ಮಳೆನೀರು ಕೊಯ್ಲು: ಇನ್ನಷ್ಟು ಜಾಗೃತಿ ಅಗತ್ಯ: ಮೇಯರ್ ಪ್ರೇಮಾನಂದ ಶೆಟ್ಟಿ
ಮಳೆನೀರು ಕೊಯ್ಲು ಕಾರ್ಯಾಗಾರ
Team Udayavani, May 31, 2022, 12:48 AM IST
ಮಂಗಳೂರು: ನಗರದಲ್ಲಿ ಜಲಸಾಕ್ಷರತೆಗೆ ಪೂರಕವಾಗಿ ಮಳೆನೀರು ಕೊಯ್ಲು ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ “ಉದಯವಾಣಿ’ ನೇತೃತ್ವದಲ್ಲಿ ಮಂಗಳೂರು ಮಹಾನಗರಪಾಲಿಕೆ ಸಹಯೋಗದೊಂದಿಗೆ ಮಳೆನೀರು ಕೊಯ್ಲು ಕಾರ್ಯಾಗಾರವನ್ನು ಸೋಮವಾರ ಏರ್ಪಡಿಸಲಾಯಿತು.
ಮೇಯರ್ ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮಳೆ ನೀರು ಕೊಯ್ಲುನಂತಹ ಜನಪರ ವಿಚಾರಗಳ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಾದ ಆವಶ್ಯಕತೆ ಇದ್ದು, ಅದನ್ನು ಸಾಧಿಸಲು “ಉದಯವಾಣಿ’ ನೆರವಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಮಂಗಳೂರು ವಿ.ವಿ. ಸಾಗರ ಭೂವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ| ಎಚ್. ಗಂಗಾಧರ ಭಟ್ ಅವರು ಮಳೆನೀರು ಕೊಯ್ಲು ಮಾಡಬೇಕಾದ ಆವಶ್ಯಕತೆಗಳು, ಅದರ ಹಲವು ವಿಧಾನಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಮುಖ್ಯವಾಗಿ ವಿಶಾಲ ಭೂಮಿ ಹೊಂದಿರುವವರು ಮಳೆನೀರು ಇಂಗಿಸುವ ಗುಂಡಿಗಳ ರಚನೆ ಮಾಡುವ ವಿಧಾನ, ನಗರದಲ್ಲಿ ಛಾವಣಿಯಿಂದ ಬರುವ ನೀರನ್ನು ಹಿಡಿದಿರಿಸಿ ಸಂಗ್ರಹ ಮಾಡುವ ವಿಚಾರಗಳನ್ನು ತಿಳಿಸಿದರು.
ಕೊಳವೆ ಬಾವಿಗಳನ್ನು ಕೊರೆಯಿಸುವಾಗ ಕೆಲವೊಮ್ಮೆ ನೀರು ಸಿಗದಿದ್ದರೂ ಅದರ ವ್ಯವಸ್ಥಿತ ಮರುಪೂರಣದಿಂದ ಅದಕ್ಕೆ ಮರುಜೀವ ಕೊಡಲು ಸಾಧ್ಯವಿದೆ. ಆದರೆ ಯಾವುದೇ ಕಾರಣಕ್ಕೂ ಬಾವಿ, ಕೊಳವೆ ಬಾವಿಗೆ ಕೆಸರು ನೀರನ್ನು ನೇರವಾಗಿ ಬಿಡಬಾರದು, ಸರಿಯಾಗಿ ಫಿಲ್ಟರಿಂಗ್ ಮಾಡಿಯೇ ಬಿಡಬೇಕು ಎಂದರು.
ಮಂಗಳೂರು ವಿ.ವಿ.ಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ|ನಾಗರತ್ನ ಹಾಜರಿದ್ದರು. “ಉದಯವಾಣಿ’ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ಸ್ವಾಗತಿಸಿ ಪ್ರಸ್ತಾವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.