೇ ನಿಯಮ/ಕಾನೂನು ಜಾರಿಗೊಳಿಸಿದರೂ ಸಾರ್ವಜನಿಕರ ಸಹಭಾಗಿತ್ವ ಅವಶ್ಯ. ಸರಕಾರವೇ ಎಲ್ಲಾ ಪರಿಹಾರವನ್ನು ಒದಗಿಸಬೇಕೆಂದು ಕುಳಿತುಕೊಳ್ಳುವಂತಿಲ್ಲ. ಪ್ರತೀ ವ್ಯಕ್ತಿ, ಖಾಸಗಿ ಸಂಸ್ಥೆಗಳು ನೀರಿನ ಸಮರ್ಪಕ ಸಂಗ್ರಹ ಮತ್ತು ಬಳಕೆಯತ್ತ ಗಮನಹರಿಸಬೇಕಿದೆ ಎನ್ನುತ್ತಾರೆ ಪರಿಣ ತರು. ಅದರಲ್ಲೂ ಕಟ್ಟಡ ನಿರ್ಮಾಣಗಾರರು, ವಸತಿ ಸಂಕೀರ್ಣ ನಿರ್ಮಿಸುವವರು ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ತಮ್ಮ-ತಮ್ಮ ಕಟ್ಟಡಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕಾಗಿದೆ.

ಮನೆ ನಂಬರ್‌ ಸಿಗಬೇಕಾದರೆ ಮಳೆಕೊಯ್ಲು ಕಡ್ಡಾಯ
ಜಿ.ಪಂ. ವ್ಯಾಪ್ತಿಯಲ್ಲಿ 2,000 ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ಮನೆ/ಕಟ್ಟಡ ನಿರ್ಮಿಸುವಾಗ ಮಳೆ ನೀರು ಕೊಯ್ಲು ಹಾಗೂ ಶೌಚಾಲಯ ಕಡ್ಡಾಯವಾಗಿ ಮಾಡಲೇಬೇಕು ಎಂಬ ನಿಯಮವಿದೆ. 

ಮನೆ ನಂಬರ್‌/ ಕಟ್ಟಡ ಸಂಖ್ಯೆ ನೀಡುವ ಸಂದರ್ಭದಲ್ಲಿ ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬ ನಡಾವಳಿಯನ್ನು ಕಳೆದ ವರ್ಷ ಜಿ.ಪಂ. ಕೈಗೊಂಡಿತ್ತು. ಪ್ರಸಕ್ತ ಇದು ಕೆಲವು ಗ್ರಾ.ಪಂ.ನಲ್ಲಿ ಮಾತ್ರ ಅನುಷ್ಠಾನವಾಗುತ್ತಿದ್ದು, ಬಹುತೇಕರು ಇದರ ಬಗ್ಗೆ ಕಾಳಜಿ ವಹಿಸಿದಂತಿಲ್ಲ.

ಕೊಯ್ಲು-ಮಾಡುವುದು ಹೇಗೆ?
ಮಳೆ ಬರುವ ಮೊದಲು, ಅಂದರೆ ಈಗಲೇ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದರೆ ಸುಲಭ. ಇದಕ್ಕಾಗಿ ಸರಕಾರ/ಪಾಲಿಕೆಯನ್ನು ಕಾಯಬೇಕಾಗಿಲ್ಲ. ಮನೆ-ಕಟ್ಟಡದಲ್ಲಿ ಮಳೆ ನೀರು ಕೊಯ್ಲು ಯೋಜನೆ ಅಳವಡಿಸಿಕೊಳ್ಳುವುದು ಭಾರೀ ಕಷ್ಟವಲ್ಲ. ಹೆಚ್ಚು ಖರ್ಚೂ ಇಲ್ಲ. ಮನೆ/ಕಟ್ಟಡದ ಛಾವಣಿ ಅಥವಾ ತಾರಸಿ, ಕಿಟಕಿ, ಬಾಗಿ ಲಿನ ಸಜ್ಜಾದ ಮೇಲೆ ಬೀಳುವ ಮಳೆ ನೀರು ಎಲ್ಲಿಯೂ ಸೋರಿ ಹೋಗದಂತೆ ಮೊದಲು ವ್ಯವಸ್ಥೆ ಮಾಡಬೇಕು. ಬಳಿಕ ಈ ಎಲ್ಲಾ ನೀರೂ ಕೊಳವೆ ಗಳ ಮೂಲಕ ಒಂದೆಡೆ ಸಂಗ್ರಹವಾಗುವಂತೆ ಮಾಡಬೇಕು. ನೀರು ಸಂಗ್ರಹ ಗೊಳ್ಳುವ ಜಾಗವನ್ನು ಸೂಕ್ತ ರೀತಿ ವ್ಯವಸ್ಥೆ ಮಾಡಿಕೊಳ್ಳಬೇಕು. ಮನೆಯ ಅಂಗಳದಲ್ಲಿ ಒಂದು ದೊಡ್ಡ ತೊಟ್ಟಿ ನಿರ್ಮಿಸಿ ಅದರಲ್ಲಿ ಮಳೆ ನೀರು ನೇರವಾಗಿ ಸಂಗ್ರಹವಾಗುವಂತೆ ಮಾಡಬಹುದು. (ನೀರು ಬಳಕೆಗೂ ಮೊದಲು ಶೋಧಿಸುವ ವ್ಯವಸ್ಥೆ ಮಾಡಬೇಕು).

ಟಾಪ್ ನ್ಯೂಸ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

7

Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

6

Malpe ಬೀಚ್‌ ಸ್ವಚ್ಛತೆ: 3 ದಿನದಲ್ಲಿ 26 ಲೋಡ್‌ ಕಸ ಸಂಗ್ರಹ

5

Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.