Dakshina Kannada; ಜಿಲ್ಲೆಯ ವಿವಿಧೆಡೆ ಮಳೆ : ಬೆಳ್ತಂಗಡಿಯಲ್ಲಿ ಬರೆ ಕುಸಿತ

ದ.ಕ., ಉಡುಪಿ: ಇಂದು ಭಾರೀ ಮಳೆ ಸಾಧ್ಯತೆ

Team Udayavani, Oct 15, 2024, 6:15 AM IST

1-male

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಂಗಳೂರು ನಗರ, ಬೆಳ್ತಂಗಡಿ, ಸುಳ್ಯ ತಾಲೂಕಿನ ಹಲವೆಡೆ ಮಳೆಯಾಗಿದೆ.

ಕರಾವಳಿಗೆ ಎರಡು ದಿನ ಎಲ್ಲೋ ಅಲರ್ಟ್‌ ಘೋಷಿಸಲಾಗಿದ್ದು, ಸದ್ಯದ ಪ್ರಕಾರ ಗುರುವಾರ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅರಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡ ಪ್ರದೇಶ ಪಶ್ಚಿಮ, ವಾಯವ್ಯ ದಿಕ್ಕಿನತ್ತ ಸಾಗುತ್ತಿದ್ದು, ಇದು ಒಮಾನ್‌ ತೀರದತ್ತ ಸಾಗಿ ಬಲ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಳಿಸಿದೆ.

ಸಮುದ್ರ ತೀರ ಪ್ರದೇಶದಲ್ಲಿ 35-45 ಕಿ.ಮೀ. ವೇಗದಲ್ಲಿ, ಕೆಲವೊಮ್ಮೆ 55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳೂರಿನಲ್ಲಿ ದಿನದ ತಾಪಮಾನ ಗರಿಷ್ಠ 30.2 ಡಿ.ಸೆ. ಮತ್ತು ಕನಿಷ್ಠ 26.6 ಡಿ.ಸೆ. ದಾಖಲಾಗಿದೆ.

ಸುಳ್ಯ, ಸುಬ್ರಹ್ಮಣ್ಯದಲ್ಲಿ ಸುಳ್ಯ ತಾಲೂಕು ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಸೋಮವಾರ ಅಪರಾಹ್ನ ಬಳಿಕ ಉತ್ತಮ ಮಳೆಯಾಗಿದೆ.

ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಬಿಸಿಲಿನ ವಾತಾವರಣ ಇತ್ತು. ಬಳಿಕ ಉತ್ತಮ ಮಳೆ ಸುರಿದಿದೆ. ಸುಳ್ಯ ನಗರ, ಜಾಲೂÕರು, ಮಂಡೆಕೋಲು, ಸಂಪಾಜೆ, ಅರಂತೋಡು, ಬೆಳ್ಳಾರೆ, ಪಂಜ, ಕಲ್ಮಡ್ಕ, ಕೊಲ್ಲಮೊಗ್ರು, ಹರಿಹರ, ಕುಕ್ಕೆ ಸುಬ್ರಹ್ಮಣ್ಯ, ಬಳ್ಪ, ಎಡಮಂಗಲ, ಬಿಳಿನೆಲೆ ಪರಿಸರದ ಹಲವೆಡೆ ಉತ್ತಮ ಮಳೆಯಾಗಿದೆ. ರವಿವಾರವೂ ಮಳೆಯಾಗಿತ್ತು.

ಬೆಳ್ತಂಗಡಿಯಲ್ಲಿ ಮಳೆ, ಬರೆ ಕುಸಿತ
ಬೆಳ್ತಂಗಡಿ: ತಾಲೂಕಿನಲ್ಲಿ ಸಂಜೆ ಬಳಿಕ ನಿರಂತರ ಮಳೆಯಾಗುತ್ತಿದ್ದು, ಸೋಮವಾರವೂ ರಾತ್ರಿ 7.30ರಿಂದ ಒಂದು ತಾಸು ಮಳೆಯಾಗಿದೆ.

ರವಿವಾರ ರಾತ್ರಿ ಸುರಿದ ಭಾರಿ ಮಳೆಗೆ ಮುಂಡಾಜೆ- ಧರ್ಮಸ್ಥಳ ರಸ್ತೆಯ ಗುಂಡಿ ದೇವಸ್ಥಾನ, ಮಾಣಿಂಜ, ಪಿಲತ್ತಡ್ಕ, ಕಲ್ಮಂಜ ಸೇರಿದಂತೆ ಅಲ್ಲಲ್ಲಿ ಗುಡ್ಡ ಕುಸಿತವಾಗಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮುಂಡಾಜೆಯ ಶ್ರೀಧರ ಪೂಜಾರಿ ಅವರ ಮನೆ ಮೇಲ್ಭಾಗದಲ್ಲಿ ಬರೆ ಜರಿದು ರಸ್ತೆಗೆ ಬಿದ್ದಿದೆ.

ದ.ಕ., ಉಡುಪಿ: ಇಂದು ಭಾರೀ ಮಳೆ ಸಾಧ್ಯತೆ
ಆಗ್ನೇಯ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ಮೂರ್ನಾಲ್ಕು ದಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಜತೆಗೆ ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬೀಳ ಬ ಹು ದು ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರೀ ಗುಡುಗು ಸಹಿತ ಮಳೆ ಸುರಿಯುವ ನಿರೀಕ್ಷೆಯಿದೆ. ಜತೆಗೆ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಯಗಟಿಯಲ್ಲಿ 5 ಸೆಂ.ಮೀ. ಮಳೆ
ಬೆಂಗಳೂರು: ಸೋಮವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ನೈಋತ್ಯ ಮಾನ್ಸೂನ್‌ ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿತ್ತು. ಕರಾವಳಿಯಲ್ಲಿ ಬಹುತೇಕ ಕಡೆಗಳಲ್ಲಿ ಮಳೆಯಾಗಿತ್ತು. ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆ ಮಳೆಯಾಯಿತು. ಹಾವೇರಿ ಜಿಲ್ಲೆಯ ಹಿರೇಕೆರೂರು ಮತ್ತು ಚಿಕ್ಕಮಗಳೂರಿನಯಲ್ಲಿ ರಾಜ್ಯದಲ್ಲಿಯೇ ಅಧಿಕ 5 ಸೆಂ.ಮೀ. ಮಳೆ ಸುರಿಯಿತು.

ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು (ಸೆಂ.ಮೀ.ಗಳಲ್ಲಿ): ಹಾರಂಗಿ, ಜಯಪುರ 4, ಸೋಮವಾರಪೇಟೆ, ಹುಂಚದಕಟ್ಟೆ, ಶಿವಮೊಗ್ಗ, ಕಡೂರು, ಹೊಸದುರ್ಗ, ಕ್ಯಾಸಲ್‌ರಾಕ್‌ 3, ಕೊಟ್ಟಿಗೆಹಾರ, ಕಡೂರು 2, ಉಪ್ಪಿನಂಗಡಿ, ಪಣಂಬೂರು, ಕೊಲ್ಲೂರು ತಲಾ 1,ಬಾಗಲಕೋಟೆಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 33.7 ಡಿಗ್ರೆ ಸೆಲಿÏಯಸ್‌, ಶಿರಾಲಿಯಲ್ಲಿ ಕನಿಷ್ಠ 18.6 ಡಿ.ಸೆ. ತಾಪಮಾನ ದಾಖಲಾಗಿದೆ.

 

ಟಾಪ್ ನ್ಯೂಸ್

Cancer Rates: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Election Date: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಇಂದು ಚುನಾವಣೆ ದಿನಾಂಕ ಘೋಷಣೆ!

Election Date: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಇಂದು ಚುನಾವಣೆ ದಿನಾಂಕ ಘೋಷಣೆ!

2

Bilichukki Hallihakki kannada Movie: ಇದು ಹಳ್ಳಿ ಹಕ್ಕಿಯ ಬಿಳಿಚುಕ್ಕಿ

Security: ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

Security: ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

salman

Baba Siddique Case: ಸಲ್ಮಾನ್‌ಗೆ ನೆರವಾಗುವ ಎಲ್ಲರಿಗೂ ಇದೇ ಗತಿ: ಬಿಷ್ಣೋಯ್‌ ಗ್ಯಾಂಗ್‌!

Chinnaswamy

India-New Zeland Test: ಚಿನ್ನಸ್ವಾಮಿ ಮೈದಾನಕ್ಕೆ 25ನೇ ಟೆಸ್ಟ್‌ ಪಂದ್ಯದ ಗರಿಮೆ

HAL

Central Government: ಭದ್ರತಾ ಉದ್ಯಮದ ಪ್ರಧಾನ ಸಂಸ್ಥೆ ಎಚ್‌ಎಎಲ್‌ಗೆ “ಮಹಾರತ್ನ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-64: ಸಂಧ್ಯಾಕಾಲದಲ್ಲಿ ಶಂಖನಾದದ ಮಹತ್ವ

Udupi: ಗೀತಾರ್ಥ ಚಿಂತನೆ-64: ಸಂಧ್ಯಾಕಾಲದಲ್ಲಿ ಶಂಖನಾದದ ಮಹತ್ವ

accident2

Kurpadi Cross: ಕಾರು ಅಪಘಾತ; ಗಾಯ

Devadurga

Udupi: ಬಾಂಗ್ಲಾದೇಶದ ಅಕ್ರಮ ವಲಸಿಗರು ಪೊಲೀಸ್‌ ಕಸ್ಟಡಿಗೆ

By election: Liquor sale banned in Udupi district for two days

By election: ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ

Kambala: ನ. 27ಕ್ಕೆ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ

Kambala: ನ. 27ಕ್ಕೆ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ

MUST WATCH

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

ಹೊಸ ಸೇರ್ಪಡೆ

Cancer Rates: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Arrested: ವೃದ್ಧ ದಂಪತಿ ಮನೆಗೆ ನುಗ್ಗಿ ಒಡವೆ, ನಗದು ದರೋಡೆ; ಮೂವರ ಬಂಧನ

Arrested: ವೃದ್ಧ ದಂಪತಿ ಮನೆಗೆ ನುಗ್ಗಿ ಒಡವೆ, ನಗದು ದರೋಡೆ; ಮೂವರ ಬಂಧನ

Bengaluru: ಮದ್ಯದ ಬಾಟಲಿಯಿಂದ ಹೊಡೆದು ಸ್ನೇಹಿತನ ಹತ್ಯೆ

Bengaluru: ಮದ್ಯದ ಬಾಟಲಿಯಿಂದ ಹೊಡೆದು ಸ್ನೇಹಿತನ ಹತ್ಯೆ

Bengaluru: ಕಾಲೇಜಲ್ಲೇ ಮಹಿಳಾ ಪ್ರೊಫೆಸರ್‌ ಆತ್ಮಹತ್ಯೆಗೆ ಯತ್ನ

Bengaluru: ಕಾಲೇಜಲ್ಲೇ ಮಹಿಳಾ ಪ್ರೊಫೆಸರ್‌ ಆತ್ಮಹತ್ಯೆಗೆ ಯತ್ನ

Ramanagar: ಮಕ್ಕಳ ಕೊಲೆ; ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Ramanagar: ಮಕ್ಕಳ ಕೊಲೆ; ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.